" ಶ್ರದ್ಧೆ "
ಶ್ರದ್ಧಾಪೂರ್ವಕ ,ಭಕ್ತಿಪೂರ್ವಕ ಹೀಗೆ
ಈ ಶಬ್ದಗಳು ನಮಗೆ ಗೊತ್ತಿಲ್ಲದ0ತೆಯೇ
ಬಳಸುತ್ತೇವೆ. ಇವೆರಡೂ ಶಬ್ದಗಳು ವ್ಯವಹಾರಿಕ
ಭಾಗವಾದ ವಿಶ್ವಾಸವನ್ನು ಸೂಚಿಸುತ್ತವೆ
ಯಾದರೂ ಇವು ವಿಶ್ವಾಸ ಸೂಚಕಗಳಲ್ಲ.
ಮನುಷ್ಯ ತನ್ನ ಕಾರ್ಯಗಳಲ್ಲಿ ತನು ,ಮನ
ಧನದಿ0ದ ,ಧೃಡಮನಸ್ಸಿನಿ0ದ ಕಾರ್ಯಗತ
ಮಾಡಿ ಯಾವುದೇ ಫಲಾಪೇಕ್ಷೆಯಿಲ್ಲದೇ
ಪರಿಪೂರ್ಣಗೊಳಿಸಿ ,ಜನಮನಗೆದ್ದು ,ವಿಶ್ವಾಸ
ಗೆದ್ದು ಮಾಡುವ ಕಾರ್ಯಗಳು ಶ್ರದ್ದಾ ಭಕ್ತಿ
ಪೂರ್ವಕ ವಾಗಿವೆಯೆ0ದು ಕರೆಯಲ್ಪಡುತ್ತವೆ.
ಹಿ0ದೆ ಋಷಿ -ಮುನಿಗಳ ಕಾಲದಲ್ಲಿ ,ಕುಟೀರ
ಶಿಕ್ಷಣ ವ್ಯವಸ್ಥೆಯಲ್ಲಿ ತನ್ನ ಶಿಷ್ಯ0ದಿರು ಶ್ರದ್ದಾ
ಭಕ್ತಿಪೂರ್ವಕ ತನ್ನ ಗುರುವಿನಲ್ಲಿ ನಿಷ್ಟೆಯನ್ನು
ಹೊ0ದಿರಬೇಕೆ0ದು ಆಪೇಕ್ಷಿಸಿ ,ಅ0ತಹ
ಶಿಷ್ಯ0ದಿರಿಗೆ ತನ್ನ ಜೀವಮಾನದ ಸಾಧನೆ
ಯನ್ನು ಧಾರೆಯೆರೆದು --'ಲೋಕ ಕಲ್ಯಾಣ
ಕಾರ್ಯ ಸಾಧಿಸು 'ಅ0ತಾ ಉಪದೇಶಿಸಿ ,
ಆಶೀರ್ವದಿಸುತ್ತಿದ್ದರು.
ಶ್ರದ್ದಾ ಭಕ್ತಿ ನೂರಕ್ಕೆ ನೂರರಷ್ಟು ಭಕ್ತಿ
ಪ್ರಧಾನ ಸೂಚಕ ಶಬ್ದವಾದರೂ ,ದೇವಾನು
ದೇವತೆ ,ಧಾರ್ಮಿಕ ,ಉನ್ನತ ರಾಜಕಾರ್ಯಗಳಲ್ಲಿ
ಈ ಶಬ್ದಗಳನ್ನು ಹೆಚ್ಚಾಗಿ ಪ್ರಯೋಗಿಸಿದ್ದು ಕಾಣ
ಬರುತ್ತದೆ.ಇ0ತಹ ಕಾರ್ಯಗಳಲ್ಲಿಯೇ ತಮ್ಮ
ಲ್ಲಿರುವ ಶ್ರದ್ದಾ ಭಕ್ತಿಯಿ0ದ ದೇವಾನು ದೇವತೆ
ರಾಜಾಧಿ ರಾಜರುಗಳ ಕೃಪಾಕಟಾಕ್ಷೆಗೆ ಪಾತ್ರ
ರಾಗುತ್ತಿದ್ದರು .ಇದರಲ್ಲಿಯೇ ದೇವತ್ವವನ್ನು
ಕಾಣುತ್ತಿದ್ದರು.
ಬದಲಾದ ಕಾಲಮಾನಕ್ಕನುಗುಣವಾಗಿ ಈಗ
ಶ್ರದ್ದೆ ,ಭಕ್ತಿ ಪವಾಡಗಳು ಇಲ್ಲ. ಶ್ರದ್ದ ಭಕ್ತಿಗಳು
ವ್ಯಕ್ತಿಯ ಅನುಕರಣೆಯ ಭಾಗವಾಗಿ ಶುದ್ಧ
ವ್ಯಯಕ್ತಿಕ ಅಭ್ಯುದಯದ ಸೂಚಕಗಳಾಗಿ
ಮಾರ್ಪಟ್ಟಿವೆ. ಭಕ್ತಿಗೆ ಮೀಸಲಾಗಿರುವ ಶ್ರದ್ದ
ಭಕ್ತಿ ಪದಗಳು ಈಗ ರಾಜಕೀಯ ವಲಸೆ
ಪದಗಳಾಗಿವೆ. ಇದರ ಪರಿಣಾಮ ಅನುಭವಿಸಿ
ದವರಿಗೇ ಗೊತ್ತು.
No comments:
Post a Comment