"ಕನ್ನಡ ನಾಡು ".
--------------------
ಈ ನಮ್ಮ ನಾಡು
ಚೆಲುವ ಕನ್ನಡ ನಾಡು . ||
ದೇಶ -ವಿದೇಶಿಯರೆಲ್ಲಾ
ಕರೆಯುತಿಹರು
"ಬೆ0ಗಳೂರು "
ಚೆಲುವ ಹಸಿರು ಕನ್ನಡ ನಾಡು...1
ಕನ್ನಡ ಕಲೆಯ ನಾಡು
ಕನ್ನಡ ಹೆಮ್ಮೆಯ ಬೀಡು
ನೋಡೋಣ ಬನ್ನಿ
"ಮ್ಯೆಸೂರು ದಸರಾ "
ಚೆಲುವ ನಾಡು ಕನ್ನಡ ನಾಡು. ..2
ಸಿರಿಗ0ಧದ ನಾಡು
ಬನಸಿರಿಯ ನಾಡು.
ಗುಡ್ಡ ಬೆಟ್ಟಗಳ ನಾಡು
ನೋಡೋಣ ಬನ್ನಿ
"ಬದಾಮಿಯ " ಭುವದ ಭುವನೇಶ್ವರಿಯ
ಬನಶ0ಕರಿಯ ನಾಡು ಶ0ಕರಾಯಣಿಯನಾಡು....3
ಕನ್ನಡ ಸಿರಿಯ
ಶಿಲಾ ವ್ಯೆಭವ ನೋಡಬನ್ನಿ
ಪಟ್ಟದಕಲ್ಲು ,ಐಹೊಳಿ ,ವಿಜಯಪುರಕ್ಕೆ
ಕನ್ನಡ ನಾಡು
ಚೆಲುವ ಕನ್ನಡ ನಾಡು ನಮ್ಮ ನಾಡು...4
ಜೋಗ ,ಶರಾವತಿ ಜಲಪಾತಗಳ ನಾಡು
ಕನ್ನಡನಾಡು ಚೆಲುವ ಕನ್ನಡ ನಾಡು
ಕಾವೇರಿ ,ಕೃಷ್ಣ , ತು0ಗ-ಭದ್ರೆಯರ
ಜಲಸಿರಿಗಳ ನಾಡು
ಕನ್ನಡ ನಾಡು ಚೆಲುವ ಕನ್ನಡ ನಾಡು..5
ವೀರಪುಲಿಕೇಶಿ ,ಕೃಷ್ಣದೇವರಾಯ
ಚೆನ್ನಮ್ಮ ಸ0ಗೊಳ್ಳಿ ರಾಯಣ್ಣ
ಜನಿಸಿದ ವೀರ ಜನ್ಮಭೂಮಿ ನೋಡಬನ್ನಿ
ಕನ್ನಡ ನಾಡು ಚೆಲುವ ಕನ್ನಡ ನಾಡು..6
ಉಡುಪಿಯ ಶ್ರೀ ಕೃಷ್ಣ
ಧರ್ಮಸ್ಥಳದ ಮ0ಜುನಾಥ
ಮ್ಯೆಸೂರು ಚಾಮು0ಡೇಶ್ವರಿ
ಹ0ಪಿಯ ವಿರುಪಾಕ್ಷ ದೇವಾಲಯ
ಪುಣ್ಯ ಕ್ಷೇತ್ರಗಳನ್ನು ನೋಡಬನ್ನಿ
ಬಸವಣ್ಣ ,ಅಕ್ಕಮಹದೇವಿ
ಅಲ್ಲಮಪ್ರಭು ,ಸಿದ್ಧರಾಮೇಶ್ವರ ಸರ್ವಜ್ನ
ಲೋಕ ದಾರ್ಶನಿಕರ ನಾಡಿದು ನೋಡಬನ್ನಿ
ನಮ್ಮಕನ್ನಡ ನಾಡು ಚೆಲುವ ನಾಡು..7
ಕನ್ನಡ ಸ0ತರ ವಚನ ಸಾಹಿತ್ಯ
ನುಡಿಮುತ್ತುಗಳ ಸ0ಗಮ
ನೊಡೋಣ ಬನ್ನಿ ಚಿತ್ರದುರ್ಗಕ್ಕೆ
ಕನ್ನಡ ನಾಡು ನಮ್ಮ ಚೆಲುವ ನಾಡು...8