Thursday, October 5, 2017


"  ಉಗ್ರರ ಹತ್ಯಾ ಕಾ0ಡ "

   ---   ---   ---  -----   ---
    ಗು0ಡಿನ ಸುರಿಮಳೆ ,ಉಗ್ರರ ಹತ್ಯಾಕಾ0ಡ,
ಅಟ್ಟಹಾಸ ಪತ್ರಿಕೆಗಳ ಮುಖಪುಟದಲ್ಲಿ
ರಾರಾಜಿಸುತ್ತಿವೆ. ಈ ಸುದ್ಧಿಗಳು ಮುಖಪುಟದ
ಅಗ್ರಭಾಗವಾಗಿವೆ.

    ಶಾ0ತಿಯ ನಾಡಿನಲ್ಲಿ ಅಶಾ0ತಿಯ ಪರ್ವ
ಹುಚ್ಚುಚ್ಚಾರವಾಗಿ ಕಲೆಯ ಗ0ಧವಿಲ್ಲದೇ
ನಾಟ್ಯವಾಡುತ್ತಿದೆ. ಇದನ್ನು ಮಹಾಕಾಳಿ
ಅರಿತಿಲ್ಲವೆ0ದು ಯಾರಾದರೂ ತಿಳಿದಿದ್ದರೆ
ಅವರು ಅಲ್ಪ ಮತಿಗಳಷ್ಟೆ.

ಮಹಾಕಾಳಿ ರೌದ್ರಾವತಾರ ತಾಳಿ ,ಯುದ್ಧ
ರ0ಗಕ್ಕೆ ಕಾಲಿಟ್ಟರೆ ಧೂಳಿಪಟ ಕಟ್ಟಿಟ್ಟ ಬುತ್ತಿ.
ಶಾ0ತಿಯ -ಸಹನತೆಗೆ ಅಶಾ0ತಿಯ ಜ್ವಾಲೆಯ
ಕಿಚ್ಚನ್ನು  ಹಚ್ಚಲು ಪ್ರಯತ್ನಿಸುವವರು
ತಾವು ಆಡುತ್ತಿರುವ ಚದುರ0ಗದಾಟದ ಚಕ್ರವ್ಹೂಹದ
ದಾಳಿಗೆ ಮೊದಲ ಬಲಿ ಆಟ ಪ್ರಾರ0ಭಿಸಿದವರೆ.
ಇದಕ್ಕೆ ನಿದರ್ಶನಗಳು ಸಾಕಷ್ಟಿವೆ.ಅ0ದರೆ
ಕೆಟ್ಟ ಸ0ಕಲ್ಪಗಳನ್ನು ಮು0ದೆ ಮಾಡಿ ಹೋರಾ
ಡುವವರಿಗೆ ಇದು ಅನ್ವಯಿಸುತ್ತೆ.

ಜಗತ್ತೂ ಯವಾಗಲೂ ಒಳ್ಳೆಯ ಸ0ಕಲ್ಪಕ್ಕೆ
ಜ್ಯೆಕಾರ ನೀಡಿದೆ.ಇತಿಹಾಸ ಹಾಗೆ ಹೇಳುತ್ತೆ.
ಹಿ0ಸೆ ತ್ಯಜಿಸಿದಷ್ಟು ಶಾ0ತಿ ಆಯುಷ್ಯ
ಮರೆಯುತ್ತೆ.

No comments: