Saturday, October 7, 2017

  "  ದಸರಾ  ಹಬ್ಬ   "
              -----------------
  ಆಶ್ವೀಜ ಶುಕ್ಲ ಪಕ್ಷ ದಶಮಿ -ವಿಜಯದಶಮಿ
ಆಚರಿಸುವ ಹಬ್ಬವೇ 'ದಸರಾ '.

 
    ದುಷ್ಟ ಶಕ್ತಿಗಳ ಸ0ಹಾರವೇ  ನವರಾತ್ರಿ
ಉತ್ಸವದ ಉದ್ದೇಶ.ದುಷ್ಟ ಶಕ್ತಿಗಳ ಮೇಲೆ
ಸಾಧಿಸಿದ ವಿಜಯ - 'ವಿಜಯ ದಶಮಿ '.
  ದೇವಸ್ಥಾನಗಳಲ್ಲಿ ಶಕ್ತಿ ದೇವತೆಯ ಅನೇಕ
ರೂಪಗಳ ಘಟ್ಟ ಹಾಕುವ ಮೂಲಕ -ಜನರಿಗೆ
ಸ0ದೇಶ ನೀಡುವದೇ ಈ ಹಬ್ಬದ ಹಿನ್ನಲೆಯಾ
ಗಿದೆ.

 
  ಕಲಾಪರ0ಪರೆ ,ನೃತ್ಯ ,ಸ0ಗೀತ ,ಶಿಲ್ಪಕಲೆ
ಚಿತ್ರಕಲೆ ,ಸಾಹಿತ್ಯ ,- ಇವೆಲ್ಲವೂ ಮನುಷ್ಯನ
ನಾಗರಿಕತೆಯ ಪ್ರತಿಬಿ0ಬಗಳು.ಈ ಪ್ರತಿಬಿ0ಬ
ಗಳು ಸ್ಮಾರಕಗಳಾಗಿ ಮನುಷ್ಯನನ್ನು ಆಗಾಗ್ಗೆ
ಎಚ್ಚರಿಸುವ ಸಲುವಾಗಿ ವಿಜಯದಶಮಿಯೆ0ದು
ಲಲಿತಕಲಾ ಪ್ರಕಾರದ ವಿವಿಧ ಕಲೆಗಳನ್ನು
ಪ್ರದರ್ಶಿಸುತ್ತಾರೆ.ಈ ಮೂಲಕ ಮನುಷ್ಯನಲ್ಲಿ
ನವಚ್ಯೆತನ್ಯ ,ನವಶಕ್ತಿ ತು0ಬುವ,ದೇಶಭಕ್ತಿ
ಭಿತ್ತುವ ,ಸನ್ಮಾರ್ಗದತ್ತ ನಡೆಯಲು ಭಿತ್ತಿಚಿತ್ರ
ಗಳ ಮೂಲಕ ನೆನಪಿಗೆ ತ0ದು  ಮು0ದಿನ
ಸರಿ ಮಾರ್ಗದಲ್ಲಿ ನಡೆಯುವ0ತೆ ಪ್ರಜೆಗಳಿಗೆ
ಮಾರ್ಗದರ್ಶನ ಮಾಡುವ ಈ ಹಬ್ಬ --  ಸಾ0ಸ
ಕೃತಿಕ, ಧಾರ್ಮಿಕ ಹಬ್ಬಗಳಲ್ಲಿಯೇ ದೊಡ್ಡ
ಹಬ್ಬವಾಗಿದೆ. ಇದರ ಹಿರಿಮೆ-ಗರಿಮೆ ಅರಿತಷ್ಟು
ಹಬ್ಬದ ವ್ಯೆಭವ ಕಣ್ಣಿಗೆ ಕಟ್ಟಿದ0ತಾಗುತ್ತದೆ.
ಮಸುಕ ಆವರಿಸಿದ ಬುದ್ಧಿಗೆ ಬೆಳಕನ್ನು ನೀಡುವ
ಹಬ್ಬ 'ದಸರೆ '.

 
    ಭೂತದ ಗತವ್ಯೆಭವದೊ0ದಿಗೆ -ಇ0ದಿನ
--ಮು0ದಿನ - ಪ್ರಜೆಗಳ ಕಲ್ಯಾಣಕ್ಕಾಗಿ ಮಾಡ
ಬೇಕಾದ ಕಾರ್ಯಸೂಚಿ ಏನು - ಎ0ಬುದನ್ನು
ವಿಚಾರಗೋಷ್ಟಿ,ಕವಿಗೋಷ್ಟಿ,ಸ0ವಾದ,ಗಳ
ಮೂಲಕ ಅಭಿವ್ಯಕ್ತಪಡಿಸುವ ಈ ಹಬ್ಬ ಪ್ರಜಾ
ಪ್ರಭುತ್ವದ - ಸ0ವಿಧಾನ ಆಶಯಗಳನ್ನು
ನೆನಪಿಸುವದರೊ0ದಿಗೆ ,ಎತ್ತಿ ಹಿಡಿಯುವ
ಮಹತ್ತರವಾದ ಕಾರ್ಯವು ಈ ಹಬ್ಬ ಮಾಡು
ತ್ತಿದೆ.ಈ ಹಬ್ಬವು ಮನಸ್ಸಿಗೆ ಜ್ನಾನ ಸುಧೆಯನ್ನೇ
ಉಣಬಡಿಸುತ್ತದೆ.

 
  ಇ0ತಹ ಮಹಾನ್ ಹಬ್ಬವನ್ನು ಆಚರಿಸಿ,
ಬ0ಧು-ಬಳಗ,ಆಪ್ತರಿಗೆ ,ಹಿರಿಯರಿಗೆ ,ಗುರುಗಳಿಗೆ
' ಬನ್ನಿ 'ಕೊಡುವ ಮೂಲಕ - "ಸ್ನೇಹ ,ಬಾ0ಧವ್ಯ
ಒಗ್ಗಟ್ಟು,ನಾವೆಲ್ಲರೂ ಒ0ದೇ  ಭಾರತೀಯರು"
ಎನ್ನುವ ಸ0ದೇಶವು ಇದರಲ್ಲಿದೆ ಎ0ಬುದನ್ನು
ಮನಗೊ0ಡು -ಬನ್ನಿಯನ್ನು ಆತ್ಮೀಯವಾಗಿ
ಹ0ಚಿಕೊಳ್ಳೋಣ.ಆ ಕಾರಣಕ್ಕಾಗಿಯೇ ನಮ್ಮ
ಹಿರಿಯರು "ಬನ್ನಿ ಬ0ಗಾರವಾಗಲಿ ".ನಾವೆ
ಲ್ಲರೂ ಬ0ಗಾರದ0ತೆ ಇರೋಣ " ಎ0ದು
ಹಾರೆಯಿಸಿದ್ದು.

 
ಕಾವೇರಿ ನಾಡು ಸೇರಿದ0ತೆ ಎಲ್ಲಾ ಕಡೆ ನಡೆಯುವ ಈ ದಸರಾ
ವ್ಯೆಭವ -ಕಾವೇರಿ  ಕೃಷ್ಣೆ,ತು0ಗೆಭದ್ರೆಯರು ಸ0ತುಷ್ಟರಾಗಿ 
ಮ್ಯೆ ದು0ಬಿ ಹರಿಯಲಿ.
ಸರ್ವರಿಗೂ ಕಲ್ಯಾಣ ಮಾಡಲಿ.
--  ----  ---   ------ ----  ---  --- -
ಸರ್ವರಿಗೂ ದಸರೆಯ ಶುಭಾಷಯಗಳು.


No comments: