Tuesday, October 10, 2017

"  ತಾನೊ0ದು ಬಗೆದರೆ
      ದ್ಯೆವ ಒ0ದು ಬಗೆಯಿತು   "

 
    ಇದು ಮಧ್ಯಮ ವರ್ಗದವರಲ್ಲಿ ,ಮೇಲ್ವರ್ಗದವ
ರಲ್ಲಿ ಈ ಬಗೆಯ ಸ್ವಾರಸ್ಯಕರವಾದ ಘಟನೆಗಳು
ಜರಗುತ್ತಲೇ ಇರುತ್ತವೆ. ಮಿತಿ ಮೀರಿದ ಆಪೇಕ್ಷೆ
ಹಾಗು ಆಕಾ0ಕ್ಷೆ ಗಳೇ  -ಇದಕ್ಕೆ ಮೂಲ ಕಾರಣ
ಗಳು.ಇವೆರಡು ವರ್ಗದವರು ಹಸಿವಿನಿ0ದ
ಬಳಲುವದಿಲ್ಲ.ಮಧ್ಯಮವರ್ಗದವರಲ್ಲಿ ಎಷ್ಟು
ಬೇಕು ಅಷ್ಟು ಮೂಲಭೂತ ಸೌಕರ್ಯಗಳು
ಇರುತ್ತವೆ.ಮೇಲ್ವರ್ಗದವರಲ್ಲಿ ಎಲ್ಲಾ ಇರುತ್ತವೆ.
ಪ್ರಪ0ಚದಲ್ಲಿ ಬರುವ ಎಲ್ಲಾ ಆಧುನಿಕ ಸೌಕರ್ಯ
ಗಳು ತಮ್ಮದಾಗಬೇಕೆ0ಬ ಉತ್ಕಟ ಆಪೇಕ್ಷೆ
ಇವರದು.

    ಒ0ದು ಮಟ್ಟದಲ್ಲಿ ಇವರು ಮಾಡುವ
ಲೆಕ್ಕಚಾರಗಳು ಚಾಣಕ್ಯ -ಭಾಸ್ಕರಾಚರ್ಯರ
ಲೆಕ್ಕ ಮತ್ತು ಚಾಣಕ್ಷಕ್ಕಿ0ತಲೂ  ಹೆಚ್ಚು ಪ್ರಭಾವ
ಶಾಲಿಯಾಗಿರುತ್ತವೆ." ವಿಜ್ರ0ಭಣೆ ,ಗೆಲವು ,
ಜ್ಯೆಕಾರ , ಗಳು ಇವರನ್ನು ಶಿಖರಕ್ಕೇರಿಸಿ ,
ಒಮ್ಮಿ0ದೊಮ್ಮೆಲೆ ಹಿಮಪಾತದ0ತೆ ಕುಸಿದು
ಬೀಳುತ್ತವೆ." ಅವರು ಕಟ್ಟಿದ ಗೋಪುರಗಳಿಗೆ
ಭದ್ರವಾದ ತಳಪಾಯವೇ ಇರುವದಿಲ್ಲ.ಕಲ್ಲು
ಮಣ್ಣು ,ನೀರು ತಳಪಾಯಕ್ಕೆ ಬೇಕಾಗುವ ಮೂಲ
ಭೂತ ವಸ್ತುಗಳು.ಪ್ರಸ್ತುತ ಇಲ್ಲಿ ತಳಪಾಯವೆ0
ದರೆ -ಸುವಿಚಾರ ,ಸದ್ಗುಣ ,ತ್ಯಾಗಮನೋಭಾ
ವನೆ,ಸದಾಚಾರ , ಸದ್ವಿನಿಯೋಗ ಮು0ತಾದ
ಗುಣದ್ರವ್ಯಗಳೇ ಇಲ್ಲಿ ತಳಪಾಯಗಳು.ಎಲ್ಲಿ
ಈ ಗುಣಗಳು ಸಮೃದ್ಧ ವಾಗಿರುತ್ತವೆಯೋ ,
ಅವರು ಮುಟ್ಟಿದ್ದೆಲ್ಲ ಚಿನ್ನ -ರನ್ನ ವಾಗುತ್ತ
ಹೋಗುತ್ತದೆ.ಇವರ ಸದಾಚಾರಕ್ಕೆ ಶತೃಗಳು
ಹಿಮ್ಮೆಟ್ಟುತ್ತಾರೆ.ಇವರ ಮು0ದೆ ಮಾತನಾಡು
ವಷ್ಟು ಎದೆಗಾರಿಕೆ ಇರುವದಿಲ್ಲ.

   ಕೆಳ ವರ್ಗದವರಲ್ಲಿ ಯಾವೊ0ದು ಅಭಿವೃದ್ಧಿ
ತೋರುವ0ತಹ ಕನಸುಗಳನ್ನು ಕಟ್ಟಿಕೊ0ಡಿ
ರುವದಿಲ್ಲ.ಇವತ್ತಿನ ದಿನದ ' ಎರಡು ಒಪ್ಪತ್ತಿನ '
ಊಟ ತನ್ನ ಮತ್ತು ತನ್ನ ಸ0ಸಾರದವರಿಗೆ
ಸಿಕ್ಕರೆ ಸಾಕು.ಇದಕ್ಕಾಗಿ ಕೆಲಸ ಸಿಕ್ಕರೆ ಸಾಕು..
ಸ0ತೋಷವೇ -ಸ0ತೋಷ.ಕೌಟ0ಬಿಕ
ಜವಾಬ್ದಾರಿಗಳನ್ನು ಎಷ್ಟೇ ಕಷ್ಟ ಬ0ದರೂ
ನಿರ್ವಹಿಸುತ್ತಾರೆ.

"ತಾನೊ0ದು ಬಗೆದರೆ ದ್ಯೆವ ಒ0ದು ಬಗೆಯಿತು
---ಈ ಗಾದೆ  ಮೇಲ್ವರ್ಗದವರಲ್ಲಿ ಆಶಾಗೋಪುರ
ವಾದರೆ ,ಕೆಳವರ್ಗದವರಲ್ಲಿ ಆದರ್ಶ.

No comments: