Wednesday, October 11, 2017





    "    ಸತ್ಯ  ಹಾಗು  ಸ0ಶೋಧನೆ "
       ---    ---   ---   ----     --- -----
        ಸ0ಶೋಧನಾತ್ಮಕ    ಸತ್ಯಗಳು
ಹೊರಬರಲಿ.ಸ್ವಾಗತ. ಆದರೆ ಈ ಸತ್ಯಗಳು
ಈಗಿನ ಲೋಕ ವ್ಯವಹಾರಗಳಿಗೆ ,ಇತರೆ
ಚಿ0ತನೆಗಳಿಗೆ ಪೂರಕವಾಗಿರಬೇಕು.
    ಸತ್ಯದ -  ದನಿ ನಮ್ಮಲ್ಲಿ ಉಡುಗಿರುವ
ಚ್ಯೆತನ್ಯವನ್ನು ಬಡಿದೆಬ್ಬಿಸಬೇಕು. ಅದರ ಬದಲು
ಚ್ಯೆತನ್ಯ ಹೀನನಾಗಿ ಮಾಡಲು ಹೊರಟರೆ
ಅ0ತಹ ಸತ್ಯಗಳಿ0ದ ಚವರ್ಣ -ಚರ್ವಿತ -
--  ಜಿಜ್ನಾಸಗಳೇ ಹುಟ್ಟುತ್ತವೆ.

      ಜಿಜ್ನಾಸೆಗಳು ಹುಟ್ಟಲಿ.ಆದರೆ ಜಿಜ್ನಾಸೆಗಳು
ಸಾಗುವ ಮಾರ್ಗ ಮನುಷ್ಯನ ಮನಸ್ಸನ್ನು
ಕೆರಳಿಸುವ0ತಾಗಬಾರದು. ಜಿಜ್ನಾಸೆಗಳು
ಬರಡಾದ ಭೂಮಿಗೆ ಹನಿ - ಹನಿಯಾಗಿ ನೀರು
ಉಣಿಸುವ0ತೆ ಇರಬೇಕು.

   ನಾವು ನೂರೆ0ಟು ಪದವಿ ಪಡೆದರೇನು..
   ದುಡಿಯುವ ಸ್ಪ0ದನೆ ಇರದಿದ್ದರೇನು ಫಲ..?
  "ಕೋಟಿ - ಸ0ಪತ್ತಿದ್ದರೇನು....ಅದರ ಒ0ದು
ಚುಟಿಕೆ ಅರ್ಹರಿಗೆ ದಾನವಿತ್ತರೆ  - ನೂರು ಪುಣ್ಯ
ಕ್ಷೇತ್ರಗಳ ಫಲ ಬರುತ್ತದೆ - "ಹಿರಿಯರು ಹೇಳುವ
ಮಾತು ಸ್ಮರಣೆಗೆ ಬರುತ್ತದೆ.

   ಯಾವ ಸತ್ಯದಿ0ದ  ಜ್ನಾನದ ಬೋಧಿ ವೃಕ್ಷ
ವಾಗುತ್ತೋ ,ಕರ್ಮದ ಫಲವಾಗುತ್ತೋ  ,
ಸ0ಯ್ಜೊಜನೆಯಾಗುತ್ತೋ ಅ0ತಹ ಸತ್ಯಗಳು
 ಪುರಸ್ಕರಿಸೋಣ. ಈಗಾಗಲೇ ಸಾಕಷ್ಟು ಸ0ಭ0ಧಗಳ  ಮೊನಚು ಕಡಿಮೆಯಾಗುತ್ತಿದೆ. .
ನಾಗರೀಕತೆಯ ಹೆಸರಿನಲ್ಲಿ  ಇನ್ನಷ್ಟು
 ಸ0ಭ0ಧಗಳ ಬೆಸುಗೆ ಕಡಿಮೆಯಾಗುವದು
ಬೇಡ.ಇದು ನನ್ನ ಅಭಿಪ್ರಾಯ.

No comments: