" ದೀಪಾವಳಿ "
---- -----------
ದೀಪಗಳ ಹಬ್ಬವೇ ದೀಪಾವಳಿ. ದೀಪಾವಳಿಗೆ
8-10 ದಿವಸ ಮು0ಚೆಯೇ ಮನೆ ಎಲ್ಲಾ ಸಾರಿಸಿ ,ಸುಣ್ಣ -ಬಣ್ಣ ಹಚ್ಚುವ ಹಬ್ಬ ದೀಪಾವಳಿ.
ದೀಪಾವಳಿ ಹೊಸಬಟ್ಟೆ ,ಸಿಹಿಊಟ , ಪಟಾಕಿ
ಹಾರಿಸುವದು,ಸುರ-ಸುರಕಡ್ಡಿ ಸುಡುವದು,
ಪಣತಿಗಳಲ್ಲಿ ದೀಪ ಹಚ್ಚುವದು -- ಚಿಕ್ಕಮಕ್ಕಳಲ್ಲಿ
ಹೊಸ ಚ್ಯೆತನ್ಯ ,ಹುರುಪು ,ಸ0ತೋಷ ತರುವ
ಹಬ್ಬ ದೀಪಾವಳಿ.
ವಾಸಿಸುವ ಮನೆಯಲ್ಲಿ ಕಸ ಗೂಡಿಸದೇ
ಧೂಳಿನ ರಾಶಿ ಇರುತ್ತದೆ.ಈ ಧೂಳಿನ ರಾಶಿಯು
ಆರೋಗ್ಯಕ್ಕೆ ಒಳ್ಳೆಯದಲ್ಲ.ಬೆಳವಣಿಗೆಗೆ ಒಳ್ಳೆಯ
ದಲ್ಲ.ವರ್ಷಕ್ಕೊಮ್ಮೆಯಾದರೂ ಶುಚಿಗೊಳಿಸಿ
ಧೂಳಿಕಣಗಳಿ0ದ ಮುಕ್ತಗೊಳಿಸಿ -ದೀಪವನ್ನು
ಹಚ್ಚುವದನ್ನು ನಮ್ಮ ಹಿರಿಯರು ಸ0ಪ್ರದಾಯ
ವಾಗಿ ಆಚರಿಸಿಕೊ0ಡು ಬ0ದಿದ್ದಾರೆ. ಜಡತ್ವ,
ಜ0ಜಾಟಗಳಿ0ದ ಕೂಡಿದ ಈ ಜೀವನಕ್ಕೆ
ಆಸಕ್ತಿ,ಉತ್ಸಾಹ ಮೂಡಿಸುವ ಹಿನ್ನಲೆಯೇ
ದೀಪಾವಳಿಯ ಆಚರಣೆ. ದಕ್ಷಿಣ ಭಾರತದಲ್ಲಿ
ದೀಪಾವಳಿ ಹಬ್ಬವನ್ನು ಆಶ್ವೀಜ ಕೃಷ್ಣ ಪಕ್ಷದ
ತ್ರಯೋದಶಿಯಿ0ದ ಹಿಡಿದು ದೀಪಾವಳಿ
ಅಮವಾಸ್ಯೆ ಹಾಗು ಅದರ ಮುರುದಿನ ಬಲಿ
ಪಾಡ್ಯಮಿ-ಹೀಗೆ ಒಟ್ಟು ನಾಲ್ಕು ದಿನಗಳವರೆಗೆ
ಈ ಹಬ್ಬವನ್ನು ಆಚರಿಸುತ್ತಾರೆ.
ಅಸತೋಮಾ ಸದ್ಗಮಯ
ತಮಸೋಮ ಜ್ಯೋತಿರ್ಗಮಯ
ಮೃತ್ಯೋರ್ಮ ಅಮೃತ0ಗಮಯ
ಓ0 ಶಾ0ತಿ,ಶಾ0ತಿ ,ಶಾ0ತಿ..
ಅಜ್ನಾನವನ್ನು ಕಳೆದು ಸುಜ್ನಾನದ ಜ್ಯೋತಿ
ಯನ್ನು ಬೆಳಗುವ ಈ ದೀಪಾವಳಿ ಹಬ್ಬಕ್ಕೆ
'ಕೌಮಿದಿ' ಹಬ್ಬವೆ0ತಲೂ ಕರೆಯುತ್ತಾರೆ.
ಎಲ್ಲರಿಗೂ ಸ0ತೋಷ ಕೊಡುವ ,ಭಾ0ಧವ್ಯ
ಗಳನ್ನು ಬೆಸೆಯುವ,ಉತ್ಸಾಹವನ್ನು ಇಮ್ಮಡಿ
ಸುವ,ರಾಗ -ದ್ವೇಷ ಮರೆತು ,ಸೌಹಾರ್ಧ ,
ಸ0ಪ್ರೀತಿಯನ್ನು ಹೊರಸೂಸುವ ಈ ಹಬ್ಬವನ್ನು
ಬಡವರಿ0ದ ಹಿಡಿದು ಎಲ್ಲರೂ ಸಡಗರದಿ0ದ
ಆಚರಿಸುತ್ತಾರೆ.
ದೀಪಾವಳಿ ಅಮವಾಸ್ಯೆಯೆ0ದು ಲಕ್ಷ್ಮೀದೇವಿಯ
ಪೂಜೆಯನ್ನು ಸ0ಭ್ರಮದಿ0ದ ಆಚರಿಸುತ್ತಾರೆ.
ವ್ಯಾಪಾರಸ್ಥರಾದರೆ ಅವರ ಅ0ಗಡಿಯಲ್ಲಿ
ದುಡಿಯುವ ಎಲ್ಲಾ ಕಾರ್ಮಿಕರಿಗೂ ಹೊಸ
ಬಟ್ಟೆಗಳನ್ನು ಕೊಡುವದು ,ಅವರ ವೇತನ
ಇತ್ಯಾದಿಗಳನ್ನು ಪರಿಷ್ಕರಿಸುವದು ರೂಢಿ.
ಪೂಜೆಗೆ ಬ0ದ ಎಲ್ಲರಿಗೂ ಬೆ0ಡು,ಬೆತ್ತಾಸ
ಚೂರಮರಿ ಕೊಡುತ್ತಾರೆ.ಆದಿನ ರಾತ್ರಿಯಿ0ದ
ಬೆಳಗಿನವರೆಗೆ ಲಕ್ಷ್ಮೀದೇವಿಯ ಮು0ದೆ ಹಚ್ಚಿದ
ಕಾಲುದೀಪ (ಸಮೆ) ಗಳನ್ನು ಬೆಳಗಿನವರೆಗೆ
ತ್ಯೆಲವನ್ನು ಹಾಕುತ್ತಾ ದೀಪಗಳನ್ನು ಉರಿಸು
ತ್ತಾರೆ.ಲಕ್ಷ್ಮೀದೇವಿಯು ಇದರಿ0ದ ಸ0ತುಷ್ಟ
ಳಾಗಿ ಸ0ಪತ್ತು ,ವ್ಯಾಪಾರ ಅಭಿವೃದ್ಧಿ,ಸೌಖ್ಯ
ನೀಡುತ್ತಾಳೆವೆ0ಬುದು ನ0ಬಿಕೆ. ದೊಡ್ಡ ದೊಡ್ಡ
ವ್ಯಾಪಾರಸ್ಥರು ದೀಪಾವಳಿ ಹಬ್ಬದ ಆಮ0ತ್ರಣ
ಪತ್ರ ನೀಡಿ ಹಬ್ಬಕ್ಕೆ ಅಹ್ವಾನಿಸುತ್ತಾರೆ. ಆದರೆ ಈಗ ಈ ಪದ್ಧತಿ ಕಡಿಮೆ.ಈಗ ವ್ಯಾಟ್ಸಫ್
ದಿ0ದ ಸ0ದೇಶ ಕಳಿಸುತ್ತಾರೆ.
ಈ ದಿನವೇ ವಿಷ್ಣು -ಲಕ್ಷ್ಮೀದೇವಿಯನ್ನು ವಿವಾಹ
ವಾಗಿದ್ದು ಎ0ದು ಪುರಾಣಗಳಲ್ಲಿ ಉಲ್ಲೇಖಿಸಿದೆ.
--' ----' ----- ----- ---- ----- ---
ಸರ್ವರಿಗೂ ದೀಪಾವಳಿಯ ಶುಭಾಷಯಗಳು
---- -------- ----- ---- ---- ----
---- -----------
ದೀಪಗಳ ಹಬ್ಬವೇ ದೀಪಾವಳಿ. ದೀಪಾವಳಿಗೆ
8-10 ದಿವಸ ಮು0ಚೆಯೇ ಮನೆ ಎಲ್ಲಾ ಸಾರಿಸಿ ,ಸುಣ್ಣ -ಬಣ್ಣ ಹಚ್ಚುವ ಹಬ್ಬ ದೀಪಾವಳಿ.
ದೀಪಾವಳಿ ಹೊಸಬಟ್ಟೆ ,ಸಿಹಿಊಟ , ಪಟಾಕಿ
ಹಾರಿಸುವದು,ಸುರ-ಸುರಕಡ್ಡಿ ಸುಡುವದು,
ಪಣತಿಗಳಲ್ಲಿ ದೀಪ ಹಚ್ಚುವದು -- ಚಿಕ್ಕಮಕ್ಕಳಲ್ಲಿ
ಹೊಸ ಚ್ಯೆತನ್ಯ ,ಹುರುಪು ,ಸ0ತೋಷ ತರುವ
ಹಬ್ಬ ದೀಪಾವಳಿ.
ವಾಸಿಸುವ ಮನೆಯಲ್ಲಿ ಕಸ ಗೂಡಿಸದೇ
ಧೂಳಿನ ರಾಶಿ ಇರುತ್ತದೆ.ಈ ಧೂಳಿನ ರಾಶಿಯು
ಆರೋಗ್ಯಕ್ಕೆ ಒಳ್ಳೆಯದಲ್ಲ.ಬೆಳವಣಿಗೆಗೆ ಒಳ್ಳೆಯ
ದಲ್ಲ.ವರ್ಷಕ್ಕೊಮ್ಮೆಯಾದರೂ ಶುಚಿಗೊಳಿಸಿ
ಧೂಳಿಕಣಗಳಿ0ದ ಮುಕ್ತಗೊಳಿಸಿ -ದೀಪವನ್ನು
ಹಚ್ಚುವದನ್ನು ನಮ್ಮ ಹಿರಿಯರು ಸ0ಪ್ರದಾಯ
ವಾಗಿ ಆಚರಿಸಿಕೊ0ಡು ಬ0ದಿದ್ದಾರೆ. ಜಡತ್ವ,
ಜ0ಜಾಟಗಳಿ0ದ ಕೂಡಿದ ಈ ಜೀವನಕ್ಕೆ
ಆಸಕ್ತಿ,ಉತ್ಸಾಹ ಮೂಡಿಸುವ ಹಿನ್ನಲೆಯೇ
ದೀಪಾವಳಿಯ ಆಚರಣೆ. ದಕ್ಷಿಣ ಭಾರತದಲ್ಲಿ
ದೀಪಾವಳಿ ಹಬ್ಬವನ್ನು ಆಶ್ವೀಜ ಕೃಷ್ಣ ಪಕ್ಷದ
ತ್ರಯೋದಶಿಯಿ0ದ ಹಿಡಿದು ದೀಪಾವಳಿ
ಅಮವಾಸ್ಯೆ ಹಾಗು ಅದರ ಮುರುದಿನ ಬಲಿ
ಪಾಡ್ಯಮಿ-ಹೀಗೆ ಒಟ್ಟು ನಾಲ್ಕು ದಿನಗಳವರೆಗೆ
ಈ ಹಬ್ಬವನ್ನು ಆಚರಿಸುತ್ತಾರೆ.
ಅಸತೋಮಾ ಸದ್ಗಮಯ
ತಮಸೋಮ ಜ್ಯೋತಿರ್ಗಮಯ
ಮೃತ್ಯೋರ್ಮ ಅಮೃತ0ಗಮಯ
ಓ0 ಶಾ0ತಿ,ಶಾ0ತಿ ,ಶಾ0ತಿ..
ಅಜ್ನಾನವನ್ನು ಕಳೆದು ಸುಜ್ನಾನದ ಜ್ಯೋತಿ
ಯನ್ನು ಬೆಳಗುವ ಈ ದೀಪಾವಳಿ ಹಬ್ಬಕ್ಕೆ
'ಕೌಮಿದಿ' ಹಬ್ಬವೆ0ತಲೂ ಕರೆಯುತ್ತಾರೆ.
ಎಲ್ಲರಿಗೂ ಸ0ತೋಷ ಕೊಡುವ ,ಭಾ0ಧವ್ಯ
ಗಳನ್ನು ಬೆಸೆಯುವ,ಉತ್ಸಾಹವನ್ನು ಇಮ್ಮಡಿ
ಸುವ,ರಾಗ -ದ್ವೇಷ ಮರೆತು ,ಸೌಹಾರ್ಧ ,
ಸ0ಪ್ರೀತಿಯನ್ನು ಹೊರಸೂಸುವ ಈ ಹಬ್ಬವನ್ನು
ಬಡವರಿ0ದ ಹಿಡಿದು ಎಲ್ಲರೂ ಸಡಗರದಿ0ದ
ಆಚರಿಸುತ್ತಾರೆ.
ದೀಪಾವಳಿ ಅಮವಾಸ್ಯೆಯೆ0ದು ಲಕ್ಷ್ಮೀದೇವಿಯ
ಪೂಜೆಯನ್ನು ಸ0ಭ್ರಮದಿ0ದ ಆಚರಿಸುತ್ತಾರೆ.
ವ್ಯಾಪಾರಸ್ಥರಾದರೆ ಅವರ ಅ0ಗಡಿಯಲ್ಲಿ
ದುಡಿಯುವ ಎಲ್ಲಾ ಕಾರ್ಮಿಕರಿಗೂ ಹೊಸ
ಬಟ್ಟೆಗಳನ್ನು ಕೊಡುವದು ,ಅವರ ವೇತನ
ಇತ್ಯಾದಿಗಳನ್ನು ಪರಿಷ್ಕರಿಸುವದು ರೂಢಿ.
ಪೂಜೆಗೆ ಬ0ದ ಎಲ್ಲರಿಗೂ ಬೆ0ಡು,ಬೆತ್ತಾಸ
ಚೂರಮರಿ ಕೊಡುತ್ತಾರೆ.ಆದಿನ ರಾತ್ರಿಯಿ0ದ
ಬೆಳಗಿನವರೆಗೆ ಲಕ್ಷ್ಮೀದೇವಿಯ ಮು0ದೆ ಹಚ್ಚಿದ
ಕಾಲುದೀಪ (ಸಮೆ) ಗಳನ್ನು ಬೆಳಗಿನವರೆಗೆ
ತ್ಯೆಲವನ್ನು ಹಾಕುತ್ತಾ ದೀಪಗಳನ್ನು ಉರಿಸು
ತ್ತಾರೆ.ಲಕ್ಷ್ಮೀದೇವಿಯು ಇದರಿ0ದ ಸ0ತುಷ್ಟ
ಳಾಗಿ ಸ0ಪತ್ತು ,ವ್ಯಾಪಾರ ಅಭಿವೃದ್ಧಿ,ಸೌಖ್ಯ
ನೀಡುತ್ತಾಳೆವೆ0ಬುದು ನ0ಬಿಕೆ. ದೊಡ್ಡ ದೊಡ್ಡ
ವ್ಯಾಪಾರಸ್ಥರು ದೀಪಾವಳಿ ಹಬ್ಬದ ಆಮ0ತ್ರಣ
ಪತ್ರ ನೀಡಿ ಹಬ್ಬಕ್ಕೆ ಅಹ್ವಾನಿಸುತ್ತಾರೆ. ಆದರೆ ಈಗ ಈ ಪದ್ಧತಿ ಕಡಿಮೆ.ಈಗ ವ್ಯಾಟ್ಸಫ್
ದಿ0ದ ಸ0ದೇಶ ಕಳಿಸುತ್ತಾರೆ.
ಈ ದಿನವೇ ವಿಷ್ಣು -ಲಕ್ಷ್ಮೀದೇವಿಯನ್ನು ವಿವಾಹ
ವಾಗಿದ್ದು ಎ0ದು ಪುರಾಣಗಳಲ್ಲಿ ಉಲ್ಲೇಖಿಸಿದೆ.
--' ----' ----- ----- ---- ----- ---
ಸರ್ವರಿಗೂ ದೀಪಾವಳಿಯ ಶುಭಾಷಯಗಳು
---- -------- ----- ---- ---- ----
No comments:
Post a Comment