" ಸಮಚಿತ್ತರು "
-- --- ---- ---------
ಹಿಗ್ಗದೇ ,ಕುಗ್ಗದೇ -ಸಮಚಿತ್ತವಾಗಿ
ನಡೆಯುವವನಿಗೆ ಯಾವ ಶತೃ ಭಯವಿಲ್ಲ.ವ್ಯಸ
ನಾದಿಗಳ ಭಯವಿಲ್ಲ..ಇವರು ಮೂರಕ್ಕೆ
ಇಳಿಯದೇ -ಆರಕ್ಕೆ ಏರದೇ -ಇದ್ದುದರಲ್ಲಿಯೇ
ಎಲ್ಲ ಸ0ತೋಷವನ್ನು ಸ್ವೀಕರಿಸಿ ಹ0ಚುವ
ಮನೋಭಾವವುಳ್ಳವರು.
ಗಳಿಸಬೇಕು,ಶ್ರೀಮ0ತನಾಗಬೇಕು - ಅದುಬೇಕು
,ಇದು ಬೇಕು ,ಅನ್ನುವ ಅಭಿಲಾಷೆ
ಆಕಾ0ಕ್ಷೆ ಎಲ್ಲವೂ ಇವರಲ್ಲಿ ಇರುತ್ತವೆ.ಹಾಗ0ತ
ತಮ್ಮ ಮಿತಿಯನ್ನು ಮೀರಿ ಮತಿಭ್ರಮೆರಾಗುವ
ವರಲ್ಲ.ಇ0ತವರು ಹಿತ -ಮಿತವಾದ ನಡೆ ನುಡಿ
ಗಳನ್ನು ಗೌರವಿಸುತ್ತಾರೆ. ಆ ರೀತಿ ನಡೆದುಕೊ
ಳ್ಳುತ್ತಾರೆ.
ಇವರಲ್ಲಿ ಇನ್ನೊಬ್ಬರ ಏಳಿಗೆ ನೋಡಿ ಹೊಟ್ಟೆ
ಕಿಚ್ಚು ಪಡುವ ಗುಣ ಇರುವದಿಲ್ಲ.ಅನುಕರಣೆ
ಮಾಡುವ ಗುಣಗಳ0ತೂ ಇರುವದೇ ಇಲ್ಲ.
ಇದ್ದುದರಲ್ಲಿಯೇ ಎಲ್ಲವನ್ನು ಕಾಣುವ
ಸಾಧಕರು.ಸಾಧನೆ ,ಕೀರ್ತಿಗಳಿಗೆ ಬೆನ್ನು ಹತ್ತದೇ
ವಾಸ್ತವ ಜೀವನಕ್ಕೆ ಹೊ0ದಿಕೊ0ಡು ಹೋಗುವರು.
ತಾವಾತು -ತಮ್ಮ ಕೆಲಸವಾಯಿತು
ಬೇರೆಯವರ ಮನೆಯಲ್ಲಿ ಇಣಕಿ ನೋಡುವ
ಉಸಾಬರಿ ಮಾಡುವವರಲ್ಲ. ಈ ಸ್ವಭಾವ
ಹೊ0ದಿರುವವರಿಗೆ ಬೆರಳಕೆಯೆಷ್ಟು ಮಿತ್ರರು
ಇರುತ್ತಾರೆ.ಅವರು ಅವರ ಸ್ವಭಾವದವರೇ.
ಇವರು ಸಾಮನ್ಯ ಜೀವನ ನಡೆಸುವ
ಪರಿಪಾಠ ವುಳ್ಳವರು.ಹೀಗಾಗಿ ಯಾವುದೇ
ವ್ಯಸನಾದಿಗಳು ಬೇಗನೆ ಇವರನ್ನು ಮುತ್ತಿ
ಕೊಳ್ಳುವದಿಲ್ಲ. ' ನನ್ನ 'ಹ0ಗೇ " ನನಗೆ
ಗೊತ್ತಿಲ್ಲ ,ಊರ 'ಹ0ಗು ' ನನಗ್ಯಾಕೆ " -
ಮನೋಭಾವನೆಯುಳ್ಳವರು.ಇವರ ಗುಣಾದಿ
ಗಳನ್ನು ಅವಲೋಕಿಸಿದರೆ 'ಸಮಚಿತ್ತ '
ಗುಣಾದಿಗಳಿಗೆ ಸಮೀಪದಲ್ಲಿ ಜೀವನ ಸಾಗಿಸು
ವವರಿವರು.
No comments:
Post a Comment