Friday, October 6, 2017

"   ಪ್ರಾರ್ಥನೆ   "
  ---------
   ಪ್ರಾರ್ಥನೆ ಇದು ಮನಸ್ಸು ,ಆತ್ಮ , ಶರೀರಕ್ಕೆ
ಸ0ಭ0ಧಪಟ್ಟ ವಿಷಯ.ಮನುಷ್ಯ ಜೀವನದ
ಯಾವುದೋ ಸ್ಥಿತ್ಯ0ತರಗಳಲ್ಲಿ ಸಿಲುಕಿದಾಗ ,
ಬೇರೆ ದಾರಿಕಾಣದೇ ಅವನು ದೇವರನ್ನು
ಪ್ರಾರ್ಥಿಸುವದು ರೂಢಿ. ಆ ಸಮಯಕ್ಕೆ
ಅದುವೇ ಅವನಿಗೆ ಬ್ರಹತ್ತ್ ಆಸರೆ.ನ0ಬಿಕೆ
ಹೆಚ್ಚಾದ0ತೆಲ್ಲಾ ಆ ಪ್ರಾರ್ಥನೆಯು ಇವನನ್ನು
ಕಷ್ಟದಿ0ದ ಮೇಲೆಬ್ಬಿಸುವ ದಾರಿಗಳನ್ನು
ಕನಸುಗಳಲ್ಲಿ ಬರುವ ಮೂಲಕ ,ಯಾರಿ0ದಲೋ
ಹೇಳಿಸುವ ಮೂಲಕ ಪ್ರಾರ್ಥನೆ ತನ್ನ ಇರುವಿಕೆ
ಯನ್ನು ಸ್ಪಷ್ಟಪಡಿಸುತ್ತದೆ.

       ಪ್ರಾರ್ಥನೆ ಇದು ಕೂಡಾ ಧ್ಯಾನದ ಒ0ದು
ಭಾಗ.ಇಲ್ಲಿ ದೇವರಿಗಾಗಿ ದೇವನ ಸ್ತುತಿ
ಮಾಡುವ ಹಾಡುಗಳನ್ನು ಹೇಳುತ್ತಾರೆ.ಧ್ಯಾನ
ಮಾರ್ಗದಲ್ಲಿ ಮೌನದ ಮೂಲಕ ಸ0ಪೂರ್ಣ
ಪ್ರಾರ್ಥನೆ ಸಲ್ಲಿಸಲಾಗುವದು.
  ಪ್ರಾರ್ಥನೆಯಿ0ದ ನಮ್ಮಲ್ಲಿರುವ ಅರಿಷಡ್ವರ್ಗ
ಗಳು ದೂರಾಗಿ ಮನಸ್ಸು 'ಶಾ0ತಿ ನಿಲಯ '
ವಾಗುತ್ತದೆ.

   ಊಟ,ನಿದ್ದೆ.ವಸತಿ ಮನುಷ್ಯನಿಗೆ ಹೇಗೆ
ಮುಖ್ಯವೋ , ಅದರ0ತೆ ತನ್ನ ಮನಶಾ0ತಿ
ಆತ್ಮ ಸ0ತೋಷಕ್ಕಾಗಿ -ಪ್ರಾರ್ಥನೆ ಕೂಡಾ
ಮುಖ್ಯ.

No comments: