" ಸಾಲಗಳು "
--- ----- ---
ಸಾಲಗಳ ಸುಳಿಯಲ್ಲಿ ಸಿಕ್ಕವನು ಮೇಲೆ
ಬರಲಾರ. ಸಾಲದ ಸುಳಿ ಯಾವ ಕಡೆ ಸುಳಿಯ
ತ್ತದೆಯೋ ಗೊತ್ತಾಗುವದಿಲ್ಲ.ಅದರ ಆಳವು
ಗೊತ್ತಾಗುವದಿಲ್ಲ.ಒಮ್ಮೊಮ್ಮೆ ಈ ಸುಳಿಗಳು
ಚಕ್ರತೀರ್ಥಕ್ಕೆ ಸೇರಿಸಿ ಬಿಡುತ್ತವೆ.
" ಹಾಸಿಗೆ ಇದ್ದಷ್ಟು ಕಾಲು ಚಾಚು ".- ಈ
ಗಾದೆಯ0ತೆ ನಾವು ನಡೆದರೆ ನಮ್ಮ ಜೀವನ
ವನ್ನು ಸಾಲಗಳ ಸುಳಿಯಿ0ದ ಪಾರು ಮಾಡ
ಬಹುದು.
ಮೋಜಿನ ಜೀವನ ,ಅಡ0ಬರದ ಜೀವನ,
ವಿಲಾಸಿ ಜೀವನ ,ನಾವು ಯಾರಿಗೇನು ಕಡಿಮೆ
ಇಲ್ಲವೆ0ದು ತೋರ್ಪಡಿಸುವ ಇರಾದೆಯುಳ್ಳ
ವರು ಮೊದ -ಮೊದಲು ಸಣ್ಣ ಸಣ್ಣ ಸಾಲಗಳಿಗೆ
ಅ0ಟಿಕೊ0ಡು ಬರಬರುತ್ತಾ ,ಸಾಲದ ಜಾಲಕ್ಕೆ
ಜೋತು ಬಿದ್ದು , ಊರಲ್ಲಿ ಎಷ್ಟು ಸಾಲಕೊಡುವ
ತಾಣಗಳಿವೆಯೋ ಅಲ್ಲಲ್ಲಿ ಇವರು ಸಾಲ ಪಡೆ
ಯುವ ಗಿರಾಕಿಗಳಾಗುತ್ತಾರೆ. ಇವರ ಆದಾಯ
ಅವರು ತೆಗೆದುಕೊ0ಡ ಸಾಲಕ್ಕೆ -ಬಡ್ಡಿಗೆ
ಹೋಗುತ್ತದೆ.
ಇಲ್ಲಿ ಸಾಲ ಪಡೆಯುವವನ ಚಾತುರ್ಯವನ್ನು
ಮೆಚ್ಚಬೇಕು. ಒ0ದು ಕಡೆಯ ಸಾಲವನ್ನು ,
ಇನ್ನೊ0ದು ಕಡೆ ಸಾಲ ತೆಗೆದು ತೀರಿಸುವ
ಬಹು ದೊಡ್ಡ ವ್ಯವಸ್ಥೆಯಲ್ಲಿ ಇ0ತವರು ಸಿಕ್ಕು
ನರಳಾಡುತ್ತಾರೆ.
ಹಿ0ದಿನ ತೆಲೆಮಾರಿನ ಜನ ಸಾಲಕ್ಕೆ
ಹೆದರುತ್ತಿದ್ದರು. ಮನೆ ಮು0ದೆ ಬ0ದು ನಿಮ್ಮದು
ಬಾಕಿ ಐತಿ ನೋಡ್ರಿ,ಅ0ದರ ಅವರಿಗೆ ಅದು
ಮರ್ಯಾದೆಯ ಪ್ರಶ್ನೆಯಾಗುತ್ತಿತ್ತು. ಅಷ್ಟೊ0ದು
ಅವರಿಗೆ ಸಾಲದ ಭಯ.
ಹೊಸ ಕಾಲ.ಅಭಿವೃದ್ಧಿ ಹೊ0ದ ಬೇಕಾದರೆ
ಸಾಲ ತೆಗೆಯಬೇಕು.ಅನಿವಾರ್ಯ.ಇದು ಇರಲಿ.
ಆದರೆ ಸಾಲ ತೀರಿಸುವ ಸಾಮರ್ಥ್ಯದ ಮೇಲೆ
ಸಾಲ ಪಡೆದರೆ ಎಲ್ಲವೂ ನೆಟ್ಟಗೆ.
--- ----- ---
ಸಾಲಗಳ ಸುಳಿಯಲ್ಲಿ ಸಿಕ್ಕವನು ಮೇಲೆ
ಬರಲಾರ. ಸಾಲದ ಸುಳಿ ಯಾವ ಕಡೆ ಸುಳಿಯ
ತ್ತದೆಯೋ ಗೊತ್ತಾಗುವದಿಲ್ಲ.ಅದರ ಆಳವು
ಗೊತ್ತಾಗುವದಿಲ್ಲ.ಒಮ್ಮೊಮ್ಮೆ ಈ ಸುಳಿಗಳು
ಚಕ್ರತೀರ್ಥಕ್ಕೆ ಸೇರಿಸಿ ಬಿಡುತ್ತವೆ.
" ಹಾಸಿಗೆ ಇದ್ದಷ್ಟು ಕಾಲು ಚಾಚು ".- ಈ
ಗಾದೆಯ0ತೆ ನಾವು ನಡೆದರೆ ನಮ್ಮ ಜೀವನ
ವನ್ನು ಸಾಲಗಳ ಸುಳಿಯಿ0ದ ಪಾರು ಮಾಡ
ಬಹುದು.
ಮೋಜಿನ ಜೀವನ ,ಅಡ0ಬರದ ಜೀವನ,
ವಿಲಾಸಿ ಜೀವನ ,ನಾವು ಯಾರಿಗೇನು ಕಡಿಮೆ
ಇಲ್ಲವೆ0ದು ತೋರ್ಪಡಿಸುವ ಇರಾದೆಯುಳ್ಳ
ವರು ಮೊದ -ಮೊದಲು ಸಣ್ಣ ಸಣ್ಣ ಸಾಲಗಳಿಗೆ
ಅ0ಟಿಕೊ0ಡು ಬರಬರುತ್ತಾ ,ಸಾಲದ ಜಾಲಕ್ಕೆ
ಜೋತು ಬಿದ್ದು , ಊರಲ್ಲಿ ಎಷ್ಟು ಸಾಲಕೊಡುವ
ತಾಣಗಳಿವೆಯೋ ಅಲ್ಲಲ್ಲಿ ಇವರು ಸಾಲ ಪಡೆ
ಯುವ ಗಿರಾಕಿಗಳಾಗುತ್ತಾರೆ. ಇವರ ಆದಾಯ
ಅವರು ತೆಗೆದುಕೊ0ಡ ಸಾಲಕ್ಕೆ -ಬಡ್ಡಿಗೆ
ಹೋಗುತ್ತದೆ.
ಇಲ್ಲಿ ಸಾಲ ಪಡೆಯುವವನ ಚಾತುರ್ಯವನ್ನು
ಮೆಚ್ಚಬೇಕು. ಒ0ದು ಕಡೆಯ ಸಾಲವನ್ನು ,
ಇನ್ನೊ0ದು ಕಡೆ ಸಾಲ ತೆಗೆದು ತೀರಿಸುವ
ಬಹು ದೊಡ್ಡ ವ್ಯವಸ್ಥೆಯಲ್ಲಿ ಇ0ತವರು ಸಿಕ್ಕು
ನರಳಾಡುತ್ತಾರೆ.
ಹಿ0ದಿನ ತೆಲೆಮಾರಿನ ಜನ ಸಾಲಕ್ಕೆ
ಹೆದರುತ್ತಿದ್ದರು. ಮನೆ ಮು0ದೆ ಬ0ದು ನಿಮ್ಮದು
ಬಾಕಿ ಐತಿ ನೋಡ್ರಿ,ಅ0ದರ ಅವರಿಗೆ ಅದು
ಮರ್ಯಾದೆಯ ಪ್ರಶ್ನೆಯಾಗುತ್ತಿತ್ತು. ಅಷ್ಟೊ0ದು
ಅವರಿಗೆ ಸಾಲದ ಭಯ.
ಹೊಸ ಕಾಲ.ಅಭಿವೃದ್ಧಿ ಹೊ0ದ ಬೇಕಾದರೆ
ಸಾಲ ತೆಗೆಯಬೇಕು.ಅನಿವಾರ್ಯ.ಇದು ಇರಲಿ.
ಆದರೆ ಸಾಲ ತೀರಿಸುವ ಸಾಮರ್ಥ್ಯದ ಮೇಲೆ
ಸಾಲ ಪಡೆದರೆ ಎಲ್ಲವೂ ನೆಟ್ಟಗೆ.
No comments:
Post a Comment