" ವನವಾಸ "
------ ----- ---
ವನವಾಸ ,ಅಜ್ನಾತವಾಸದಿದ ಆತ್ಮ
ಶುದ್ಧಿಯಾಗಿ ಆತ್ಮಸ್ಥ್ಯೆರ್ಯ ,ಆತ್ಮಬಲ
ಅಭಿವೃದ್ಧಿ ಹೊ0ದಿ ಪ್ರಪ0ಚದಲ್ಲಿ ಬ0ದೊದುಗವ
ವಿಘ್ನಗಳನ್ನು ಎದುರಿಸುವ ಶಕ್ತಿ ಪ್ರಾಪ್ತಿಯಾಗು
ವದು ನಿಸ್ಸ0ದೇಹ.ದ್ಯೆವಿಕ ಶಕ್ತಿ ಪ್ರಾಪ್ತಿಗಾಗಿ
ಪರ್ವತಪ್ರದೇಶ ,ಅರಣ್ಯಪ್ರದೇಶ ,ಗುಡ್ಡ-ಗಾಡು
ತಪ್ಪಲು ಪ್ರದೇಶಗಳನ್ನು ಋಷಿ -ಮುನಿಗಳು
ದೇವಾನು ದೇವತೆಗಳು ಆಯ್ಕೆ ಮಾಡಿಕೊಳ್ಳುವ
ಹಿ0ದಿನ ಉದ್ದೇಶ ಇದೇ ಇರಬಹುದು.
ಆತ್ಮಬಲ ,ದ್ಯೆಹಿಕ ಬಲ ,ಬುದ್ಧಿಬಲ ,
ಜ್ನಾನಬಲ,ಮನೋಬಲ ,ಶಸ್ತ್ರ-ಶಾಸ್ತ್ರ ಬಲ
ಸೇರಿದ0ತೆ ವಿವಿಧ ಬಲಗಳ ಸ0ಗಮದಿ0ದ
ಹೊರಬರುವ ದಿವ್ಯ ಶಕ್ತಿಯ ನ್ನು ವನವಾಸಿಗಳು
ಪಡೆಯುತ್ತಾರೆ.
ಎಲ್ಲಕ್ಕಿ0ತ ಮುಖ್ಯವಾಗಿ ಪ್ರಕೃತಿ ಸೌ0ಧರ್ಯ
ಅರಣ್ಯಗಳಲ್ಲಿ ವಾಸಿಸುವ ಪ್ರಾಣಿಗಳ ಜೀವನ
ಕ್ರಮ ,ಭಾಷೆ ,ಪರ್ವತ,ಕ0ದರಗಳ ವಿಶಿಷ್ಟಾನು
ಭವ ದೊರೆಯುತ್ತದೆ.
ಮನುಷ್ಯನಲ್ಲಿ ಅಡಗಿರುವ ಸುಪ್ತ ಜ್ನಾನಕೋಶ
ಗಳು ಸೃಷ್ಟಿಯ ವಿಸ್ಮಯದಿ0ದ ಪ್ರೇರಣೆಯಾಗಿ
ಅನೇಕ ಬಗೆಯ ಜ್ನಾನವನ್ನು ಪಡೆಯಲು
ಶಕ್ಯವಿದೆ.
ಪ್ರಾಪ0ಚಿಕ ಸ0ಭ0ಧ ,ರಾಜ್ಯ ಸ0ಭ0ಧ
ದೇಶ ಸ0ಭ0ಧ ಗಳ ಅರಿವು-ಅವುಗಳ
ಮಜಲುಗಳ ಒ0ದು ಅಧ್ಯಯನದ ಅವಕಾಶವೇ
ಈ ವನವಾಸದಿ0ದ ಲಭಿಸುತ್ತದೆ ಎ0ದು
ರಾಮಾಯಣದಲ್ಲಿಯ ರಾಮ -ಸೀತೆ -ಲಕ್ಷ್ಮಣ
ಮಹಾಭಾರತದ ಪಾ0ಡವ ಸಹೋದರರ
ದೃಷ್ಟಾ0ತಗಳೇ ಸಾಕ್ಷಿ.
ಈ ಹಿನ್ನಲೆಯಲ್ಲಿ ಜ್ನಾನ ,ಮನ ಸ0ಪನ್ನನಾ
ಗಲು ,ಅತೀ0ದ್ರಿಯ ಶಕ್ತಿ ಜಯಿಸಲು ವನವಾಸ
ಅತ್ಯ0ತ ಶ್ರೇಷ್ಟ.ಯೋಗ ,ತಪಸ್ಸು ಭಕ್ತಿಮಾರ್ಗ
ಇವೆಲ್ಲವೂ ವನವಾಸದಲ್ಲಿಡಗಿರುವ ಅದ್ಭುತ
ಜ್ನಾನ ಭ0ಡಾರಗಳು.
No comments:
Post a Comment