Monday, October 30, 2017

"  ದೇವರು   "
         ----   ----   ---
ಜಾತಿ,ಮತ,ಪ0ಥ,ಧರ್ಮ ,ವೇದ,ಆಗಮ,
ಉಪನಿಷತ್ತು ಗಳಲ್ಲಿ ದೇವರಿದ್ದಾನೆ. ಯಾರು
ಯಾವ ಗು0ಪಿಗೆ ಸೇರುತ್ತಾರೋ ,ಆ ಗು0ಪಿ
ನಲ್ಲಿ ಅವರ0ದುಕೊ0ಡ0ತೆ ದೇವರಿದ್ದಾನೆ.
ದೇವರಿಲ್ಲದೇ ಜಗವಿಲ್ಲ.ಜಗವಿಲ್ಲದೇ ದೇವರಿಲ್ಲ.
ಭಕ್ತರಿಲ್ಲದೇ ದೇವರಿಲ್ಲ.ದೇವರಿಲ್ಲದೇ ಭಕ್ತರಿಲ್ಲ.
ದೇವನು ವ್ಯಕ್ತನೂ ಹೌದು.ಅವ್ಯಕ್ತನೂ ಹೌದು.
ಶಬ್ದನೂ ಹೌದು.ನಿಶಬ್ದನೂ ಹೌದು. ಆಕಾರವೂ
ಹೌದು.ನಿರಾಕಾರವೂ ಹೌದು. ಸಕಲ ಜೀವರಾಶಿ
ಗಳಲ್ಲಿಯೂ ದೇವನಿಹನು. ಸಕಲ ಜೀವರಾಶಿಗಳ
ಆತ್ಮನೂ ಅವನೇ.ಪರಮಾತ್ಮನೂ ಅವನೇ.

 ದೇವನನ್ನು ಅರಿಯಬೇಕಾದರೆ ನಮ್ಮ
ಮನಸ್ಸು ಸಕಲ ರೀತಿಯಿ0ದ ಭ0ಧ ಮುಕ್ತವಾ
ಗಿರಬೇಕು.ಬ0ಧ ಮುಕ್ತಿ ಸ್ಥಿತ ಪ್ರಜ್ನೆಗೆ ಹಾದಿ.
ಸ್ಥಿತಪ್ರಜ್ನೆ -ಏಕಚಿತ್ತಕ್ಕೆ ಹಾದಿ. ಏಕಚಿತ್ತ -ಓ0ಕಾರ
ಸಾಕ್ಷತ್ಕಾರಕ್ಕೆ ಹಾದಿ.ಆ ಓ0ಕಾರವೇ ದೇವ
ಸ್ವರೂಪ.ವಿಶ್ವ ಸ್ವರೂಪ.ವಿರಾಟ ಸ್ವರೂಪ.
ಇವೆಲ್ಲವುಗಳಿಗೆ ಪ್ರವೇಶ ದ್ವಾರ ಪ್ರಾರ್ಥನೆ.
ಪ್ರಾರ್ಥನೆಯಿ0ದ ಸಕಲವನ್ನು ಪಡೆಯಬಹುದು.

No comments: