Monday, October 9, 2017

  "   ಗಾ0ಧೀ ಜಯ0ತಿ  "
            ---   ----   ---   ----   -----
         ಭಾರತದ "  ರಾಷ್ಟ್ರಪಿತ " ಎ0ದೇ
ಮೋಹನದಾಸ  ಕರಮಚ0ದ ಗಾ0ಧಿ ಇವರಿಗೆ
ಭಾರತೀಯರೆಲ್ಲರೂ ಸ0ಭೋದಿಸುತ್ತಾರೆ.
ಇವರು ನಡೆದು ಬ0ದ ದಾರಿ ಇವರನ್ನು
'ಮಹಾತ್ಮ ' ಸ್ಥಾನಕ್ಕೇರಿಸಿ ಜನಮನದಲ್ಲಿ
ಮಹಾತ್ಮಾ ಗಾ0ಧಿ ಆದರು.

 
   ದಕ್ಷಿಣ ಆಫ್ರಿಕಾದಿ0ದ ತಾಯ್ನಾಡಿಗೆ ಮರಳಿ
ಬ0ದ ನ0ತರ ,ಬ್ರಿಟಿಷರ ದಬ್ಬಾಳಿಕೆಯಿ0ದ
ಭಾರತವನ್ನು ಸ್ವತ0ತ್ರ ರಾಷ್ಟ್ರವನ್ನಾಗಿ ಮಾಡಲು 1930 ರಲ್ಲಿ ಉಪ್ಪಿನಸತ್ಯಾಗ್ರಹ
ಆರ0ಭಿಸಿದರು.ಉಪ್ಪಿನ ಸತ್ಯಾಗ್ರಹ 'ದ0ಡೀ
ಸತ್ಯಾಗ್ರಹ' ವೆ0ದೇ ಪ್ರಸಿದ್ಧಿಯಾಯಿತು.
ಸತ್ಯವನ್ನು ಆಗ್ರಹಿಸುವ ಮಾರ್ಗಕ್ಕೆ ವಿನೂತನ
"ಸತ್ಯಾಗ್ರಹ "ಪದ ಬಳಿಸಿದ ವಿಶ್ವದಲ್ಲೇ ಮೊಟ್ಟ
ಮೊದಲಿಗರು ಮೋಹನದಾಸ ಗಾ0ಧೀಜಿಯವರು
  ಪ್ರಾರ್ಥನೆ ,ಸತ್ಯ , ಅಹಿ0ಸೆ ,ಗಳನ್ನು  ಜೀವನ
ದುದ್ದಕ್ಕೂ ಪಾಲಿಸಿಕೊ0ಡು ಬ0ದು ಬ್ರಿಟಿಷರ
ವಿರುದ್ಧ ಹೋರಾಡಲು 'ವಿದೇಶಿ ಬಹಿಷ್ಕರಿಸಿ '
'ದೇಶಿ ವಸ್ತು ಬಳಿಸಿ' -ಎ0ದು ದೇಶಕ್ಕೆ ಕರೆಕೊ
ಟ್ಟರು.ದೇಶದಲ್ಲೆಡೆ ತಾ0ಡವವಾಡುತ್ತಿರುವ
ಬಡತನ,ನಿರುಧ್ಯೋಗ ವನ್ನು ಕ0ಡು "ಚರಖಾ"
ದಿ0ದ ನೂಲಿನ ಎಳೆ ತೆಗೆದು ಖಾಧಿ ಬಟ್ಟೆ
ತಯಾರಿಸುವ ನೂತನ ಉಧ್ಯೋಗವನ್ನು
ಸೃಷ್ಟಿಮಾಡಿ ಇಡೀ ದೇಶಕ್ಕೆ ಮಾದರಿಯಾದರು.

 
   ಸಾಬರಮತಿ ಆಶ್ರಮ ಸ್ಥಾಪಿಸಿ ಸತ್ಯ,ಅಹಿ0ಸೆ
ಬ್ರಹ್ಮಚರ್ಯೆ ಸೇರಿದ0ತೆ ಅನೇಕ ವೃತಗಳನ್ನು
ಜಾರಿಗೆ ತ0ದರು.ಸತ್ಯದ ಸ0ಶೋಧನೆ ,
ಆತ್ಮಬಲ,ಆತ್ಮಸ್ಥ್ಯೆರ್ಯ ,ಮನೋಬಲ ಹೆಚ್ಚಿಸುವ
ಮಾರ್ಗವನ್ನು ಸತ್ಯಾಗ್ರಹದಿ0ದ ಕ0ಡುಕೊ0
ಡರು.ಜ್ಯೆನ ಧರ್ಮದ ತತ್ವ , ಟಾಲಸ್ಟಾಯಯವರ
ಕಾದ0ಬರಿ ಯಿ0ದ ಹೆಚ್ಚು ಪ್ರಭಾವಿತರಾಗಿದ್ದರು.

 
     ಸ್ವಾತ0ತ್ರ್ಯ ಸ0ಗ್ರಾಮದ ಜನಕರೆ0ದೇ
ಪ್ರಸಿದ್ಧಿಯಾಗಿರುವ ಎ0.ಕೆ.ಗಾ0ಧಿಯವರಿ0ದ
ಅನೇಕ ರಾಷ್ಟ್ರಗಳು ಪ್ರೇರಣೆಗೊ0ಡು ಅಹಿ0ಸೆಯ ಅಸ್ತ್ರವನ್ನು  ಪ್ರಯೋಗಿಸಲು
ಮು0ದಾದರು.

 
      '  ಹೇ ರಾಮ ' ಎ0ದೇ ಕೊನೆಯುಸಿರೆಳೆದ
ಮಹಾತ್ಮರ ಆತ್ಮಜ್ಯೋತಿ ಪರ0ಜ್ಯೋತಿಯಲ್ಲಿ
1948 ಜನೇವರಿ 30 ರ0ದು ಲೀನವಾಯಿತು.
  ಗಾ0ಧೀಜಿಯವರು ಪ್ರತಿಪಾದಿಸಿದ ಸಮಗ್ರ,
ಸ್ವತ0ತ್ರ ,ಸ್ವರಾಜ್ಯ,ಸತ್ಯ  ಅಹಿ0ಸೆ ,ಲೋಕ ನೀತಿ,

  ಸರ್ವೋದಯ ,ಪದಗಳನ್ನು. ಅಭ್ಯಾಸಿಸಿ ಅವುಗಳನ್ನು
ಕಾರ್ಯಗತಗೊಳಿಸುವ ಇಚ್ಛಾ ಶಕ್ತಿಯೇ
"ಮಹತ್ಮಾ ಗಾ0ಧೀ ಜಯ0ತಿ "ಗೆ ನಾವು
ಕೊಡುವ ಹೃದಯಪೂರ್ವಕ ಗೌರವ ನಮನ.

No comments: