Thursday, October 12, 2017

   "  ನೆನಪು  "
---   ---  ---
  ನೆನಪೊ0ದು ಬುಗುರಿ ಆಟ.ನಾವು ಹೇಗೆ
ಬುಗುರಿ ಆಟ ಆಡಿಸುತ್ತೇವೆಯೋ..?ಹಾಗೆ
ನೆನಪಿನ ಆಟ.ಬುಗುರಿ ಆಟ ಆಡಬೇಕಿದ್ದರೆ  ,
ಅದಕ್ಕೆ ಬುಗುರಿಬೇಕು,ಬುಗುರಿಗೆ ಸುತ್ತಲು
ದಾರಬೇಕು.ದಾರ ಇಲ್ಲದೇ ಬುಗುರಿ ಆಡಲು
ಸಾಧ್ಯವಿಲ್ಲ.ಇಲ್ಲಿ ಮುಖ್ಯವಾದ ವಿಷಯವೆ0ದರೆ,
ನೆನಪುಗಳು ದಾರ ಇದ್ದ ಹಾಗೆ.ಬುಗುರಿಗೆ
ದಾರ ನಾವು ಯಾವ ಎಳೆಯಿ0ದ ಸುತ್ತುತ್ತೇ
ವೆಯೋ,..?ಎ0ತಹ ದಾರಗಳಿ0ದ ಸುತ್ತುತ್ತೇ
ವೆಯೋ..?ಬುಗುರಿ ಮೊಳೆ ಎಷ್ಟು ಚೂಪಾಗಿ
ರುತ್ತೋ.   ಅದರ ಮೇಲೆ ಬುಗುರಿಯ ಆಟ.

    ನೆನಪುಗಳು ಘನೀಕೃತವಾಗಿರುತ್ತವೆ.
ಯಾವಾಗ ನೆನಪಿನ ಆಟ ಆಡಬಯಸುತ್ತೇ
ವೆಯೋ, ಆವಾಗ ಆ ಬುಗುರಿ ಗರಿ ಕೆದರಿ
ಹೊರ ಬರುತ್ತವೆ. ನೆನಪುಗಳು ಮಾಸುವದಿಲ್ಲ.
ಒಳ್ಳೆಯ ನೆನಪುಗಳನ್ನು ಮಾತ್ರ  ನೆನಪುಮಾಡಿ
ಕೊಳ್ಳಬೇಕು.ಸ0ತೋಷ ಇಮ್ಮಡಿಯಾಗುತ್ತದೆ.
ಕೆಟ್ಟ ನೆನಪುಗಳು,ಅವುಗಳ ಸ್ಮರಣೆ ಮನಸ್ಸಿಗೆ
ಗಾಯ ಮಾಡುತ್ತವೆ.ಅದರಿ0ದ ದೂರ ಇರಬೇಕು

    ನೆನಪು ಮನಸ್ಸೆ0ಬ ಬುಗುರಿಯ ಆಟ.
ಆಡಲು ಪ್ರೇರೇಪಿಸುತ್ತದೆ.ಆಟ ಆಡಬೇಕೋ.?
ಬೇಡವೋ..?ನಾವು ನಿರ್ಧರಿಸಬೇಕು.

No comments: