Wednesday, January 31, 2018

    "     ಸಾಧನೆ   ಮತ್ತು  ಗುರಿ  "
          ---    ---   ---   ---   ------'
         ಮನುಷ್ಯ ಏನಾಗಬೇಕೆ0ದು ಇಚ್ಛೆ
ಪಟ್ಟಿರುತ್ತಾನೋ..? , ಸಾಧಿಸಬೇಕೆ0ದಿರು
ತ್ತಾನೋ..? ಅವು ಸಾಧಿಸಬೇಕು. ಅ ಸಾಧಿಸುವ
ಗುರಿಯತ್ತ  ಸಾಗಬೇಕು. ಛಲ ,ಸನ್ನಡತೆ ,
ಸುಗುಣ ,ಸದ್ಗುರುವಾಣಿಯ ಪಾಲನೆ ,
ಇವು ಸಾಧನೆಯ  ಗುರಿಯತ್ತ - ಸಾಗುವ
ದಾರಿಯಲ್ಲಿ 'ಹಸನು  'ಮಾಡುವ ಮ್ಯೆಲುಗಲ್ಲು
ಗಳು.

  ಸ0ಸ್ಕಾರ ,-ಮನೆಯ ಸ0ಸ್ಕೃತಿ ,ಶಾಲೆ
ಸುತ್ತಮುತ್ತಲಿನ ಸ0ಸ್ಕಾರಗಳು  ಈ ಮ್ಯೆಲು
ಗಲ್ಲುಗಳಿಗೆ  ರೂಪ ಕೊಡುವ  ಚಿತ್ರಕಲಾಕಾರ
ನಿದ್ದ ಹಾಗೆ.

   ಆ ' ದ್ಯೆವಿ ' ಎ0ಬ ಚಿತ್ರಕಲಾಕಾರವನ್ನು
ನೆನೆಯುತ್ತಾ ,ಸಾಧನೆಯ ಕಲ್ಪವೆ0ಬ
' ಶಿವಾಲಯ '  ವನ್ನು ಪ್ರವೇಶಿಸಿ ಗುರಿ -ದೇವ
ಸಾನಿಧ್ಯವನ್ನು ಪಡೆಯುವಲ್ಲಿ ನಿರತರಾಗುವದು-
ಸಹಜೀವನ ,ಸಹಬಾಳ್ವೆ , ಸಧರ್ಮ ಕಡೆಗೆ
ಚಲಿಸಲು ಚಾಲನಾಶಕ್ತಿ ನೀಡುವ ಅಮೂಲ್ಯ
ರತ್ನಗಳು.

   ಈ ರತ್ನಗಳು ಮನುಷ್ಯನಲ್ಲಿಯೇ ಇರುತ್ತವೆ.
ಇವುಗಳನ್ನು ಹೆಕ್ಕಿ ತೆಗೆಯಲು 'ಗುರು'ವಿನ
ಮಾರ್ಗದರ್ಶನ ಅವಶ್ಯ.

"  ಸ0ಗಾನ ಮಾತು   -286  "
  ---   ----  ---   ----   -----   ----
  *  ತಪ್ಪಿನಿ0ದಾದ ಪ್ರಮಾದಗಳಿಗೆ
      ಪ್ರಾಯಶ್ಚಿತ್ತವೇ ಅ0ತಿಮ ಮದ್ದು.

  *  ನಿ0ತಲ್ಲೇ ನಿ0ತ0ತೆ ಭಾಸವಾದರೂ
      ಭೂಮಿ ಸುತ್ತಿತ್ತಿರುತ್ತದೆ.ಹಾಗೆಯೇ
      ಜೀವನ ಬದಲಾವಣೆಗೆ ಹೊ0ದಿಕೊಳ್ಳುತ್ತಾ
      ಸಾಗಬೇಕು.

  *  ಡೋಣಿ   -  ಸಣ್ಣದು
      ನಾವು  -  ಚಿಕ್ಕದು
       ಹಡಗು  -   ದೊಡ್ಡದು
       ಇವುಗಳು ಪಯಣಿಸುವ ದಾರಿ ಒ0ದೇ.
       ಭಿನ್ನ -  ಭಿನ್ನ ಅಭಿಪ್ರಾಯಗಳುಳ್ಳವರು
       ನಡೆಯುವ ದಾರಿ ಒ0ದೇ.ಗುಣ ವ್ಯೆಷಿಷ್ಟ್ಯ
       ಗಳು ಬೇರೆ ಬೇರೆ.

Tuesday, January 30, 2018

 "  ಮ0ಕು  ಛ0ದಸ್ಸು   "
   ---   ---'   ----   -------
ಅಯ್ಯಾ. ..ಅಯ್ಯಾ....
ಅಣ್ಣ ಬಸವಣ್ಣನ ನಾಡಿನಲ್ಲಿ
ಜಾತಿ ಕಲರವಯ್ಯಾ...
ಅಕ್ಕ ಮಹಾದೇವಿ ನಾಡಿನಲ್ಲಿ
ನಾಮೇಲು -ನೀ ಮೇಲು ಕಿತ್ತಾಟವಯ್ಯಾ..
ಅಲ್ಲಮವಿನ ನಾಡಿನಲ್ಲಿ
ಲಿ0ಗಾ0ಗ ಪ್ಯೆಪೋಟಿವಯ್ಯಾ..
ಸಿದ್ಧರಾಮನ ನಾಡಿನಲ್ಲಿ
ಅವ್ಯೆಚಾರಿಕತೆಯ  ಬೀಜ ಅ0ಕುರಿಸಿದಯ್ಯಾ..
" ಇವನಾರವ ,ಇವನಾರವ
ಇವ ನಮ್ಮವ ,ಇವ ನಮ್ಮವನೆ0ದೆಣಿಸಯ್ಯ...
ಅಣ್ಣ ಬಸವಣ್ಣನ ವಚನಗಳಿಗೆ
ಮ0ಕು ಆವರಿಸಿದೆಯೋ..?
ಜನ ಮ0ಕಾಗಿದ್ದಾರೋ..?
ತಿಳಿಯದಾಯಿತಣ್ಣ..ತಿಳಿಯದಾಯಿತಣ್ಣ..
ಗುಹೇಶ್ವರ ಈ ಛ0ದಸ್ಸನ್ನು 
ನೀನೇ ಬಿಡಿಸಬೇಕಪ್ಪ..
  "  ಲ್ಯೆ0ಗಿಕ ಶಿಕ್ಷಣ -ಎರಡು ಮಾತು. "
   ---   -----   -----   -----   ----'
-
   ಲ್ಯೆ0ಗಿಕ ಶಿಕ್ಷಣ ಬೇಕು ಅ0ತಾ ಹೇಳಿದರೆ
ಎಡ ಪ0ಥೀಯರಾಗುತ್ತೇವೆ.ಬೇಡ ಅ0ತಾ ಹೇಳಿದರೆ ಬಲ ಪ0ಥೀಯರಾಗುತ್ತೇವೆ.  
  
     ಈಗ ಎಡ -ಬಲ ಬಿಟ್ಟು ವಾದಿಸುವದಾದರೆ
ಇ0ದಿನ ಜೀವನ ಶ್ಯೆಲಿಗೆ ಲ್ಯೆ0ಗಿಕ ಶಿಕ್ಷಣ
ಅತೀ ಅವಶ್ಯವಿದೆ.ಜಗತ್ತು ,ಮಾಧ್ಯಮಗಳು
ಜನರು ಬದಲಾಗುತಿದ್ದಾರೆ ,ಅದೇ ರೀತಿ
ಅವರ ಅಭಿರುಚಿಯು ಬದಲಾಗುತ್ತಾ ಇದೆ.
 
   ಈ ವಿಷಯದಲ್ಲಿ ಪೌರ್ವಾತ್ಯರನ್ನು ಅನುಸರಿಸು
ವ0ತಿಲ್ಲ ,ಪಾಶ್ಚಿಮಾತ್ಯರನ್ನು ಅನುಸರಿಸುವ0
ತಿಲ್ಲ..ನಾವು ಲ್ಯೆ0ಗಿಕ ವಿಷಯದಲ್ಲಿ ಮಧ್ಯ0ತರ
ಚೌಕಟ್ಟಿನಲ್ಲಿ ಇದ್ದೇವೆ.ಇದಕ್ಕೆ ನಮ್ಮದೇ ಆದ0ತ
ಹ ಪದ್ಧತಿಗಳು ಕಾರಣವಿರಬಹುದು.ನಾವು
ಚಿತ್ರಮ0ದಿರದಲ್ಲಿ ಚು0ಬಿಸುವ ದೃಶ್ಯವನ್ನು
ಮುಕ್ತವಾಗಿ ನೋಡುತ್ತೇವೆ.(ಇದಕ್ಕೆ ಸೆನ್ಸಾರ
'ಏ' ಸರ್ಟಿಫಿಕೇಟ ).ಆದರೆ ಅದನ್ನೇ ನಾವು
ಮುಕ್ತವಾಗಿ ಅನುಭವಿಸಲು ಸಾಧ್ಯವಿಲ್ಲ.
.ಹರೆಯದ ಗ0ಡು -ಹೆಣ್ಣಿಗೆ ಇ0ತಹ
ಆಕಾ0ಕ್ಷೆ ಇದ್ದರೆ ತಪ್ಪಲ್ಲ.ನಾವು ಅದನ್ನು 
ವಿಮರ್ಶಿಸುವ ರೀತಿ ತಪ್ಪಾಗಿದೆ.
ಲ್ಯೆ0ಗಿಕ ,ಕಾಮ ,ಪ್ರೀತಿ -ಪ್ರೇಮ ,ಅತ್ಯಾಚಾರ
ವಿಕೃತ ಕಾಮ , ಈ ಪದಗಳ ವ್ಯತ್ಯಾಸ ತಿಳಿ
ದರೆ ನಮ್ಮಲ್ಲಿ ನಡೆತಕ್ಕ0ತಹ ಸಾಧುವಲ್ಲದ
ಲ್ಯೆ0ಗಿಕ ಹಗರಣಗಳನ್ನು ತಪ್ಪಿಸಬಹುದಾಗಿದೆ.
ಲ್ಯೆ0ಗಿಕತೆ ಹಾಗು ಕಾಮ ನಾವು ಎಷ್ಟು
ಮುಚ್ಚಿಡುವ -ಮಡಿವ0ತಿಕೆ ತೋರಿಸುತ್ತೇ
ವೆಯೋ ಅಷ್ಟು ನಡೆಯಬಾರದ್ದೆಲ್ಲಾ ನಡೆದು
ಹೋಗಿರುತ್ತೆ.ಕಾಮ -ಲ್ಯೆ0ಗಿಕತೆ ಬಗ್ಗೆ
ತಿಳಿದುಕೊಳ್ಳುವದು ,ತೊಡಗಿಕೊಳ್ಳುವದಕ್ಕೆ
ಪ್ರತಿಯೊಬ್ಬರಿಗೂ ಲ್ಯೆ0ಗಿಕ ಸ್ವಾತ0ತ್ರ್ಯ ಇದೆ.
ಇದುಸ್ವಚ್ಛ0ಧವಾಗಿ ಹೂ ಬಿಡುವಲ್ಲಿ  ಹೂ ಅರಳಬೇಕೆ ಹೊರತು ಹೂ ಬಾಡದ0ತಾಗ
ಬಾರದು .
 
ಇವೆಲ್ಲಾ ಕಾರಣಗಳಿಗಾಗಿ ಲ್ಯೆ0ಗಿಕ ಶಿಕ್ಷಣ
ಅವಶ್ಯ.ವಿಧ್ಯಾರ್ಥಿ/ವಿಧ್ಯಾರ್ಥಿನಿಯರು 
14-15 ನೇ ವರ್ಷಕ್ಕೆ ಕಾಲಿಟ್ಟಾಗ ಲ್ಯೆ0ಗಿಕ
ಶಿಕ್ಷಣದ ಬೋಧನೆ ಅವಶ್ಯವಿದೆ.
ಇದಕ್ಕಾಗಿ ತಜ್ನರ ,ವ್ಯದ್ಯರ ,ಸಲಹೆಕೂಡಾ
ಮುಖ್ಯ.
 
  ಲ್ಯೆ0ಗಿಕ ಶಿಕ್ಷಣದ ಜೊತೆ ಜೊತೆಗೆ
ಅಸಿ0ಧು -ಅಸ0ಭದ್ದ ,ಸಾಧುವಲ್ಲದ ,ಹೇಸಿಗೆ
ಬರಿಸುವ ವಿಕೃತ ಲ್ಯೆ0ಗಿಕ ಪ್ರಕರಣಗಳುಈಗೀಗ
ಹೆಚ್ಚಾಗುತ್ತಿವೆ.ಇದನ್ನು ತಡೆಯಬೇಕು.ಮುಕ್ತ
ಆಪ್ತ ಸಮೋಲೋಚನಾ ಕೇ0ದ್ರಗಳನ್ನು
ಜನಿಬಿಡ ಸ್ಥಳಗಳಲ್ಲಿ ತೆರೆಯಬೇಕು.

Monday, January 29, 2018

"  ಸಹಿಷ್ಣುತೆ --  ಜನನಾಯಕ  "
   ---   -----   -----   -----  -----'
"ಯಾರಲ್ಲಿ ಪರಧರ್ಮ ಸಹಿಷ್ಣುತೆ ಇದೆಯೋ..?
   ಯಾರಲ್ಲಿ ಪರರ ಶ್ರೀಮಂತಿಕೆ,ಆಡಂಬರ
    ಸಹಿಷ್ಣುತೆ ಇದೆಯೋ..?
   ಯಾರಲ್ಲಿ ಪರರ ಕಾಯಕ  ಜೀವನಾಧಾರ
   ಸಹಿಷ್ಣುತೆ ಇದೆಯೋ..?
  ಅವನೇ ನಿಜವಾದ ಜನನಾಯಕ.
 
       ಈ ಗುಣಗಳನ್ನು ಗಳಿಸಿಕೊಂಡವನು,
ನೂರಾರು ಜನರನ್ನು ಆಕರ್ಷಿಸಬಲ್ಲ ನಾಯಕ
ನಾಗುತ್ತಾನೆ.ಈ ಗುಣಗಳು ಬೆಳೆದಂತೆಲ್ಲಾ
ಊರಗಡಿದಾಟಿ ,ರಾಜ್ಯ ಗಡಿದಾಟಿ ,ರಾಷ್ಟ್ರದ
ಪ್ರಮುಖರ ಪಟ್ಟಿಯಲ್ಲಿ ತನ್ನಷ್ಟಕ್ಕೆ ತಾನೆ
ಸೇರಿಬಿಡುತ್ತಾನೆ.
 
  ಮ್ಯೆಕುಗಳ ಗುದ್ದಾಟ,ಪ್ಲೆಕ್ಸಗಳಹಾವಳಿ,
ತಿಂಡಿ ಚೂರಮರಿ ಪ್ಯೆಪೋಟಿಗಳ  ಆವಾಂತರ
ಗಳು ಇವರ  ವ್ಯಕ್ತಿತ್ವದ ಬಾನಂಗಳದಲ್ಲಿ
ಇಣುಕಿ ನೋಡುವದಿಲ್ಲ.
ಇಂತಹ ಗುಣಗಳಿಂದ ಜನಿತವಾದ ನಾಯಕ
ಜನನಾಯಕನಾಗುತ್ತಾನೆ.ದೃವತಾರೆಯಾಗು
ತ್ತಾನೆ.
  "  ಸಂಗಾನ ಮಾತು. --  381. "
    ---   -----   ------   ----
  *  ಪರರ ಹಂಗು ,ಪರರ ನೆರಳು
      ಪರರ ಅನ್ನಾದಿಗಳು
      ಗುಲಾಮಗಿರಿಗೆ ತಳ್ಳುತ್ತವೆ.

  *   ನಿಂದಿಸುವ ಮೊದಲು
       ನಿಂದಿಸುವಾತನ
       ನೊಂದ ಮನಸ್ಸು  - ಹೃದಯ  ಭಾಷೆ
       ಅರಿತರೆ - ನಿಜವಾದ ಅಂತರ್ಯ
       ತಿಳಿಯಲು ಸಾಧ್ಯವಾಗುತ್ತದೆ.

  *    ಪೌರುಷಗಳು ವಿಜೃಂಬಿಸಬೇಕಾದರೆ
        ನಾವು ನಮ್ಮ ವ್ಯಕ್ತಿತ್ವದ  ಮೊದಲ
        'ಧಣಿ ' ನಾವಾಗಬೇಕು.

Friday, January 26, 2018

" ಪ್ರಜಾರಾಜ್ಯೋತ್ಸವ  "
       -----   -----   ----'
    ವಿವಿಧ ಜನಾಂಗ ,ವಿವಿಧ ರಾಜ್ಯ ,ವಿವಿಧ ಭಾಷೆ ,
ವಿವಿಧ ಕಲೆಗಳು ಸೇರಿದಂತೆ ಜಗತ್ತಿನ
ಲ್ಲಿಯೇ  ಅತ್ಯಂತ ವ್ಯೆಶಿಷ್ಟಮಯ ಸಂಸ್ಕೃತಿಯನ್ನು
ಹೊಂದಿದ ಏಕ್ಯೆಕ ದೇಶ ಭಾರತ. ವಿವಿಧತೆಯಲ್ಲಿ
ಏಕತೆಯನ್ನು ರೂಡಿಸಿಕೊಂಡು ,ಬಹು ವ್ಯೆವಿಧ್ಯ
ಮಯ ಜೀವನಕ್ರಮವನ್ನು ಅನಾದಿ ಕಾಲದಿಂದ
ಲೂ ಆಚರಸುತ್ತಾ ಬಂದಿದೆ.ಇದೇ ನಮ್ಮ
ದೇಶದ ಅಮರ ಪರಂಪರೆ. "ವಿವಿಧತೆಯಲ್ಲಿ
ಏಕತೆ "-- ಈ ಧ್ಯೇಯವನ್ನೇ  ನಮ್ಮ ಸಂವಿಧಾನ
ದಲ್ಲಿ ಆಳವಡಿಸಿದ್ದು ಬಹು ಹೆಮ್ಮೆಯ ವಿಷಯ.
26 ಜನೇವ್ಹರಿ 1950 ರಂದು ನಮ್ಮ ದೇಶ
ಸಂವಿಧಾನವನ್ನು ಅಂಗೀಕರಿಸಿತು. ಆ ದಿನವೇ
ನಮ್ಮ ರಾಷ್ಯ್ರವನ್ನು "ಪ್ರಜಾರಾಜ್ಯ "ಗಣರಾಜ್ಯ "
ವೆಂದು ಅಧಿಕೃತವಾಗಿ ಘೋಷಿಸಲಾಯಿತು.

    68ನೇ ಪ್ರಜಾರಾಜ್ಯೋತ್ಸವ ಆಚರಿಸುವ
ಈ ಸಂಧರ್ಭದಲ್ಲಿ ರಾಷ್ಟ್ರವು ಅಮೋಘ ಸಾಧನೆ
ಸಾಧಿಸಿದೆ.

       ಬರೀ ಅಡುಗೆ ಮನೆಗೆ ಸೀಮಿತವಾಗಿದ್ದ
ನಮ್ಮ ಹೆಣ್ಣು ಮಕ್ಕಳು ಈದೀಗ ಸಮಾಜದ
ಎಲ್ಲಾ ಸ್ತರಗಳಲ್ಲಿ ಉಧ್ಯೋಗ ,ಅಧಿಕಾರ
ಪಡೆದಿದ್ದಾರೆ.ರಾಷ್ಟ್ರದ ಪರಮೋಚ್ಛ ಸ್ಥಾನವನ್ನು
ಅಲಂಕರಿಸಿದ್ದಾರೆ.

  ಕೃಷಿ,ಶ್ಯೆಕ್ಷಣಿಕ ,ಸಾಮಾಜಿಕ ,ಮಾಹಿತಿ
ತಂತ್ರಜ್ನಾನ ,ಸೌರ ವಿಜ್ನಾನ ,ಸೇನಾರಂಗ,
 ಕ್ಷೇತ್ರದಲ್ಲಿ ಅಭಿವೃದ್ಫಿಯ ಧಾಪುಗಾಲು ಹಾಕು
ತ್ತಿದೆ.ಜಗತ್ತೇ ಬೆರಗಾಗುವಂತೆ  ಮಾಡಿದೆ.
ಬ್ಯಾಂಕಿಂಗ ವ್ಯವಹಾರ ,ಡಿಜಿಟಲಿಕರಣವೂ
ಹಳ್ಳಿಯನ್ನು ಪ್ರವೇಶಿಸುತ್ತಿದೆ.

    ಹಳ್ಳಿಯಿಂದ ನಗರಪ್ರದೇಶದ ಪಂಚಾಯ್ತಿ,
ಶಾಲಾ ಕಾಲೇಜು,ಸರಕಾರಿ ಕಛೇರಿಗಳ
ಕಟ್ಟಡಗಳ ಮೇಲೆ ಧ್ವಜಾರೋಹಣ ಮಾಡಿ,
ರಾಷ್ಯ್ರಗೀತೆಹಾಡಿ ,ತ್ರಿವರ್ಣ ಧ್ವಜಕ್ಕೆ ಗೌರವ
ವಂದನೆ ಸಲ್ಲಿಸುತ್ತೇವೆ.

   ಈದಿನ ವಿವಿಧ ಬಗೆಯ ಮನೋರಂಜನೆ,
ಸಾಂಸ್ಕೃತಿಕ,ಕ್ರಿಡಾಸ್ಪರ್ದೆ  ಚರ್ಚಾಕೂಟ ,
ಸ್ವಾತಂತ್ರ ಯೋಧರ ಗುಣಗಾನ,ರಾಷ್ಟ್ರ ಮಟ್ಟದ
ವಿಚಾರ ಗೋಷ್ಟಿಗಳನ್ನು ಏರ್ಪಡಿಸಿ ,ಪ್ರಜೆಗಳಲ್ಲಿ
"ರಾಷ್ಟ್ರ ಜಾಗೃತಿ "  ಮೂಡಿಸುವದು ಈ
ಕಾರ್ಯಕ್ರಮದ ಹಿನ್ನಲೆಯಾಗಿದೆ.
ಅನೇಕ ರಾಷ್ಟ್ರ ಕವಿಗಳು ರಚಿಸಿದ ರಾಷ್ಟ್ರ ಭಕ್ತಿ
ಗೀತೆಗಳು ಕೇಳುಗರಲ್ಲಿ ರೋಮಾಂಚನ
ಮೂಡಿಸುತ್ತವೆ.

   ಸಾರ್ವಭೌಮತೆ , ಭಾತೃತ್ವ ,ಸೌಹಾರ್ಧತೆ ,
ಜಾತ್ಯಾತೀತ -ಮುಂತಾದವುಗಳನ್ನು  ಮನನ
ಮಾಡುವಲ್ಲಿ ಹಾಗು ಅವುಗಳನ್ನು  ಆಚರಣೆಯಲ್ಲಿ
ಕಾರ್ಯಗತಗೊಳಿಸಲು ಸ್ಯದ್ಧಂತಿಕವ್ವಾಗಿ
ಪ್ರತಿ ವರ್ಷ ಆಚರಿಸುವ ಈ ಪ್ರಜಾರಾಜ್ಯೋತ್ಸ
ವವು ಎಲ್ಲರಲ್ಲಿ ಸಮಗ್ರತೆ ,ಒಗ್ಗಟ್ಟು ತರಲಿ. ,
ದೇಶವನ್ನು ಸುಭದ್ರವನ್ನಾಗಿ  ಮಾಡುವಲ್ಲಿ
ಪರಸ್ಪರ ಕ್ಯೆ ಜೋಡಿಸುವ ಚಿಂತನೆಗಳನ್ನು
ಸ್ವಾಗತಿಸೋಣ.
  ಜ್ಯೆಭಾರತ :ಜ್ಯೆ ಹಿಂದ
ವಂದೇ ಮಾತರಂ.

Tuesday, January 23, 2018


 " ಸ0ಗಾನ ಮಾತು - 362. "
   ---  ---   -----   --------------
  * ಅರ್ಥ ,ಭೂಮಿ ,ರಕ್ಷಣೆ ,ಜನಶಕ್ತಿ
    ಪ್ರಜಾಶಕ್ತಿಯ ನಾಲ್ಕು ಆಧಾರ ಸ್ಥ0ಭಗಳು.

  *  ಮುಳ್ಳಿಲ್ಲದ ಭೂಮಿಯಿಲ್ಲ
      ಕಪಟರಿಲ್ಲದ ಜಗವಿಲ್ಲ
     ಮುಳ್ಳು -ಕಪಟ ಕಸದ ಕೊಳೆ
      ಕಿತ್ತೊಗೆದು ಮು0ದೆ ಸಾಗಬೇಕು.

  *  ತಾಪ ಹೆಚ್ಚಲು ಕ್ರೋಧ
      ತಾಪ ತಣ್ಣಗಾಗಲು ಶಾ0ತಿ
     ಕ್ರೋಧ - ಶಾ0ತಿಗೆ ತಾಪವೇ ಕಾರಣ.

"ಯಾಕೆ ಹಿಂಗಾಯ್ತು "
      ----   -----   -------
ಯಾಕೆ ಹಿಂಗಾಯ್ತು..?ಎಲ್ಲಿ ಆಯ್ತು..?
ಯಾವಾಗ ಆಯ್ತು..?ಹೇಗಾಯ್ತು..?
ಮತ್ತೇನಾಯ್ತು..?ಮತ್ತೇನಾಗಬೇಕು..?
ಮತ್ತೇನಾಗಬಾರದು.?ಮತ್ತೇನಾಗಲಿಲ್ಲ..?

   ಇಂತಹ ಪ್ರಶ್ನೆಗಳಿಗೆ  ಉತ್ತರ ಬಹುತೇಕ
ಮೌನ. ವಿಮರ್ಶಕರ ಭಾಷೆಯಲ್ಲಿ  'ಮೌನ '
ವೆಂಬುದು ಶೇ.75%ರಷ್ಟು ಬಹುತೇಕ ಒಪ್ಪಿಗೆ/
ಒಪ್ಪಿತ/ಒಪ್ಪಿದ/ಸಮ್ಮತ/ಅನ್ನುವಂತೆ ಭಾವಿಸ
ಲಾಗುತ್ತದೆ.

ಕೆಲವೊಂದು ವಿಷಯಗಳಲ್ಲಿ ಉತ್ತರ ಹುಡುಕು
ವದು ಕಷ್ಟ. ಅದಕ್ಕೆ ಸಾಕ್ಷಿ ,ಪುರಾವೆ ಸಿಕ್ಕರೂ
ಸಮಸ್ಯೆ ಪರಿಹಾರವಾಗುವದಿಲ್ಲ.ಇನ್ನಷ್ಟು
ಗೊಂದಲಮಯವಾಗುತ್ತದೆ.

  ಈ ಎಲ್ಲ ಪ್ರಶ್ನೆಗಳನ್ನು ತುಂಬಿಕೊಂಡೊ
ತಲೆಯನ್ನು 'ತೌಡಿನ ಡಬ್ಬಿ ' -ಮಾಡುವದರಿಂದ
ಏನು ಪ್ರಯೋಜನವಿಲ್ಲ.

ಇಂತಹ ಪ್ರಶ್ನೆಗಳನ್ನು ಕೇಳುವದಾಗಲಿ/ಇಂತಹ
ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಬದಲಾಗಿ
'ಸ್ಪೂರ್ತಿ- ಮುಂದೆ ಸಾಗಲು ಆಸರೆಯಾಗುವ
'ಆಸರೆಯಾಗುವ,ಆಶಾಕಿರಣ -ಆಶಾವಾದ
ಕಡೆ ಹೆಜ್ಜೆ ಹಾಕಿದರೆ -ಸುತ್ತಲಿನ ಪ್ರದೇಶವೆಲ್ಲಾ
ಅಚ್ಚು-ಹಸಿರಾಗಿ ಕಾಣುತ್ತದೆ.ಮಡಗಿದ್ದ ಚ್ಯೆತನ್ಯ
ಹೊರಸೂಸುತ್ತದೆ. ಏನಾದರೂ ಮಾಡಬೇಕೆಂಬ
ಉತ್ಕಟವುಂಟಾಗುತ್ತದೆ.ಆದರ್ಶದ ಆಶಾವಾದಿತ್ವ
ವಾಗುತ್ತದೆ.

Saturday, January 20, 2018

  "  ಕಾಲ. "
        ------  -------
  *  ಬೇತಾಳವನ್ನು ಬೆನ್ನಿಗೆ ಹಾಕಿಕೊ0ಡೇ
      ಹೋಗುವ - ತ್ರಿವಿಕ್ರಮ ಕಾಲವಿದು.

  *  ಅಸಾ0ಭವ್ಯಗಳನ್ನು -ಸಾ0ಭ್ಯವಾಗಿಸುವ
     ಸಾ0ಭವ್ಯಗಳನ್ನು -ಅಸಾ0ಭವ್ಯಗಳನ್ನಾ
     ಗಿಸುವ ಕಾಲವಿದು.

  *   ರ0ಜಿಸುವ ವಿಷಯಗಳನ್ನು
       ಅತೀಯಾಗಿ ರ0ಜಿಸುತ್ತಾ -ರ0ಜಿಸುತ್ತಾ..
       ಹೃದಯವನ್ನು ಮ0ಜಾಗಿಸುವ
       ಕಾಲವಿದು.
 "  ಸಂಗಾನ  ಮಾತು --376"
    --   ------   -------  ------'-
  *  ಡಿಜಿಟಲ್ ಕಾಯಿನ್ನ್
      ಅಟೋಮ್ಯಾಟಿಕ್-ಯಾವ ಕ್ಷಣದಲ್ಲೋ..
       ಹಾರ್ಟ್ ಬೀಟ್ ನಿಲ್ಲಿಸುತ್ತೆ.

  *   ರಾಷ್ಟ್ರೀಕರಣದಲ್ಲಿ ಹೆಚ್ಚು ಸೌಲಭ್ಯ
       ಖಾಸಗಿಕರಣದಲ್ಲಿ ಹೆಚ್ಚು ಭದ್ರತೆ.

  *    ಮೌಲ್ಯ ಕುಸಿದಂತೆ
        ಆಗ್ರಹ  ರಾರಾಜಿಸುತ್ತದೆ.

Friday, January 19, 2018

  "   ಸಂಗಾನ. ಮಾತು --380  "
     ----   ------   -----   ---
  *  '  ಉದಾರೀಕರಣ ' ನೀತಿ
         ಉದಾರತ್ವ ಬೆಳೆಸುವ ಬದಲು
          '  ಉದ್ರಿ '- ಬೆಳೆಸುತ್ತಿದೆ.
 
  *     ಹಿಂಸೆಯಿಲ್ಲದ
         ಮೋಜು - ಗೋಜು
         ಮನೋರಂಜನೆ.
 
  *      ಕೆಟ್ಟು  ಸುಟ್ಟು ಹೋದಮೇಲೆ
          ಹೊಸ ಬಟ್ಟೆ ತಂದರೆ
             'ಶವಯಾತ್ರೆ '