Tuesday, January 23, 2018


"ಯಾಕೆ ಹಿಂಗಾಯ್ತು "
      ----   -----   -------
ಯಾಕೆ ಹಿಂಗಾಯ್ತು..?ಎಲ್ಲಿ ಆಯ್ತು..?
ಯಾವಾಗ ಆಯ್ತು..?ಹೇಗಾಯ್ತು..?
ಮತ್ತೇನಾಯ್ತು..?ಮತ್ತೇನಾಗಬೇಕು..?
ಮತ್ತೇನಾಗಬಾರದು.?ಮತ್ತೇನಾಗಲಿಲ್ಲ..?

   ಇಂತಹ ಪ್ರಶ್ನೆಗಳಿಗೆ  ಉತ್ತರ ಬಹುತೇಕ
ಮೌನ. ವಿಮರ್ಶಕರ ಭಾಷೆಯಲ್ಲಿ  'ಮೌನ '
ವೆಂಬುದು ಶೇ.75%ರಷ್ಟು ಬಹುತೇಕ ಒಪ್ಪಿಗೆ/
ಒಪ್ಪಿತ/ಒಪ್ಪಿದ/ಸಮ್ಮತ/ಅನ್ನುವಂತೆ ಭಾವಿಸ
ಲಾಗುತ್ತದೆ.

ಕೆಲವೊಂದು ವಿಷಯಗಳಲ್ಲಿ ಉತ್ತರ ಹುಡುಕು
ವದು ಕಷ್ಟ. ಅದಕ್ಕೆ ಸಾಕ್ಷಿ ,ಪುರಾವೆ ಸಿಕ್ಕರೂ
ಸಮಸ್ಯೆ ಪರಿಹಾರವಾಗುವದಿಲ್ಲ.ಇನ್ನಷ್ಟು
ಗೊಂದಲಮಯವಾಗುತ್ತದೆ.

  ಈ ಎಲ್ಲ ಪ್ರಶ್ನೆಗಳನ್ನು ತುಂಬಿಕೊಂಡೊ
ತಲೆಯನ್ನು 'ತೌಡಿನ ಡಬ್ಬಿ ' -ಮಾಡುವದರಿಂದ
ಏನು ಪ್ರಯೋಜನವಿಲ್ಲ.

ಇಂತಹ ಪ್ರಶ್ನೆಗಳನ್ನು ಕೇಳುವದಾಗಲಿ/ಇಂತಹ
ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಬದಲಾಗಿ
'ಸ್ಪೂರ್ತಿ- ಮುಂದೆ ಸಾಗಲು ಆಸರೆಯಾಗುವ
'ಆಸರೆಯಾಗುವ,ಆಶಾಕಿರಣ -ಆಶಾವಾದ
ಕಡೆ ಹೆಜ್ಜೆ ಹಾಕಿದರೆ -ಸುತ್ತಲಿನ ಪ್ರದೇಶವೆಲ್ಲಾ
ಅಚ್ಚು-ಹಸಿರಾಗಿ ಕಾಣುತ್ತದೆ.ಮಡಗಿದ್ದ ಚ್ಯೆತನ್ಯ
ಹೊರಸೂಸುತ್ತದೆ. ಏನಾದರೂ ಮಾಡಬೇಕೆಂಬ
ಉತ್ಕಟವುಂಟಾಗುತ್ತದೆ.ಆದರ್ಶದ ಆಶಾವಾದಿತ್ವ
ವಾಗುತ್ತದೆ.

No comments: