Wednesday, January 10, 2018


   "ಸೃಷ್ಟಿ "
                       ------------
ಭೂಮಿ ,ಜಲ ,ವಾಯು ,ಆಕಾಶ ,ಅಗ್ನಿಇವು
ಸೃಷ್ಟಿಯ ಅಪೂರ್ವ ಕೊಡುಗೆಗಳು.ಪೃಥ್ವಿಯ
ಮೇಲಿನೆ ಸಕಲ ಜೀವರಾಶಿಗಳ ಅಳಿವು -ಉಳಿವು
ಕೂಡಾ ಸೃಷ್ಟಿಯ ಕೊಡುಗೆ.

      ಈ ಅಮೂಲ್ಯವಾದ ಕೊಡುಗೆಗಳನ್ನು
ಮನುಷ್ಯ ,ಪ್ರಾಣಿ,ಜೀವರಾಶಿಗಳೆಲ್ಲವೂ
ತಮಗೆಷ್ಟು  ಬೇಕೋ ಅಷ್ಟನ್ನು ಬಳಿಸಿ ,
ಮಿಕ್ಕದ್ದನ್ನು ಸೃಷ್ಟಿಯಲ್ಲಿ ಬಿಟ್ಟು ಹೋಗುವದು
ಸೃಷ್ಟಿಯ ನಿಯಮ. ಪ0ಚ ಮಹಾಭೂತಗಳು
ಕುಗ್ಗುವದು ಇಲ್ಲ.ಹಿಗ್ಗುವದು ಇಲ್ಲ. ಆದರೆ
ಬುದ್ಧಿವಂತನಾದ ಮನುಷ್ಯ  ತನ್ನ ಬುದ್ಧಿ
ಚಾತುರ್ಯದಿ0ದ  ಇವುಗಳಿಗೆ ಕಟ್ಟಳೆ
ವಿಧಿಸಿ ,ಸಾಮ್ರಾಜ್ಯವಾಳುತ್ತಾ ಕೊನೆ -ಕೊನೆಗೆ
ಸೃಷ್ಟಿಯಲ್ಲಿಯೇ ಲೀನವಾಗುತ್ತಾನೆ.

      ಮನುಷ್ಯ ಜೀವರಾಶಿಗೆ 'ತನ್ನದೆನ್ನುವದು '
ಏನು ಇಲ್ಲ. ಆದರೂ ತನ್ನದೂ ಎ0ದು
ಬಡಬಡಿಸುತ್ತ ಕೊನೆಗೆ ಕೊನೆಯುಸಿರೆಳೆಯು
ವದು ತಪ್ಪಲ್ಲ. ಇದನ್ನು ಅರಿತ ಮಾನವ ಅದೇ
ಜಾಡಿನಲ್ಲಿ ಸಿಲುಕುವ  ಆಕರ್ಷಣೆಗೊಳಗಾಗು
ತ್ತಾನೆ.ಸೃಷ್ಟಿಯ ದಾಸನಾಗುತ್ತಾನೆ.ಇದು
ವಿಧಿ ನಿಯಮ.ದ್ಯೆವ ಲೀಲೆ.
" ಶ್ರೀ ಕೃಷ್ಣರ್ಪಣಮಸ್ತು

No comments: