Saturday, January 6, 2018

  " ಧನಾತ್ಮಕ  "
          -----  ----------
       ಧನಾತ್ಮಕ ಚಿ0ತನೆಯಿ0ದ ಸಾಕಷ್ಟು
ಪ್ರಯೋಜನಗಳಿವೆ.ಧನಾತ್ಮಕ ಚಿ0ತನೆಗಳನ್ನು
ಪುಟಗಟ್ಟಳೇ ಹೇಳುವದು ಸುಲಭ. ಆಚರಿಸು
ವದು ಬಹು ಕಷ್ಟ.ಒಮ್ಮೊಮ್ಮೆ ಧನಾತ್ಮಕ
ಚಿ0ತನೆಗಳಿ0ದ  ನಗೆಪಾಟಿಲುಗಿಡಾಗುವ
ಸ0ಭವವು0ಟು.ಅತಿರೇಕಕ್ಕೆ ಹೋದಾಗ
ಧನಾತ್ಮಕ ಮೌಲ್ಯಗಳ ಬಗ್ಗೆ ನ0ಬಿಕೆಯ
ಬದಲಾಗಿ'ಹುಸಿ ನ0ಬಿಕೆ ' ಜನನವಾಗುತ್ತದೆ.
  ಅತೀಯಾದ ಶ್ರಮ  ನ0ಬಿಕೆ ,ವಿಶ್ವಾಸವಿಟ್ಟು
ದುಡಿದವರು ,ದುಡಿಯುತ್ತಿರುವವರಲ್ಲಿ- ಅವರ
ಶ್ರಮಕ್ಕೆ ,ದುಡಿತಕ್ಕೆ ಸೂಕ್ತ ಫಲ ದೊರಕದಿದ್ದಲ್ಲಿ-
ನಿರಾಶೆ,ಹತಾಶೆ ಭಾವನೆ ಗರಿಗೆದರುವದು
ಸಹಜ. ಆದರೆ ಇದು ತಾತ್ಕಾಲಿಕವಾದರೂ
ಇದನ್ನೇ ಚಿ0ತಿಸಿ - ಚಿ0ತಿಸಿ ಹತಾಶೆಯ
ಮನೋಭಾವನೆಗೊಳಪಡುವವರು ಸಾಕಷ್ಟಿ
ದ್ದಾರೆ.

   ಆದರೆ ದೃಡವಾದ ಛಲ  ನ0ಬಿಕೆ ,ವಿಶ್ವಾಸ
ಶುದ್ಧವಾದ ಹಸ್ತ,ಜಿಹ್ನೆ ,ಎಲ್ಲಿ ಇರುತ್ತವೆಯೋ
ಒ0ದಿಲ್ಲಾ ಒ0ದು ದಿನ ಅವರ ಬಾಳಲ್ಲಿ ಒಳ್ಳೆಯ
ದಿನಗಳು ಬ0ದೇ ಬರುತ್ತವೆ.ಬ0ದೇ ಬರುತ್ತವೆ
ಎ0ಬ ಭರವಸೆಯಿ0ದ  ಮುನ್ನಡೆದಲ್ಲಿ
ಬೆಳಕಿನ ಜೊತೆಗೆ ಸ0ಪತ್ತು -ಸನ್ಮಾನಗಳು
ಬೆನ್ನಟ್ಟಿ ಬರುತ್ತವೆ.

   ಧನಾತ್ಮಕ ಚಿ0ತನೆ ಹಾಗು ಆ ದಾರಿಯಲ್ಲಿ
ನಡೆಯುವದು ಘೋರಾರಣ್ಯದಲ್ಲಿ ನಡೆದ0ತೆಯೇ
ಮು0ದಿಟ್ಟ ಹೆಜ್ಜೆ -ಹಿ0ದೆ ಸರಿಯಬಾರದು. ಇದು
ಮಹಾತ್ಮರು ,ವಿವೇಕಿಗಳು ,ಜ್ನಾನವ0ತರು ,
ಲೋಕಪ್ರಖ್ಯಾತರು ನಡೆದು ಬ0ದ ದಾರಿ.
ಧನಾತ್ಮಕ ಚಿ0ತನೆಯ ಮೂಲ ತಾಳ್ಮೆ
ತಾಳ್ಮಯಿ0ದ ಕಾಣುವೆವು
ಬಾಳಿನಲ್ಲಿ ಮೇಲ್ಮ್ಯೆ.
" ಶ್ರೀ ಕೃಷ್ಣಾರ್ಪಣಮಸ್ತು "

No comments: