Tuesday, January 9, 2018

  "  ತಾಳ್ಮೆ "
                ------   ----
  ತಾಳ್ಮೆಯಿಂದ  ವ್ಯಕ್ತಿಯ ಬದುಕು ಹಸನಾಗು
ತ್ತದೆ.ಬದುಕು ಗಟ್ಟಿಯಾಗುತ್ತದೆ.ಜ್ನಾನ ವೃದ್ಧಿಸು
ತ್ತದೆ.ಉದ್ಯೋಗ -ವ್ಯಾಪಾರ ಉತ್ತರೋತ್ತರ
ಅಭಿವೃದ್ಧಿಯಾಗುತ್ತದೆ.ಇದು ತಾಳ್ಮೆಯಿಂದ
ಲಭಿಸತಕ್ಕ ಪ್ರಯೋಜನಗಳು.

    ತಾಳ್ಮೆ ಕೆಲವೊಬ್ಬರಿಗೆ ಮೊದಲಿನಿಂದ
ಬಂದಿರುತ್ತದೆ.ಅವಿಭಕ್ತ ಕುಟುಂಬದಲ್ಲಿ ತಾಳ್ಮೆ
ಬಹು ಮುಖ್ಯ ಪಾತ್ರವಹಿಸುತ್ತದೆ.ತಾಳ್ಮೆಯಿಂ
ದಲೇ ಸಾಮರಸ್ಯ ,ಒಗ್ಗಟ್ಟು ,ಹಿರಿಮೆ -ಗರಿಮೆ.
ಇಲ್ಲಿ ತಾಳ್ಮೆಗೆಟ್ಟರೆ  ಎಲ್ಲವೂ ಕೆಟ್ಟು ಹೋಗುತ್ತದೆ.
ಸಂಭಂಧಗಳು ನಾಶವಾಗುತ್ತವೆ.ಇದು ಕೌಟಂ
ಬಿಕ ತಾಳ್ಮೆ.

ಸಮಾಜ ಆರೋಗ್ಯಕರವಾಗಿ ಮುನ್ನಡೆಯ
ಬೇಕಾದರೆ ವ್ಯಯಕ್ತಿಕ ಕೌಟಂಬಿಕ ತಾಳ್ಮೆ
ಎಷ್ಟು ಮುಖ್ಯವೋ,ಹಾಗೆಯೇ ವ್ಯವಹಾರಿಕ ,
ಸಾಮಾಜಿಕ ,ಧಾರ್ಮಿಕ  ಶ್ಯೆಕ್ಷಣಿಕ  ,ಮಿತ್ರತ್ವ ತಾಳ್ಮೆಯೂ ಮುಖ್ಯ.
ಇವೆಲ್ಲವೂ ಎಲ್ಲಿಯತನಕ ಒಬ್ಬರ ಹೆಗಲಿಗೆ
ಇನ್ನೊಬ್ಬರು ಹೆಗಲು ಕೊಟ್ಟು ಮುಂದೆ
ಸಾಗುತ್ತರೋ -ಅಲ್ಲಿಯವರೆಗೆ ಮಹಾನ್
'ಶಾಂತ ಸಮುದ್ರ ".ಒಮ್ಮೆ ಈ ಶಾಂತ
ಸಮುದ್ರ ಮಥಿಸಿದರೆ  ವಿಷ ಬೀಜಗಳು  ದೇಶ
ತುಂಬ ಹರಡಿ ನೂರಾರು ಸಾಮಾಜಿಕ
ಸಮಸ್ಯೆಗಳಿಗೆ ನಾಂದಿಯಾಗುತ್ತದೆ.

  'ತಾಳ್ಮೆಯ ' ಪಾಠ ಸಮ್ಯೂಕ್ ಸಂಸ್ಕೃತಿ
ಯಿಂದ ತನ್ನಿಂದ ತಾನೇ ಕಲಿಯುವಂತಹದ್ದು.
ಇದು ಯಾರಿಂದಲೂ ಹೇಳಿಸಿ  ಕಲಿಯುವಂತ
ಹದ್ದಲ್ಲ.ತನ್ನ -ತಾ -ಅರಿತು ಮು0ದೆ ಸಾಗುವ
ಪಾಠ ಈ ತಾಳ್ಮೆ.

"ತಾಳ್ಮೆ ಗಟ್ಟಿಯಾದಾಗ -ವಜ್ರ
ತಾಳ್ಮೆ ನುಚ್ಚುನೂರಾದಾಗ - ಬೂದಿ "

No comments: