Saturday, January 13, 2018

 "   ನಿಯತ್ತು   "
              ----    ---
'ನಾಯಿಗಿರುವ ನಿಯತ್ತು ಮನುಷ್ಯನಿಗೆ ಇಲ್ಲ
ನೋಡ್ರಿ '.- ಪ್ರಸಂಗ ಬಂದಾಗ ಈ ಮಾತು
ಎಲ್ಲರೂ ಆಡ್ತಾ ಇರ್ತೀವಿ.

    ವಿಶ್ವಾಸಕ್ಕೆ ,ವ್ಯವಹಾರಗಳಲ್ಲಿ ಎಣಿಸಿಕೊಂಡ
ದೇ ಇರುವ ,ಕನಸು-ಮನಸಿನಲ್ಲೂ ಕಲ್ಪಿಸದೇ
ಇರುವಘಟನೆಗಳು ಮನುಷ್ಯನಿಗೆ ಎದುರಾದಾಗ
-ಮನುಷ್ಯ ಅಸಹಾಯಕನಾಗುತ್ತಾನೆ.

ಬದಲಾದ ಕಾಲಕ್ಕೆ ತಕ್ಕಂತೆ ಮನುಷ್ಯ ಬದಲಾ
ಗಿದ್ದಾನೆ.ಬದಲಾಗುತ್ತಿದ್ದಾನೆ.'ನಿಯತ್ತು ' -ಎನ್ನು
ವುದೇ ತನ್ನ ಉಸಿರಾಗಿಸಿಕೊಂಡವ ಬರಬರುತ್ತಾ
ಅದರಲ್ಲಿ ಆಸಕ್ತಿ ಕಡಿಮೆಯಾಗಿ,ತಾನು ಎಲ್ಲರಂತೆ
ಸೋಗುಹಾಕುವ ,ಮೋಡಿಮಾಡುವ,ಬುರುಡೆ
ಬಿಡುವ  ಮಾತುಗಳಿಂದ ವಂಚಿಸುವ ಕೆಲಸಗ
ಳಲ್ಲಿ ತೊಡಗಿಸಿಕೊಳ್ಳಲು  ಪ್ರಯತ್ನಿಸುತ್ತಿದ್ದಾನೆ
'ನಿಯತ್ತು 'ನಂಬಿ ಕೂತರೆ ಈಗ ತಾನಾತು ತನ್ನ
ಕುಟುಂಬದವರು ಬೀದಿಗೆ ಬರುತ್ತೇವೆ ಎಂಬುದು
ಖಾತ್ರಿಯಾದಾಗ ಈ ಭೀತಿ ಅವನನ್ನು
ಕಾಡುತ್ತಿರುತ್ತದೆ.

   ಇದು ಮುಂದುವರೆದರೆ 'ನಿಯತ್ತು ' ಶಬ್ದವೇ
ಚಾಲ್ತಿಯಲ್ಲಿರುವದಿಲ್ಲ. ನಿಯತ್ತೇ ಹೋದಮೇಲೆ
ನಾವು ಎಷ್ಟೇ ಪರ್ಯಾಯವಾಗಿ ಸರಪಳಿ
ಹಾಕಿದರೂ  ನಿಯತ್ತಿನಷ್ಟು 'ಪ್ರಾಮಾಣಿಕತೆ '
ಸರಪಳಿಗೆ ಬರುವದಿಲ್ಲ.

'ನಿಯತ್ತು ' ಇರುವ ಕಡೆ ಗೌರವಾದರಗಳು
ಇರಲಿ.ಅಂಥವರನ್ನು ಉಳಿಸಿಕೊಳ್ಳವ ಪ್ರಯತ್ನ
ಸಮಾಜ ಮಾಡಲಿ.ಇದು ಕೂಡಾ ನಾವು
ಸಮಾಜಕ್ಕೆ  ನೀಡುವ ಅದ್ಭುತ ಕೊಡುಗೆ
ಎಂದರೆ ತಪ್ಪಾಗಲಿಕ್ಕಿಲ್ಲ.

No comments: