Tuesday, January 16, 2018

 "ವಿಜಯ  ದು0ಧುಬಿ  "
       ---   ----'     ----  -----
               " ವಿಯಯದ  ದಾರಿಯಲ್ಲಿ
ನಡೆಯುವ ಯಾತ್ರಿಕರು ವರ್ತಮಾನದಲ್ಲೇ
ಹೆಚ್ಚು ಚಟುವಟಿಕೆಯಿ0ದಿರುತ್ತಾರೆ  ".  ---
    ---ಈ ಮಾತು ನೂರಕ್ಕೆ ನೂರರಷ್ಟು
ಕ್ಷಾತ್ರ ಧರ್ಮಕ್ಕೆ ಅನ್ವಯಿಸುತ್ತದೆ. ದುಷ್ಟರನ್ನು
ಸ0ಹರಿಸುವದೇ ಕ್ಷಾತ್ರ ಧರ್ಮ.
  
ಎದುರಿಗಿದ್ದ ವ್ಯೆರಿ ಯಾರೇ ಆಗಿರಲಿ ಅವನನ್ನು
ಮರ್ಧಿಸುವದೇ ಕ್ಷಾತ್ರಿಯ ಧರ್ಮ.
ಯುದ್ಧ ,ಮಹಾಯುದ್ಧ ,ಪರಮಾಣು ಯುದ್ಧ ,
ಎಲ್ಲವೂ "ವಿನಾಶ ಕಾಲೇ ವಿಪರೀತ ಬುದ್ಧಿ "
ಎ0ಬ0ತೆ ತಮ್ಮಲ್ಲಿರುವ  ಶಸ್ತ್ರಾಸ್ತ್ರಗಳ
ಬಲದಿ0ದ ಸರಿಯಾದ ವಿದ್ಯಾಮಾನಗಳನ್ನು
ಅರಿಯದೇ ,ಒ0ದು ರಾಷ್ಟ್ರದ ಮೇಲೆ ದಾಳಿ
ಮಾಡಿ ಮಣ್ಣು ಮುಕ್ಕಿದರೂ ,ಮತ್ತೆ ಮತ್ತೆ
ದಾಳಿ ಮಾಡಿ ತೊ0ದರೆ ಕೊಡುವದು ಅವರ ಹುಟ್ಟುಗುಣ.
 
 ಶಾ0ತಿ ,ಧರ್ಮ ,ಸಹಬಾಳ್ವೆ  ಇವೆಲ್ಲವೂ
ಮಾನವ ಸಮಾಜದ ಮೂಲ ಅಡಿಪಾಯಗಳು..
ಇವಿಲ್ಲದೇ ಸಮಾಜ ಬದುಕಲಾರದು. ಆದರೆ
ಇವೆಲ್ಲವೂ ಇದ್ದು ನಾಲ್ಕು ದಿಕ್ಕುಗಳಲ್ಲಿ
ದುಷ್ಟ ರಾಕ್ಷಸರಿದ್ದರೆ ಶಾ0ತಿ ,ಧರ್ಮ ಪರಿಪಾಲ
ನೆಗೆ ಅಡ್ಡಿಪಡಿಸುತ್ತಲೇ ಇರುತ್ತಾರೆ. ಆದ್ದರಿ0ದ
ದುಷ್ಹ್ಟರನ್ನು ಸ0ಹರಿಸದೇ ಶಾ0ತಿ  ,ಧರ್ಮ
ಗಳಿಗೆ ಬೆಲೆಯಿಲ್ಲ. ಶಾ0ತಿ ,ಧರ್ಮಗಳು
ಉಳಿಯಬೇಕಾದರೆ -- ನಾವು ತತ್ಕಾಲದಲ್ಲಿ
ದುಷ್ಟರನ್ನು ಸಂಹರಿಸಿ ಮುನ್ನಡೆಯಬೇಕಾಗು
ತ್ತದೆ.
       ಕ್ಷಾತ್ರ ಯಾವಾಗಲೂ ವರ್ತಮಾನವನ್ನು
ಚಿ0ತಿಸುತ್ತದೆ.ಕ್ಷಾತ್ರ ಯಾವಾಗಲೂ ವಿಜಯ
ದು0ಧುಬಿಯನ್ನು ಮೊಳಗಿಸುತ್ತದೆ. ಕ್ಷಾತ್ರದಿ0
ದಲೇ   "ಶಾ0ತಿ  --ಧರ್ಮ "ಗಳ ಪರಿಪಾಲನೆ.
     ನಾವು ಯಾವಾಗಲೂ ವಿಜಯ ದು0ಧುಬಿ
ಯಾಗಿ ಬಾಳೋಣ.


        ಓ ವೀರ ಸ್ಯೆನಿಕರೇ...
           ನಿಮ್ಮಯ ಕೆಚ್ಚೆದೆಯ
                             ಹೋರಾಟದಿಂದ
            ನಿಮ್ಮಯ  ಪರಾಕ್ರಮದಿ0ದ
             ನಿಮ್ಮಯ ತ್ಯಾಗ ,ಬಲಿದಾನದಿ0ದ
   ಭಾರತ ಮಾತೆ  ಬಲಿಷ್ಟಳಾಗಿದ್ದಾಳೆ
  ವಿಶ್ವ ಮಾನ್ಯ ಲಕ್ಷ್ಮೀಯೂ ಆಗಿದ್ದಾಳೆ.  
     ಸರಸ್ವತಿಯೂ ಆಗಿದ್ದಾಳೆ
     ಚಾಮುಂಡಿಯೂ ಆಗಿದ್ದಾಳೆ.
  ಎಲ್ಲವೂ ನಿಮ್ಮಯ ವೀರೋಚಿತ
               ಬಲದಿಂದ,ತಂತ್ರದಿಂದ
ಓ ವೀರ ಸ್ಯೆನಿಕರೇ   ಇಗೋ  ಸ್ವೀಕರಿಸಿ
    ನಮ್ಮ ಹೃತ್ಪೂರ್ವಕ ಗೌರವ ವಂದನೆ
     ಭಾರತ ಮಾತಾ ಕೀ ಜ್ಯೆ.
     ಜ್ಯೆ  ಭಾರತ
     ಜ್ಯೆ ಜವಾನ
    ವಂದೇ ಮಾತರಂ.

No comments: