Thursday, January 11, 2018


 "  ಸಂಭಂಧದಳು. "
        ---   -----   -------
  ಒಬ್ಬರನ್ನು ಮತ್ತೊಬ್ಬರೊಂದಿಗೆ ಬೆಸೆಯುವ
ಪ್ರಕ್ರಿಯೆಗೆ  ಸಂಭಂಧವೆನ್ನುತ್ತೇವೆ.ರಕ್ತ ಸಂಭಂಧ
ಸಹೋದರ ಸಂಭಂಧ ,ಬೀಗರ ಸಂಭಂಧ ,
ವ್ಯಾಪಾರ ಸಂಭಂಧ ,ವೃತ್ತಿ ಸಂಭಂಧ ಹೀಗೆ
ಹಲವಾರು ಸಂಭಂಧಗಳಿವೆ. ನಾವು ಯಾವ
ಕ್ಷೇತ್ರದ ಜೊತೆಗೆ  ನಮ್ಮ ವಿಚಾರ ,ನಡೆಗಳನ್ನು
ಗುರುತಿಸಲು ಇಷ್ಟಪಡುತ್ತೇವೆಯೋ , ಅಲ್ಲಿ ಆ
ಸಂಭಂಧಗಳು ಜನ್ಮ ಪಡೆಯುತ್ತವೆ.

   ಅರ್ಥ-ಕಾಮ ವಿಷಯಗಳ ಮೇಲಿ0ದ
ಸಂಭಂಧಗಳ ಆಳ -ಅಗಲ-ವ್ಯಾಪ್ತಿ -ಭದ್ರತೆ
ಗುರುತಿಸಬಹುದು.ವಿಷಯಾಧಾರಿತ ಸಂಭಂಧ
ಗಳು ವಿಚಾರ -ವಿನಿಮಯಗಳಿಗಷ್ಟೆ ಸೀಮಿತ
ವಾಗಿರುತ್ತವೆ.ಅರ್ಥ -ಕಾಮ  ಸಂಭಂಧಗಳು
ಆಳಕ್ಕೆ ಹೋದಂತೆ ,ಪ್ರತಿಯೊಬ್ಬರ ಜೀವನ
ರೂಪಿಸುವಲ್ಲಿ ಅನನ್ಯ ಪಾತ್ರವಹಿಸುತ್ತವೆ.
ಅರ್ಥ -ಕಾಮ ಸರಿಯಾಗಿ ನಿರ್ವಹಿಸಿದರೆ
ಸಂಭಂಧಗಳು ಹಾಲು -ಜೇನು.ಸರಿಯಾಗಿ
ನಿಭಾಯಿಸದಿದ್ದರೆ ಸಾಗರದ ಉಪ್ಪು. ಇವುಗಳ
ಮಧ್ಯೆ ಖಾರ -ಹುಳಿ ಹಿಂಡುವ ಸಂಭಂಧಗಳು
ಆಗಾಗ್ಗೆ ಇಣುಕಿ ಕೆಲವರಲ್ಲಿ ಚಿಗುರಲು ಅವಕಾಶ
ಮಾಡಿದರೆ ಇನ್ನು ಕೆಲವರಿಗೆ ಮಸಣಕ್ಕೆ ದಾರಿ
ತೋರಿಸುತ್ತವೆ.

ಸಂಭಂಧಗಳು ಮನುಷ್ಯ ನಿರ್ಮಾತೃ ಆದರೂ,
ನಿರ್ಮಿಸಿದವರ ಭುಜಬಲ -ಜ್ನಾನಬಲ
ಅರ್ಥಬಲ ,ವಾಕ್ ಸಾಮರ್ಥ್ಯ,ವಿಷಯ ನಿಭಾಯಿ
ಸುವಿಕೆಗಳ ಮೇಲೆ  ಸಂಭಂಧಗಳ ಆಡಂಬರ
ನಿರಾಂಡಂಬರಗಳಿವೆ.

  ಲೌಕಿಕ ಜೀವನದಲ್ಲಿ ಯಾವ ಸಂಭಂಧಗಳು
ಇಷ್ಟವೋ, ಆ ಸಂಭಂಧವನ್ನು ಆಯ್ಕೆ ಮಾಡಿಕೊ
ಳ್ಳುವ ಐಚ್ಛಿಕತೆ ಇದೆ.ಇದರ ಮೇಲಿಂದ  ಆತನ
ವ್ಯಕ್ತಿತ್ವ ವಿಕಸನ -ಅವಸಾನ ಎರಡೂ ಇದೆ.
ಯಾವುದೇ ಸಂಭಂಧ ಗಳನ್ನು ಬೆಳಸಿದರೂ
ಅದು ಚಿಗುರೊಡೆದು ಫಲ ಬಿಡಬೇಕಾದರೆ
ಸನ್ಮಿತ್ರರೆಂಬ ಸದಾಚಾರ ಬಯಸುವ ಗೆಳೆಯರ
ಅವಶ್ಯಕತೆ ಇದೆ.

No comments: