Friday, January 5, 2018

   " ಸಿಡಕು  "
             ---------
ಸಿಡುಕು ಅರ್ಥಾತ ಮು0ಗೋಪ.ಕೆಲವೊಬ್ಬರಿಗೆ
ಇದು ಮೂಗಿನ ನೇರಕ್ಕೆ ಇರುತ್ತದೆ. ಇನ್ನು
ಹಲವರಿಗೆ ರ0ಜನೆಯ ಆಟ.

   ಮನುಷ್ಯನ ಚಹರೆಯನ್ನು ಅರಿತ ಗೆಳೆಯರು
ಸ0ಭ0ಧಿಕರು -ಆತನನ್ನು ಮು0ಗೋಪಕ್ಕೆ
ಬ್ಬಿಸುವಲ್ಲಿ ಯಾವ ಶಬ್ದ ಉಪಯೋಗಿಸಬೇಕು ,
ಏನು ಮಾಡಬೇಕು ಎ0ಬುದು ಚೆನ್ನಗಿ ಗೊತ್ತಿ
ರುತ್ತದೆ.ಇದು ಕೇವಲ ಸಮಯ ಹರಣಕ್ಕಾಗಿಯೇ
ಹೊರತು  ಆತನನ್ನು ಉದ್ದೇಶಪೂರಕವಾಗಿ
ಕೆಣಕಬೇಕೆ0ಬುದಿರುವದಿಲ್ಲ.

  ಒಮ್ಮೊಮ್ಮೆ  ಇ0ತಹ ಹಲವಾರುಘಟನೆಗಳು
ಸಿನಿಮಯವಾಗಿದ್ದರೂ , ಗುರುತರ  ದುರ್ಘಟನೆ
ಗಳಿಗೆ ಕಾರಣಗಳಾಗುತ್ತವೆ. ಗೆಳೆಯರು
ಶತೃಗಳಾಗುತ್ತಾರೆ. ಶತೃಗಳು ಇ0ತಹ ಸಮಯ
ಕ್ಕಾಗಿ ಕಾಯ್ದು  ,ತಮ್ಮ ಬೇಳೆಯನ್ನು ಬೇಯಿಸಿ
ಕೊಳ್ಳಲು ಹೊ0ಚುಹಾಕುತ್ತಿರುತ್ತಾರೆ.

   ಸಾತ್ವಿಕ ಮು0ಗೋಪ ಸಾಧುವಾಗಿರುತ್ತದೆ.
ಕಲ್ಮಶ ಇರುವದಿಲ್ಲ.ಇತರೆ ಮು0ಗೋಪಗಳು
ಇನ್ನಿಲ್ಲದ ,ಎಣೆಯಿಲ್ಲದ  ಹಗರಣಗಳಿಗೆ ಕಾರಣ
ಗಳಾಗುತ್ತವೆ.

ಸಿಡುಕು ಯಾವಾಗಲೂ ಸಿಡುಕಾಗಿರಲಿ.
ಸಿಡುಬಾಗುವದು ಬೇಡ.ನಲ್ಮೆಯ ಸಿಡುಕಾಗಿರಲಿ.
ಹಿತ್ಯೆಷಿಯಾಗಿರಲಿ.
ಎನ್.ಆರ್.ಸ0ಗಾ

No comments: