Wednesday, January 17, 2018

"  ಓಲ್ಯೆಕೆ  "
                 ----  ------
ಒಲಿಯುವ ಕ್ರಿಯೆಗೆ ಓಲ್ಯೆಕೆ ಎನ್ನುತ್ತೇವೆ.
ಒಬ್ಬರನ್ನು ಒಲಿಸಬೇಕಾದರೆ ಇನ್ನೊಬ್ಬರು
ಅತೃಪ್ತರಿದ್ದಾರೆ ಅಂತಾ ಅರ್ಥ.ಅತೃಪ್ತರನ್ನು
ಒಲಿಸಬೇಕಾದರೆ,ಅತೃಪ್ತರ ಮನೋಭಾವನೆ
ಗಳೇನು..?ಯಾವ ವಿಷಯದಲ್ಲಿ ಅತೃಪ್ತರಾಗಿ
ದ್ದಾರೆ ಎಂಬುದನ್ನು ಚಾಣಾಕ್ಶತನದಿಂದ ಹೊರ
ತರಬೇಕು.ಈ ಹೊರ ತರುವಿಕೆ ಪ್ರಕ್ರಿಯೆಯು
ಒಮ್ಮಿಂದೊಮ್ಮೆಲೆ ಅತೃಪ್ತರನ್ನು ಭೇಟಿಯಾಗುವ
ಮೂಲಕ ನಿವಾರಣೆಯಾಗುವದಿಲ್ಲ. ಅತೃಪ್ತರಲ್ಲಿ
ಕೆಲವೊಂದು ಕೋರಿಕೆಗಳನ್ನು ಬಹಿರಂಗವಾಗಿ
ಹೇಳಿದರೆ ,ಕೆಲವು ಅವರ ಒಡನಾಟ,ಮುಖ
ಚರ್ಯೆಗಳ ಮೇಲಿಂದಲೇ ಗುರುತಿಸಬೇಕಾ
ಗುತ್ತದೆ.

ವ್ಯವಹಾರಿಕ ವಿಷಯಗಳಲ್ಲಿ ಇವುಗಳನ್ನು
ಹೇಗೋ ನಿಭಾಯಿಸಬಹುದು.ಹಾಗೆಯೇ
ಸಾಮಾಜಿಕ ವಿಷಯಗಳನ್ನು ನಿಭಾಯಿಸ
ಬಹುದು.ಸಂಭಂಧಗಳ ,ನೆಂಟರ ,ಭಾತೃತ್ವ
ವ್ಯವಹಾರಗಳು  ನಿಭಾಯಿಸುವದು ಕಷ್ಟ.
ಓಲ್ಯೆಕೆ ವಿಷಯ ತಮಗೆ ಬೇಡವಾದಲ್ಲಿ
ಯಾವುದೋ ಘಟನೆ-ಎಲ್ಲಿಯೋ ನಡೆದದ್ದು
ಯಾವುದೋ ವಿಷಯ - ಮರೆತು ಹೋಗಿದ್ದು
ಮುಚ್ವಿಹೋಗಿದ್ದು ಘಟನೆಗಳನ್ನು ಕೆದಕಿ-
ಕೆದಕಿ ತೆಗೆಯುತ್ತಾರೆ.ಇಂತಹ ವಿರೋಧಾಭಾಸ
ಗಳು ಓಲ್ಯೆಸುವ ಬದಲು ಕಿಚ್ಚು ಹಚ್ಚುತ್ತವೆ.ಈ
ವಿಷಯಗಳು ವಿಷಯಾಂತರ ವಾಗುತ್ತಿವೆಅಂತಾ
ಮನವರಿಕೆಯಾದರೆ -ಅವುಗಳನ್ನು ಆಗಿನ
ಸಮಯಕ್ಕನುಸರಿಸಿ ನಿರ್ಲಕ್ಷಿಸಬೇಕು.
ಸಣ್ಣ  ಸಣ್ಣ  ವಿಷಯಗಳ  ಓಲ್ಯೆಸುವ ಮುಂದಿನ
ಭಾಗಗಳೇ ಒಳ ಒಪ್ಪಂದ /ಒಪ್ಪಂದಗಳು.
    ಒಳ ಒಪ್ಪಂದಗಳು ಪರಸ್ಪರರಲ್ಲಿ ,ಪರಸ್ಪರ
ಗುಂಪುಗಳಲ್ಲಿ ತೆರೆಮರೆಯಲ್ಲಿ ನಡೆಯುವ ಸಂಧಾ
ನ ಪ್ರಕ್ರಿಯೆ.

  ಇನ್ನು ಒಪ್ಪಂದಗಳು ರಾಷ್ಟ್ರೀಯ ಮಟ್ಟದಲ್ಲಿ
ನಡೆಯತಕ್ಕ ವ್ಯವಹಾರಗಳು. ಇವುಗಳನ್ನು
ವಿದೇಶಾಂಗ ಹಾಗು ಸಂಭಂಧಿಸಿದ ಮಂತ್ರಾ
ಲಯಗಳು ನೋಡಿಕೊಳ್ಳುತ್ತವೆ.
ಓಲ್ಯೆಕೆ - ಸಂಧಾನ -  ಒಪ್ಪಂದ  ಈ ಮೂರು
ಕ್ರಿಯೆಗಳು ಯಶಸ್ವಿಯಾಗಲು  ಮುಖ್ಯವಾಗಿ
ಬೇಕಾಗಿರುವದು ರಾಯಭಾರಿ ಕರ್ತವ್ಯ.
ರಾಯಭಾರಿಯಾದವನು ಒಂದರ್ಥದಲ್ಲಿ
ಸರ್ವಜ್ನ.ಇಂತಹ ಮಹನೀಯರಿಂದಲೇ
ಎಷ್ಟೋ ಸಮಸ್ಯೆಗಳು ಬಗೆಹರಿದಿವೆ.

No comments: