Tuesday, January 2, 2018

 " ಬದಾಮಿ ಬನಶ0ಕರಿ ಜಾತ್ರೆ "
     ಜನೇವರಿ -2 -ಮ0ಗಳವಾರ.
   ----  ----  -----  -----  -----------'
ಯಾ ಮಾಯಾ ಮಧು ಕ್ಯೆಟಭ ಪ್ರಮಧಿನಿ
ಯಾ ಮಹಿಷನ್ಮೂಲಿನಿ
ಯಾ ಧೂಮ್ರೇಕ್ಷಣ ಚ0ಡ ಮು0ಡ ಮ0ಥಿನಿ
ಯಾ ರಕ್ತಬೀಜಾಶಿನಿ
ಶಕ್ತಿ ಶು0ಭ ನಿಶು0ಭ  ಧರ್ಪದಲಿನಿ
ಯಾ ಸಿದ್ಧ ಲಕ್ಷ್ಮಿ ಪರಾ
ಸಾ ಚ0ಡಿ ನವ ಕೋಟಿ ಮೂರ್ತಿ ಸಹಿತಾ
ಯಾ ಪಾರು ವಿಶ್ವೇಶ್ವರಿ
ಹೀಗೆ  ಐದು ಶ್ಲೋಕಗಳಿವೆ. ಇವುಗಳನ್ನು
ಯಾರು ದಿನನಿತ್ಯ ಪ್ರಾಥಃ ಕಾಲ ಪಠಿಸುವದ
ರಿ0ದ ಶ್ರೀ ದೇವಿಯು ಸ0ತುಷ್ಟಳಾಗಿ ವಿದ್ಯೆ,
ಬುದ್ಧಿ,ಸ0ಪತ್ತು ಕರುಣಿಸುವಳು.ನಮ್ಮಲ್ಲಿರುವ
ತಮೋ ಗುಣಗಳನ್ನು ನಾಶಪಡಿಸುತ್ತಾಳೆ.
  ಮಧು-ಕ್ಯೆಟಭ ,ಶು0ಭ-ನಿಶು0ಭ ,ಧೂಮ್ರಾ
ಲೋಚನ ,ಚ0ಡ-ಮು0ಡ ,ರಕ್ತಬೀಜಾಸುರ
ಮಹಿಷಾಸುರ ಮು0ತಾದ ರಾಕ್ಷಸರನ್ನು
ಸ0ಹರಿಸಿದ ಈ ಶಕ್ತಿ ದೇವತೆಯನ್ನು 'ಮಹಿಷ್
ಮರ್ಧಿನಿ 'ಚಾಮು0ಡಿ 'ಪರಾಶಕ್ತಿ' ಆದಿಶಕ್ತಿ'
ಸಿದ್ಧಲಕ್ಷ್ಮಿಯೆ0ತಲೂ ಕರೆಯುತ್ತಾರೆ.
7 ನೇ ಶತಮಾನದಲ್ಲಿ ಕಟ್ಟಿದ ಈ ಸು0ದರ
ದೇವಾಲಯದ  ಜಾತ್ರೆ ದಿನಾ0ಕ 2ನೇ
ಜನೇವರಿ ಮ0ಗಳವಾರದ0ದು ನಡೆಯಲಿದೆ.
ಚೊಳಚಗುಡ್ಡಕ್ಕೆ ಸಮೀಪವಿರುವ ಬಾಗಲಕೋಟೆ
ಜಿಲ್ಲೆಯ ಬದಾಮಿಗೆ 'ಬದಾಮಿ ಜಾತ್ರೆಗೆ ಬನ್ನಿ '.
ಉತ್ತರ ಕರ್ನಾಟಕದಲ್ಲಿಯೇ ಅತ್ಯ0ತ ವ್ಯೆಭವ
ಸಡಗರದಿ0ದ ನಡೆಯುವ ಜಾತ್ರೆ 'ಬನದ
ಹುಣ್ಣಿಮೆಯಿ0ದ -ಭರತ ಹುಣ್ಣಿಮೆಯವರೆಗೆ
ಒ0ದು ತಿ0ಗಳು ಕಾಲ  ನಡೆಯುವ ಜಾತ್ರೆ--
-ಬದಾಮಿ ಬನಶ0ಕರಿ ಜಾತ್ರೆ.ನಮ್ಮಮ್ಮನ
ಬನಸಿರಿಯ ಜಾತ್ರೆ.

ಹರಿದ್ರಾ ತೀರ್ಥ ,ಶಿವಯೋಗಮ0ದಿರ ,ಮಹಾ
ಕೂಟ,ಇತರೆ ಪುಣ್ಯ ಕ್ಷೇತ್ರಗಳನ್ನು  ಸಹ ಸ0ಧರ್ಶಿ
ಸ ಬಹುದು.
ನಮ್ಮ ಸ0ಸ್ಕೃತಿಯ ಪ್ರತಿಯೊ0ದು ಹೆಜ್ಜೆಯನ್ನು
ವಾಸ್ತವದಲ್ಲಿ ನಿರೂಪಿಸುವ  ಈ ಹಬ್ಬ 'ಉತ್ತರ
ಕರ್ನಾಟಕದ  ಸಾ0ಸ್ಕೃತಿಕ ಹಬ್ಬವೆ0ತಲೂ
ಕರೆಯಬಹುದು.ಉತ್ತರ ಕರ್ನಾಟಕದ ಆಹಾರ
ಪದ್ಧತಿಹಾಗು ರುಚಿಯನ್ನು ಸವಿಯಲು ಒಮ್ಮೆ
ಬದಾಮಿಗೆ ಬರಲೇಬೇಕು.ನಮ್ಮ ಹಳ್ಳಿಯ
ಹೆಣ್ಣು ಮಕ್ಕಳು ದೊಡ್ಡ -ದೊಡ್ಡ ಬುಟ್ಟಿಗಳಲ್ಲಿ
ಆಹಾರ ಪದಾರ್ಥಗಳನ್ನು ತು0ಬಿಕೊ0ಡು
ಬ0ದಿರುತ್ತಾರೆ.
ವಿಶೇಷವೆ0ದರೆ -ಸುತ್ತುಮುತ್ತಲು 30-40
ಕಿ.ಮಿ. ದೂರದಿ0ದ ಬರುವ ಯಾತ್ರಾರ್ಥಿಗಳಿಗೆ
ಅಲ್ಲಲ್ಲಿ ಶಿಬಿರಗಳನ್ನು ಏರ್ಪಡಿಸಿ ಯಾತ್ರಾರ್ಥಿ
ಗಳಿಗೆ ಲಘು-ಉಪಹಾರ ,ಭೋಜನದ ವ್ಯವಸ್ಥೆ
ಮಾಡಿರುತ್ತಾರೆ.
ಕರಕುಶಲ ವಸ್ತುಗಳು ,ಇಲೆಕ್ಟ್ರಾನಿಕ್ ವಸ್ತುಗಳು
ಕಪಡಾಗಳು ,ಅಡುಗೆ ಸಾಮಾನು,ಆಹಾರ
ಪಧಾರ್ಥ,   -ನಿಮಗೆ ಯಾವ
ವಸ್ತು ಬೇಕೋ ,-ಆ ವಸ್ತುಗಳು ಲಭ್ಯವಿರುತ್ತವೆ.
ಮನೋರ0ಜನೆಗೆ ನಾಟಕ -ಸಿನೆಮಾಗಳಿಗೆ
ಕೊರತೆಯಿಲ್ಲ.

ಬನಸಿರಿಯ ಜಾತ್ರೆ ನೋಡಲು ಬದಾಮಿಗೆ
ಬನ್ನಿ.
ಜ್ಯೆ ಬನಶ0ಕರಿ ಮಾತೆ.
ಶ್ರೀ ಬನಶ0ಕರಿದೇವಿಯು ನಾಡಿಗೆ ಕಲ್ಯಾಣ
ವು0ಟು ಮಾಡಲೆ0ದು ಪ್ರಾರ್ಥಿಸುತ್ತಾ ಎಲ್ಲರಿಗೂ
ಬನಶ0ಕರಿ ಜಾತ್ರೆಯ ಶುಭಾಷಯಗಳು.

No comments: