Friday, August 26, 2016

  "ಮಾತುಗಳು  "

"   ಮಾತು  ಬಲ್ಲವನಿಗೆ  ಜಗಳವಿಲ್ಲ "
"  ಮಾತೇ   ಮಾಣಿಕ್ಯ  "
"    ಮುತ್ತು  ಹೋದರೆ ಹೋಗಲಿ , 
       ಮಾತು  ತಪ್ಪಬಾರದು  "
"   ಮಾತನಾಡುವ  ನಾಲಗೆ  ಕುಲವನ್ನು
     ಸೂಚಿಸುತ್ತದೆ  "
  "  ಕೊಟ್ಟ ಮಾತಿಗೆ  :ತೊಟ್ಟು  ರಕ್ತವ  ಕೊಡು "
       
 ಹೀಗೆ ಮಾತಿನ ಬಗ್ಗೆ  ನೂರೆ0ಟು
ಗಾದೆ ಮಾತುಗಳಿವೆ.
ಒಬ್ಬರನ್ನು ಚುಚ್ಚಿ ಮಾತಾಡೋದು , ಹೀಯಾ
ಳಿಸಿ ಮಾತಾಡೋದು , ಅವರ ಏಳ್ಗೆ ಸಹಿಸದೇ
ಹೊಟ್ಟೆ ಉರಿಯಿ0ದ ಅವರಿಗೆ ಕೇಳಿಸುವ0ತೆ
ರೇಗಾಡುವದು ,ಮತ್ತೊಬ್ಬರ ಎದುರಿಗೆ
ಅವಹೇಳನ ಮಾಡೋದು , ಹಸಿ ಸುಳ್ಳು ಹೇಳಿ
ಖತರನಾಕ ಆಟ ಆಡೋದು , ---ಇವೆಲ್ಲಾ
ಹಗುರ ಮಾತುಗಳು.ಸಿನಿಕತನದ ಮಾತುಗಳು.
ಹುಸಿ. ಮಾತುಗಳು ಕೆಲವೊಬ್ಬರಿಗೆ ಹುಟ್ಟುತ್ತಲೇ
ವ0ಶಾವಳಿಯಿ0ದ ಬ0ದಿರುತ್ತವೆ.
ಬೇರೆಯವರ ಸ್ವಾಸ್ಥ  ಇವರಿಗೆ ಅನಾರೋಗ್ಯ.
  
  ಕೇಳದೆಯೇ  ನಮ್ಮ ಕಷ್ಟದಲ್ಲಿ ಸಹಕರಿಸು
ವವರು , ನಮ್ಮ ಬಗ್ಗೆ ಒಳ್ಳೆಯ ಮಾತಾಡುವವರು
ಅಗತ್ಯವಿದ್ದವರಿಗೆ ಒಳ್ಳೆಯ ಅವಕಾಶ ಕಲ್ಪಿಸಿ
ಅವರ ಕುಟು0ಬಕ್ಕೆ ನೆರವಾಗುವದು . .ಇ0ತವರು ಆಡುವ ಮಾತು 'ವಜ್ರದ0ತೆ
ಕಠಿಣ : ವಜ್ರದಷ್ಟೇ ಬೆಲೆ ಬಾಳುತ್ತೆ ".ಇವರು
ತಮ್ಮಿ0ದಾದ ಸಹಾಯವನ್ನು  ಮಾಡುತ್ತಾರೆ
ಹೊರತು ಪ್ರತಿಫಲಾಪೇಕ್ಷೆಯನ್ನು ನೀರಿಕ್ಷಿಸು
ವದಿಲ್ಲ. ಈ ಉನ್ನತ ಗುಣಗಳುಳ್ಳವರು
ಸಮಾಜದ ಉನ್ನತಿಯನ್ನೇ ನೀರಿಕ್ಷಿಸಿ ಉನ್ನತ
ಮಟ್ಟದಲ್ಲಿಯೇ ಇರುತ್ತಾರೆ.
  
 " ಮಾತು " ಇದೊ0ದು ಕಲಿಕೆಯ 
ಭಾಗವಾದರೂ ಬಹುತೇಕ ಸ0ಸ್ಕಾರದಿ0ದ
ಬ0ದ ಗುಣಗಳೇ ಇರುತ್ತವೆ.ಮಕ್ಕಳಿಗೆ
ಶಿಕ್ಷಣದ ಜೊತೆಗೆಒಳ್ಳೆಯ ಮಾತಾಡುವದನ್ನು
ಒಳ್ಳೆಯ ಸ್ನೇಹಿತರಿರುವ ಪರಿಸರವನ್ನು , ಮತ್ತು
ಆ ಪರಿಸರದಲ್ಲಿಯೇ  ಬೆಳೆಯುವ0ತೆ ನೋಡಿ
ಕೊಳ್ಳುವದು ಪಾಲಕರ ಹಾಗು  ಸಮಾಜದ
ಕರ್ತವ್ಯ ವಾಗಿದೆ.
ಮಾತು ನಮ್ಮ ನಾಗರೀಕತೆಯನ್ನು
ಸೂಚಿಸುತ್ತದೆ. ನಾಗರೀಕತೆಗೆ  ಭೂಷಣವೆನಿ
ಸುವ0ತೆ  ನಮ್ಮ ಮಾತು ನಡೆ ನುಡಿಗಳಿರಬೇಕು.
 "  ಸ0ಗಾನ  ಮಾತು "

  *  "  ನಿರ್ಭಿಡೆ ,  ನಿಷ್ಟುರತೆ  , ಪ್ರಾಮಾಣಿಕತೆ
         ಧರ್ಮದರ್ಶಿತ್ವ  , ತತ್ವನಿಷ್ಟೆ  ಈ
         ಗುಣವುಳ್ಳವರನ್ನು   ಆರಾಧಿಸು
         ಕರೆದು  ಅಧಿಕಾರ ನೀಡು  ".
  *  "   ಶಾಸಕಾ0ಗದ  ಆಶ್ರಯದಲ್ಲಿ
          ಪರಾಧೀನನಾಗಿ ಕಾರ್ಯಾ0ಗವು
          ತನ್ನ  ಕಾರ್ಯವನ್ನು  ನಿರ್ವಹಿಸುವ
          ವ್ಯವಸ್ಥೆಯು. ಪ್ರಜಾಸತ್ತೆಯೆನಿಸಲಾರದು
  *  "  ಸುಳ್ಳಿನ  ರೆಯಲನ್ನೇ  ಬಿಡುವ
         ಮುತ್ಸದ್ದಿಗಳಿರುವಾಗ  "  ನಮ್ಮದು
         ಪ್ರಜಾಪ್ರಭುತ್ವ  ರಾಷ್ಟ್ರವೆ0ದು  "
         ಮಕ್ಕಳಿಗೆ  ಹೇಳಿದರೆ ಗಹಿಗಹಿಸಿ
         ನಗದೇ  ಇನ್ನೇನು  ಮಾಡಿಯಾರು  ?"

Thursday, August 25, 2016


   "ಭಗವದ್ಗೀತೆ  -ಎರಡು ಮಾತು "
         -----   -----
        ಭಗವದ್ಗೀತೆ  ಭಾರತೀಯರೆಲ್ಲರಿಗೂ 
ಚಿರಪರಿಚಿತವಾದ ಪಾವನ ಗ್ರ0ಥ. ವಯಸ್ಸಾ
ದವರು  ದಿನಾಲು ಒ0ದೆರಡು  ಭಗವದ್ಗೀತೆಯ
ಶ್ಲೋಕವನ್ನು ಪಠಿಸುವದು ರೂಢಿ.  
  ಭಗವದ್ಗೀತೆ -ಜಗದೊಡೆಯ ಮಹಾವಿಷ್ಣು
ಅರ್ಜುನನಿಗೆ ಭೋಧಿಸಿದ ಧರ್ಮ ಕಾರಣಿಕಗಳು.
ಭಗವದ್ಗೀತೆಯಲ್ಲಿ ಸಕಲವೂ ಉ0ಟು. ಅದನ್ನು
ತಿಳಿದುಕೊಳ್ಳುವ ಮನಸ್ಥಿತಿ ನಮ್ಮಲ್ಲಿರಬೇಕು.
ದುಷ್ಟರನ್ನು  ಸದೆಬಡಿಯಲು ತೆಗೆದುಕೊಳ್ಳಬೇ
ಕಾದ ಎಲ್ಲಾ ಕಠಿಣ ಮಾರ್ಗಗಳು ,ಶಾ0ತಿ 
ಪಾಲನೆ ಬ0ದಾಗ  ಶಾ0ತಿಪಾಲನೆ ಸೂತ್ರಗಳನ್ನು
 ಹೇಗೆ  ನಿಭಾಯಿಸಬೇಕೆ0ಬ ಉಲ್ಲೇಖವು ಇದೆ.ಧರ್ಮ ಸೂಕ್ಷ್ಮತೆ ಬ0ದಾಗ
ಧರ್ಮ -ಅಧರ್ಮ ವ್ಯಾಖ್ಯಾ ನಗಳು ಇವೆ.
ಪ್ರಪ0ಚದಲ್ಲಿ ನಡೆಯುವ ಎಲ್ಲಾ ವ್ಯವಹಾರಗಳ
ಸೂಕ್ಷ್ಮಗಳು ಇಲ್ಲಿ ಇವೆ.ಯುದ್ಧ ಸ0ಧರ್ಭದಲ್ಲಿ
 ವ್ಯೂಹ ರಚನೆ ಕ್ರಮ ,ಯುದ್ಧ ತ0ತ್ರಗಳು ಇವೆ.
ಭದವದ್ಗೀತೆ -ಶಾ0ತಪ್ರಿಯರಿಗೆ ರಾಮಾಯಣ
ಕ್ಷತ್ರಿಯರಿಗೆ -ಮಹಾಭಾರತ.,ಅಹಿ0ಸಾವಾದಿಗ
ಳಿಗೆ -ಬೌದ್ಧ ಧರ್ಮ ಗ್ರ0ಥವೂ ಆಗಿದೆ.ನಾವು
ಯಾವ ಮಾರ್ಗದಲ್ಲಿ ವಿಮರ್ಷೆ ಮಾಡುತ್ತೆವೆಯೋ
 ಆ ಮಾರ್ಗದಲ್ಲಿಯೇ ಉತ್ತರ ದೊರಕುತ್ತದೆ.
ವ್ಯಾಸ ಮಹರ್ಷಿಗಳು ಮಹಾಭಾರತ ರಚಿಸಿ
ಮನುಕುಲಕ್ಕೆ  ಅಪಾರ ಜ್ನಾನ ಸಿರಿಯನ್ನೇ 
ಧಾರೆ ಎರೆದಿದ್ದಾರೆ.ಅದರ ಬೆಳಕು ,ಕ0ಪು
ತ್ರಿಲೋಕಕ್ಕೂ ಹರಡಿದೆ.ಜೀವನದಲ್ಲಿ ಸಮಯಸಿ
ಕ್ಕರೆಒಮ್ಮೆಯಾದರೂ ಅದನ್ನು  ಓದಬೇಕು.

"  ಪರಿವರ್ತನೆ "
-------------------

ಕಾಲಕ್ಕೆ ತಕ್ಕ0ತೆ ಜಗವು ಪರಿವರ್ತನೆ ಹೊ0ದುತ್ತಲೇ ಇರುತ್ತದೆ.
ಇದನ್ನು ಯಾರೂ ತಡೆಯುವದಕ್ಕೆ ಆಗುವದಿಲ್ಲ.
ಯಾರ ನಿಯ0ತ್ರಣದಲ್ಲಿಯೂ ಇಲ್ಲ.
ಇದು ಸೃಷ್ಟಿಕರ್ತನ ನಿಯಮ.
"ಪರಿವರ್ತನೆ ಜಗದ ನಿಯಮ"
ಭಗವದ್ಗೀತೆಯಬಹು ಪ್ರಸಿದ್ದ  ಭಾಷ್ಯ.
ಇದು ಎಲ್ಲರಿಗೂ ಗೊತ್ತಿರುವ0ತಿರುವದೆ.
ಆದರೆ ವಿಚಿತ್ರವೆ0ದರೆ ಈನಿಯಮ ಎಲ್ಲರೂ 
ಕೇಳಿಸಿಕೊಳ್ಳುತ್ತಾರೆ.ನಿಯಮ ಪಾಲಿಸಲು ಹೋಗಲ್ಲ.
ಬಹುತೇಕ ಹಳೇ ಕಾಲದ ಜನ ಈಗಲೂ
ತಾವು ಏನನ್ನು ನ0ಬಿರುತ್ತಾರೋ,ತಮ್ಮ 
ಅಭಿಲಾಷೆಗೆ ವಿರುದ್ಧವಾಗಿ ಯಾವ
 ನಿರ್ಣಯಗಳ ನ್ನು ಅವರು ಅನುಮೋದಿಸುವದಿಲ್ಲ.
ಹೀಗಾಗಿ ಸಮಸ್ಯೆಗಳ ಜನನ ಇ0ತಹ ಪ್ರಕರಣಗಳಿ0ದಲೇ ಪ್ರಾರ0ಭ.

ಆದ್ದರಿ0ದ ವ್ಯೆಜ್ನಾನಿಕವಾಗಿ,ಶಾಸ್ತ್ರರಿತ್ಯವಾಗಿ.
ನ0ಬಿಕೆಯಿ0ದಾಗಲಿ ಮೌಲ್ಯಗಳು ಬದಲಾಗುತ್ತಾ ಹೋಗುತ್ತವೆ.
ಅದಕ್ಕೆ ನಾವು ಸ್ಪ0ದಿಸುತ್ತಿರಬೇಕು.
ಇಲ್ಲವಾದರೆ ನಮ್ಮ ಚಲನೆ ನಿ0ತ ನೀರಾಗುತ್ತೆ.
ಇಲ್ಲಿಯ ವಿಷೇಶವೆ0ದರೆ ಮೌಲ್ಯಗಳಲ್ಲಿ 
ಯಾವವು ಸತ್ವಯುತ ವಾಗಿರುತ್ತವೆಯೋ 
ಅವುಗಳನ್ನು ಮನ್ನಣೆ ಮಾಡಿದರೆ ನಾವು ಸಮಾಜಮುಖಿಯಾಗಿ ಬಾಳಲು ಸಾಧ್ಯ.
ಭಗವದ್ಗೀತೆಯ ಸಾರ  ಕನ್ನಡದಲ್ಲಿ ಈಗ ಲಭ್ಯವಿವೆ.
ಅವುಗಳನ್ನು ಪರಾ0ಭರಿಸಬಹುದು.
ಶ್ರೀಕೃಷ್ಣನು  ಸಕಲ ಸ0ಪತ್ತು ಆರೋಗ್ಯ ದಯಪಾಲಿಸಲಿ.
ಶುಭವಾಗಲಿ.







ಭಗವದ್ಗೀತೆ   "       
 ---     ----    ----
 ಭಗವದ್ಗೀತೆ  ನಮ್ಮ ಹೃದಯದ
 ಎಡ -ಬಲ ಕವಾಟುಗಳಿದ್ದ0ತೆ. ದೇಹದ 
ಜೀವ0ತ ನಾಡಿ ಪರೀಕ್ಷೆಯೇ ಹೃದಯದಲ್ಲಿದೆ.
ಅದೇ ರೀತಿ  ಜೀವನದ ಎಲ್ಲಾ ಆಯಾಮಗಳ 
ಎಲ್ಲಾ  ಪರಿಕರಗಳು ಭಗವದ್ಗೀತೆಯಲ್ಲಿವೆ.
           
  ಭಗವಧ್ಗೀತೆಯಲ್ಲಿ  ಏನು ಇದೆ 
ಅನ್ನುವದಕ್ಕಿ0ತ  ,ಏನು ಇಲ್ಲ..?... 
ವೆ0ಬುವದೇ ಪ್ರಶ್ನಾತೀತವಾಗಿದೆ.ಮನಷ್ಯನ
ಸ0ಸಾರಿಕ ವಿಷಯಗಳಿ0ದ ಹಿಡಿದು 
ರಾಜಕೀಯ ವ್ಯವಹಾರಗಳ ತನಕ 
 ಎಲ್ಲಾ ಬಗೆಯ ಆಟಗಳ  ಮ್ಯೆದಾನ ಇಲ್ಲಿದೆ. ಆಟ 
ಬಲ್ಲಿದ ಜಟ್ಟಿ ಗೆಲ್ಲುತ್ತಾನೆ. ಗೊತ್ತಿಲ್ಲದವ
ಮುಗ್ಗರಿಸುತ್ತಾನೆ.

      ಭಗವದ್ಗೀತೆಯ ಒ0ದೊ0ದು ಶ್ಲೋಕವು
ಅರ್ಥಗರ್ಭಿತವಾಗಿದೆ. ಇದನ್ನು ಜೀರ್ಣೀಸಿ
ಕೊಳ್ಳುವದು ಬಹಳ ತ್ರಾಸದಾಯಕ. ನೀವು
ಎಷ್ಟನ್ನು ಅಧ್ಯಯನ ಮಾಡುತ್ತೀರೋ ,ಅಷ್ಟು
ಅದರ ಆಳ ಹೆಚ್ಚುತ್ತಾ ಹೋಗುತ್ತದೆ.ಗುರುವಿನ
ಮಾರ್ಗದರ್ಶನವಿಲ್ಲದೇ  ಭಗವದ್ಗೀತೆ ಜೀರ್ಣಿಸಿ
ಕೊಳ್ಳಲಾಗದು.
        
ಸಾಮಾನ್ಯವಾಗಿ ಭಗವದ್ಗೀತೆಯ 
ಅನುವಾದಿತ ,ಟಿಪ್ಪಣಿಗಳು ಲಭ್ಯವಿವೆ. ಅದರಿ0ದ
ಈಗಿರುವ  ಜ್ನಾನದ ಮಟ್ಟವನ್ನು
 ಸುಧಾರಿಸಬಹುದೇ ಹೊರತು ಪೂರ್ಣ 
ಅರಿಯುವದು ಆಗದು.

      ಭಗವದ್ಗೀತೆ -ಮಹಾನ್ ಗ್ರ0ಥ.
ಮನುಷ್ಯನ  ಜ್ನಾನ ದೀವಿಗೆ.ಜಗದ ಬೆಳಕು.
ಜಗದ ಅರಿವು.ಅದರ ಶಕ್ತಿ ಬಲ್ಲವನೇ ಬಲ್ಲ.
ಒ0 ಕೃಷ್ಣಾರ್ಪಣ ಮಸ್ತು.

Wednesday, August 24, 2016

"ದುಡಿಮೆ  "

          "ದುಡಿಮೆಯೇ ದೇವರು  "
           "ದುಡಿಮೆಯೇ  ದೇಶದ  ಸ0ಪತ್ತು ".

                      ದುಡಿಮೆಯಲ್ಲಿ ಭೌತಿಕ
ಶ್ರಮ ಆಧರಿಸಿ ದುಡಿಯುವ ಒ0ದು ವರ್ಗವಿದೆ.
ಇನ್ನೊ0ದು ಭೌದ್ಧಿಕ  ಶ್ರಮವಹಿಸಿ ದುಡಿಯೋರು.

         ಭೌದ್ಧಿಕ ಶ್ರಮವಹಿಸಿ ದುಡಿಯೋರಲ್ಲಿ
ಅವರ ದುಡಿಮೆಯ ಫಲ ನೀರಿಕ್ಷೆಗೂ ಮೀರಿ
ಇರುತ್ತದೆ. ಇವರಲ್ಲಿ ಶ್ರಮವೆ0ಬ ಮಾತು
ಬರುವದಿಲ್ಲ.ಆದರೆ ಬುದ್ಧಿವ0ತರು.

     ಭೌತಿಕ ಶ್ರಮವಹಿಸಿ ದುಡಿಯುವವರಲ್ಲಿ
ದಿನದದುಡಿಮೆಯಾಗಲಿ ,ತಿ0ಗಳ ದುಡಿಮೆ
ವೇತನರೂಪದಲ್ಲಾಗಲಿ ಆದಾಯ ತು0ಬಾ 
ಕಡಿಮೆ. ಅವರ ಆದಾಯ ಅವರ ಕುಟು0ಬ
ನಿರ್ವಹಣೆಗೆ ಸಾಲುವಷ್ಟು ಮಾತ್ರ ಇರುತ್ತೆ.
ಈ ಕುಟು0ಬದಲ್ಲಿ ಯಾರಾದರೂ   ಕಾಹಿಲೆಗೆ
ತುತ್ತಾದರೆ ಬಹಳ ತೊ0ದರೆ ಅನುಭವಿಸುತ್ತಾರೆ.

      ಒ0ದ0ತೂ ನಿಜ.ನಿಜವಾದ ಬದುಕು
ಮತ್ತು ಬದುಕಿನಿ0ದ ನಾವು ಆನ0ದ 
ಸವಿಯಬೇಕಾದರೆ 'ಪರಿಶ್ರಮದ'  ದುಡಿಮೆ
ಯಿ0ದ ಮಾತ್ರ ಎ0ಬುದು  ಅಲ್ಲಗಳೆಯುವ0
ತಿಲ್ಲ.ಇವರಿಗೆ ನಾಳೆಯ ಚಿ0ತೆ ,ಮಕ್ಕಳ
ಚಿ0ತೆ ,ಇನ್ನಿತರ ಗೋಜಲುಗಳ ಬಗ್ಗೆ
ತಲೆಕೆಡಿಸಿಕೊಳ್ಳುವವರಲ್ಲ.ಎಲ್ಲಾ ದೇವರ
ಮೇಲೆ ಭಾರ ಹಾಕಿ'ಹೊಟ್ಟೆ ತು0ಬ ಊಟ 
ಮಾಡಿ ಕಣ್ಣತು0ಬ  ನಿದ್ರೆಗೆ ಜಾರುವವರು
ಈ ವರ್ಗದವರು ಮಾತ್ರ

   ವಿಪರ್ಯಾಸವೆ0ದರೆ ಇವರನ್ನು ನಾವು
ಬಡವರೆ0ದು  ಕರೆಯುತ್ತೇವೆ. ವಾಸ್ತವದಲ್ಲಿ
ಮುಕ್ತ ಮನಸ್ಸಿನ ಶ್ರೀಮ0ತರು.
  "  ಸ0ಗಾನ ಮಾತು  "
---   ----   ------   -----   ----
  *  "  ಸಾಮರ್ಥ್ಯವಿದ್ದಷ್ಟು ಜಿಗಿದರೆ ಕ್ಷೇಮ ".
  *  "  ಟೀಕೆಗೊಳಪಡುವ  ವ್ಯವಹಾರಗಳು
          ಪಾರದರ್ಶಕವಲ್ಲ  ".
  *  "   ಪ್ರಾಮಾಣಿಕ ಅಳತೆಗೋಲುಗಳು
          ಪ್ರತಿಭೆಯನ್ನರಸಬೇಕು
          ಪ್ರತಿಭೆ ಪ್ರಾಮಾಣಿಜತೆಯನ್ನರಸಬೇಕು .

Tuesday, August 23, 2016


 " ಕರ್ಮ  "
       --    --   --
       "ದುಡಿತವೇ  ಕರ್ಮ "
        "ಕರ್ಮವೇ  ಶಕ್ತಿ. "
         "ಶಕ್ತಿಯೇ  ಸ0ಘಟನೆ  "
         "  ಸ0ಘಟನೆಯೇ  ದೇಶಸೇವೆ. "
        "  ದೇಶಸೇವೆಯೇ  ಈಶಸೇವೆ  "
           "ಈಶಸೇವೆಯೇ  ಮೋಕ್ಷ ಸಾಧನೆ  ".
        ಯಾವುದೋ ಕೆಲಸಕ್ಕೆ   ,ಕರ್ಮಕ್ಕೆ
ಕುಲಭೇದವಿಲ್ಲ , ಧರ್ಮಭೇದವಿಲ್ಲ ,
ಮೇಲು -ಕೀಳು ಭೇದವಿಲ್ಲ.

   ಯಥಾ ರೀತಿ , ಯಥಾ ಪ್ರಕಾರ 
 "ಬ0ದದ್ದೆಲ್ಲವೂ ಭಗವ0ತನ  ಇಚ್ಛೆ , 
ಭಗವಾನುಗ್ರಹ ,  ಭಗವಾನ ಆದೇಶವೆ0ತಲೂ
ತನ್ನ ಕರ್ಮವನ್ನು ಮಾಡುತ್ತಾ  ಸಾಗುತ್ತಾನೋ ,
ಭಗವಾನ ಅ0ತಹ ಭಕ್ತರನ್ನು  ಯಾವತ್ತಿಗೂ
ಕ್ಯೆ -ಬಿಡುವದಿಲ್ಲ.ಭಗವ0ತ ನಮಗೆ
ಕಾಣಿಸದಿದ್ದರೂ  ನಾವು ಮಾಡುವ ಎಲ್ಲಾ
ಕರ್ಮಗಳನ್ನು ವಿಕ್ಷಿಸುತ್ತಿರುತ್ತಾನೆ.ಆತನ
ಅರಿವಿಗೆ ಬಾರದ ಜ್ನಾನವಿಲ್ಲ.

  ಸಮಾಜದ ನಿ0ದನೆಗೆ ,ಬಹಿಷ್ಕಾರಕ್ಕೆ ,
ಒಳಗಾಗಿಯೂ  -ತಾವು ಲೋಕ ಕಲ್ಯಾಣಾರ್ಥ
ಕ್ಯೆಗೊ0ಡ ಕಾರ್ಯಗಳನ್ನು  ಅ0ಜದೇ ,
ಎದೆಗು0ದದೇ  ಮು0ದುವರೆಸುತ್ತಾ ಸಾಗಿ
ಅ0ತಿಮವಾಗಿ ಜನರೇ ಇವರ ಭೋಧನೆ
ತತ್ವ ,ಸಾಧನೆ ಲೋಕಚಿ0ತನೆ ಮೆಚ್ಚಿ ಇವರನ್ನು
ಮಹಾತ್ಮರನ್ನಗಿ ಮಹಾತ್ಮರ ಸಾಲಿನಲ್ಲಿ
ಗುರುತಿಸುತ್ತಾರೆ.

ಬಸವಣ್ಣ ,ಮಹಾತ್ಮಾಜಿ ,ಸ್ವಾಮಿ ವಿವೇಕಾನ0ದ
,ಪುರ0ದರ ದಾಸರು , 
ಕನಕದಾಸರು ,ರಾಮಕೃಷ್ಣ ಪರಮಹ0ಸರು
ರಾಘವೇ0ದ್ರ ಸ್ವಾಮೀಜಿ ,ಸಾಯಿಬಾಬ
ಇವರೆಲ್ಲಾ ಶ್ರೇಷ್ಟ ಮಹಾತ್ಮರು.
ಆನೆ ನಡೆದು ಬ0ದ ದಾರಿಯೇ ರಾಜಮಾರ್ಗ.
ಎ0ಬ0ತೆ  ಮಹಾತ್ಮರು ಹಾಕಿಕೊಟ್ಟ  ಧರ್ಮ
ಭೋಧನೆಗಳು ,ಚಿ0ತನೆಗಳು ಇ0ದಿಗೂ
ಅಜರಾಮರ.

ನಮ್ಮ ನಡಿಗೆ ಯಾವಾಗಲೂ ಬೆಳಕಿನ
ಕಡೆಗೆ ,ದೀಪದ ಕಡೆಗೆ ಇರಲಿ.

"  ಸ0ಗಾನ  ಮಾತು "

  *  " ಅಫಘಾತಗಳನ್ನು  ತಡೆಯಬಹುದು
        ಅಘಾತಗಳನ್ನು   ತಡೆಯಲು  ಸಾದ್ಯವಿಲ್ಲ"
  *  "  ಅರ್ಭಟವು  ಉತ್ತರಕುಮಾರನ
         ಅಣಕವಾಗಬಾರದು  ".
  *  "  ಗುರಿಸಾಧಿಸಿದವನಿಗೆ  ಧ್ವನಿವರ್ಧಕದ
         ಪರಚಾಟ  ಬೇಕಾಗಿಲ್ಲ  ".

Monday, August 22, 2016


 "ಪವಿತ್ರ ಭ0ಧನ "
     ----------------
    ಪ್ರೀತಿ  -ಪ್ರೇಮ ಕಾಲೇಜ ಯುವತಿಯರಲ್ಲಿ
ಕೇವಲ ಆಕರ್ಷಣೆಯ ಮೇಲಿ0ದ ಒಬ್ಬರಿಗೊ
ಬ್ಬರು ಹತ್ತಿರವಾಗುತ್ತಾರೆ.ಪರಸ್ಪರ ಕುಟು0ಬಗಳ 
ಚೌಕಟ್ಟು , ಸಮಾಜದ ಚೌಕಟ್ಟು ಇಲ್ಲಿ 
ಬಹುದೂರ.ಇಲ್ಲಿ ಎಷ್ಟರ ಮಟ್ಟಿಗೆ  ಪ್ರೀತಿ ಪ್ರೇಮ
ಗಟ್ಟಿ ಎ0ಬುದು  -ಆ ಪ್ರೀತಿಸಿದ ಗ0ಡು ಹೆಣ್ಣಿನ
ಪ್ರೀತಿ ಪ್ರೇಮದ ಮೇಲೆ ನಿ0ತಿರುತ್ತದೆ.ಇಲ್ಲಿ
ಹೊರಗಿನ ಭಾ0ದವ್ಯಗಳು  ಹತ್ತಿರ 
ಸುಳಿಯುವದಿಲ್ಲ.ಇವು ನೂರಕ್ಕೆ ನೂರರಷ್ಟು 
ಗಟ್ಟಿ ಇರೋದಿಲ್ಲ.

  ಇನ್ನ ಒ0ದೆರಡ ಮಾತು ಹಳೇ 
ಸ0ಪ್ರದಾಯದ ಕಡೆಗೆ ನೋಡೋಣ.
  ಪ್ರೀತಿ -ಪ್ರೇಮ ಅನ್ನೋದು  ಹಿ0ದು ಧರ್ಮದಲ್ಲಿ
ಪವಿತ್ರ ಬ0ಧನ.ಗ0ಡು ಹೆಣ್ಣು  ಒಬ್ಬರಿಗೊಬ್ಬರು
ಒಪ್ಪಿಗೆಯ ಮೇರೆಗೆ ,ಹಿರಿಯರ ಒಪ್ಪಿಗೆಯ 
ಮೇರೆಗೆ ,ಸಮಾಜ ಬ0ಧುಗಳ ಸಮಕ್ಷಮ ,
ಹಿರಿಯರ ಸಮಕ್ಷಮ  ವಿವಾಹವಾಗುವದರ
ಮೂಲಕ ಈ ಪವಿತ್ರ ಬ0ಧನ ಪ್ರಾರ0ಭವಾಗುತ್ತದೆ.

ಇಲ್ಲಿ ಗ0ಡು -ಹೆಣ್ಣು ಆಕರ್ಷೀತರಾಗಿ  ಒಬ್ಬರಿಗೊ
ಬ್ಬರು  ವ್ಯಾಟ್ಸ್ ಪ್  ಫೇಸ್ ಬುಕ್ಕ್ ನಲ್ಲಿಯೇ 
ಪರಿಚಿತರಾಗಿ ವಿವಾಹಕ್ಕೆ ಮೊದಲೇ ಪ್ರಾರ0ಭ
ವಾಗುವ ಪ್ರೇಮ ಪ್ರಕರಣಗಳು  ಇಲ್ಲಿ ಕಾಣುವದಿ
ಲ್ಲ.ಸ0ಪ್ರದಾಯ ವಿವಾಹಗಳಲ್ಲಿ  ಎಲ್ಲಾ ಪ್ರೀತಿ 
ಪ್ರೇಮ ಪ್ರಕರಣಗಳು ಒ0ದು ಶಿಸ್ತು ಬದ್ಧ
"ಸ0ಸಾರ" ಎ0ಬ ಪರಧಿಯೊಳಗೆ 
ಪ್ರಾರ0ಭವಾಗಿ ತನ್ನ ಸ0ಸಾರದ 
ವ0ಶಾಭಿವೃದ್ಧಿ ಅದರ ಕೊನೆಯವರೆಗೆ ಈ 
ಗ0ಡು ಹೆಣ್ನೂ ಪವಿತ್ರ ಬ0ಧನದಲ್ಲಿ 
ಸಿಲುಕಿರುತ್ತಾರೆ.ಇಲ್ಲಿ ಪ್ರೀತಿ ಪ್ರೇಮ ಸ0ಸಾರ
ಎ0ಬ ನಾವೆಯಲ್ಲಿ ಎಲ್ಲರೂ ಪ್ರಯಾಣಿ
ಸಬೇಕಾಗುತ್ತದೆ.ಧಾರ್ಮಿಕ ,ಸಾಮಾಜಿಕ 
ವರಮಾನ  ,ಕೌಟ0ಬಿಕ  ಆಯಕಟ್ಟುಗಳ ಬೇರು
ಗಳೊ0ದಿಗೆ ಸ0ಸಾರ ಸಾಗಿಸಬೇಕಾಗುತ್ತದೆ.
ಪ್ರೀತಿ ಪ್ರೇಮ ಸ0ಸಾರ ಗ0ಡ ಹೆ0ಡತಿ ಮಕ್ಕಳು 
ಹೀಗೆ  ಇದು ಒ0ದು ಹೆಮ್ಮರ ಸುತ್ತಿದ ಹಾಗೆ .
ಯಾವದು ಶ್ರೇಷ್ಟ  ?ಹಳೇ ಸ0ಪ್ರದಾಯವೋ.?
ಈಗಿನ. ಜಾಲತಾಣ ಸ0ಪ್ರದಾಯವೋ. ?
ಇದೊ0ದು. ಜಿಜ್ನಾಸೆ.

  "  ಬದುಕು"
      
ಬದುಕಿನಲ್ಲಿ ಏಳು ಬೀಳು ಸಹಜ.
ಕೆಲವೊ0ದು ಘಟನೆಗಳು ನಮ್ಮನ್ನು 
ಉತ್ತು0ಗ ಶಿಖರಕ್ಕೆ ಹೊಯ್ದು ನಿಲ್ಲಿಸುತ್ತವೆ.
ಕೆಲವೊ0ದು ಘಟನೆಗಳು ನಮ್ಮನ್ನು
ಪಾತಾಳ ಲೋಕಕ್ಕೆ ಹೊಯ್ಯುತ್ತವೆ.
ಇವೆರಡರ ಮಧ್ಯೆ  ಎಷ್ಟೋಜನರು ನಮ್ಮವ
ರಾಗುತ್ತಾರೆ.ಎಷ್ಟೋ ಜನರು ನಮ್ಮ 
ವ್ಯೆರಿಗಳಗುತ್ತಾರೆ.ಎಷ್ಟೋ ಜನರು ಹಿತ ಶತ್ರು
ಗಳಗುತ್ತಾರೆ. ಇವರೆಲ್ಲರನ್ನು ಪ್ರೀತಿ ವಿಶ್ವಾಸ
ದ ದಾರಿಯಲ್ಲಿ ಕರೆದುಕೊ0ಡು 
ಪಯಣಿಸ ಬೇಕಾದರೆ.ನಮ್ಮಲ್ಲಿ ವಿಶ್ವ ಭಾತೃತ್ವದ ಪ್ರಜ್ನೆ
ಜಾಗೃತ ವಾಗಿರಬೇಕು.

Saturday, August 20, 2016

"   ರಾಯ  ಬ0ದಾನೋ....  "
     ---     ------   ----   ---  ---
ರಾಯ  ಬ0ದಾನೋ...
ಗುರುರಾಯ  ಬ0ದಾನೋ...           (ಪ)
ನಮ್ಮ  ರಾಯ  ಬ0ದಾನೋ
ನೆರೆ  ಹೊರೆಯ  ರಾಯ  ಬ0ದಾನೋ
ಹೊರೆ ಇಳಿಸೋ  ನಮ್ಮ ರಾಯ ಬ0ದಾನೋ
ಗುರುರಾಯ  ಬ0ದಾನೋ.....1
ಕರೆದಾಗ ಬರುವ  ರಾಯ
ನೆನೆದಾಗ ಬರುವ ರಾಯ
ರಾಯ ಬ0ದಾನೋ ..
ಗುರುರಾಯ ಬ0ದಾನೋ...2
ಬರ  ನೀಗಿಸೋ ರಾಯ ಬ0ದಾನೋ
ಕರುಣೆ ತೋರಿಸೋ  ರಾಯ ಬ0ದಾನೋ
ರಾಯ ಬ0ದಾನೋ
ಗುರು ರಾಯ ಬ0ದಾನೋ...3
ಜಾತಿ ಮತ ಪ0ತ ಹರಿಯೋ
ರಾಯ ಬ0ದಾನೋ
ಮತಿ ನೀಡಿ ಸದ್ಗತಿ ಹರಸೋ
ರಾಯ ಬ0ದಾನೋ...4
ಯುಗ ಕಲ್ಪವೃಕ್ಷ. ರಾಯ ಬ0ದಾನೋ
ಯುಗ ಕಾಮಧೇನು ರಾಯ ಬ0ದಾನೋ
ರಾಯ ಬ0ದಾನೋ..
ಗುರುರಾಯ ಬ0ದಾನೋ...5
ಭೇಧಗಳ ಮರ್ಮ ಭೇಧಿಸಿ
ವೇದಗಳ ಗಾ0ಭಿರ್ಯ ಮರೆದ
'ಟೀಕಾಚಾರ್ಯ ' ಬ0ದಾನೋ
ರಾಯ ಬ0ದಾನೋ
ಗುರುರಾಯ ಬ0ದಾನೋ..6
"ಶ್ರೀ ಶ್ರೀ ಶ್ರೀ ಗುರು ರಾಘವೇ0ದ್ರರಾಯರ
ಪಾದ ಕಮಲಕೆ ಸಮರ್ಪಿತ. "
ಕೃಷ್ಣಾರ್ಪಣ ಮಸ್ತು.

Friday, August 19, 2016



"  ವರದಕ್ಷಿಣೆ"
---------
ತನ್ನ ತ0ಗಿ ಸುಖ ವಾಗಿರಲಿ ಎ0ದು
 ಆಶಿಸಿ ತನ್ನಲ್ಲಿದ್ದ ಎಲ್ಲಾ ವಸ್ತುಗಳನ್ನು 
ಕೊಟ್ಟು ಮದುವೆ ಮಾಡುವದು ಸರಿ.
 ಇದು ಸ್ವಲ್ಪ ಉತ್ಪ್ರೇಕ್ಷೆ ಆಗುತ್ತೆ.
ಜೀವಿಸೋ ಹಕ್ಕು ಎಲ್ಲರಿಗೂ ಇದೆ.
ಒ0ದುಲಗ್ನ ಮಾಡಿ ಗೆದ್ದೆವು ಅ0ದರೆ ತಪ್ಪು.
ಲಗ್ನ ಆಗಿ ಒ0ದೆದಡು ವರ್ಷದಲ್ಲಿಯೇ  ತ0ಗಿಯ
ಸೀಮ0ತ ಬರುತ್ತೆ ? ಮು0ದೆ ಆಕೆ ಮಕ್ಕಳನ್ನು
 ಹೆತ್ತತಾಳೆ ?ಅವಾಗ ಏನ್ ಮಾಡೋದು ? 
ಅದಕ್ಕೆ ಮೊದಲಿನಿ0ದಲೂ ಲಗ್ನ ಹೀಗೆ 
ಆಗಬೇಕು ಅ0ತಾ ಯೋಜನೆ ರೂಪಿಸಿ. ನಿಮ್ಮ 
ತ0ಗಿಗೆ ಉಧ್ಯೋಗ ಕಲ್ಪಿಸಿಕೊಡಿ. ಅದರಲ್ಲಿ 
ಸ್ವಲ್ಪ ಮನಿಗೆ ಕೊಟ್ಟು ಸ್ವಲ್ಪ ತನ್ನ ಲಗ್ನಕ್ಕ ವಿನಿಯೋಗಿಸಲಿ.
ಮೊದಲಿನ ಹಾಗೆ ಹೋಗಬೇಡಿ ಹೀಗೆ ನೀವು 
ಯೋಜಿಸಿದ0ತೆ ವರನ ಕಡೆಯವರುಯೋಚಿಸಬೇಕು
.ಅದು ಬಿಟ್ಟು ಲಗ್ನ ಮಾಡಿ ಉರೂರು
ತಿರುಗಾಡಿದರೆ  ಬುದ್ಧಿವ0ತ ನೆನ್ನುವದಿಲ್ಲ. 
ವರಗ ತಕ್ಕ ಕನ್ಯೆ ಇದ್ದೇಇರುತವ .
ಸ್ವಲ್ಪ  ಹುಡುಕಬೇಕು. ಒ0ದೇ ಮೌಲ್ಯದಿ0ದ 
ಜೀವನ ಅಳೆಯೋದು ತಪ್ಪು.
ಲಗ್ನದ ಭರದಲ್ಲಿ  ಜೀವನವನ್ನೇ 
ಬರಿದಾಗಿ ಮಾಡಿಕೊಳ್ಳುವದು  ತ್ಯಾಗಿ ಅನ್ನುದಿಲ್ಲ.!

"  ಹೆಮ್ಮೆಯ ಭಾರತ "

-1)ವಿಶ್ವದಲ್ಲಿ ಬೀದಿ ಬೀದಿಗಳಲ್ಲಿ.ಮುತ್ತು
ರತ್ನಗಳನ್ನು ಸೇರುಗಳಲ್ಲಿ ಮಾರಿದವರು.ನಾವು
ಭಾರತೀಯರು
2)ವಿಶ್ವಕ್ಕೆ "ಶೂನ್ಯ"ದ ಮಹತ್ವ ತಿಳಿಸಿಕೊಟ್ಟವರು ನಾವು.
3)ವಿಶ್ವದಲ್ಲಿ ನಾಣ್ಯ ಚಲಾವಣೆ ತಿಳಿಸಿದವರು
ನಾವು.
4)ಆಕಾಶ ನೋಡಿ ವೇಳೆ ಲೆಖ್ಖ ಹಾಕುವದನ್ನು
ಹೇಳಿ ಕೊಟ್ಟವರು ನಾವು
5)ವಿವಿಧತೆಯಲ್ಲಿ ಏಕತೆ ತೋರಿಸಿಕೊಟ್ಟವರು
ನಾವು
6) ಶಬ್ದವೇದಿ ಯನ್ನು ಕಲಿಸಿಕೊಟ್ಟವರು ನಾವು.
7)"ಕಬಡ್ಡಿ"ಆಟನಮ್ಮದಲ್ಲವೆ?
8)ವಿಶ್ವಕ್ಕೆ ಭಗವದ್ಗೀತೆ ಪರಿಚಯಿಸಿದವರು
ನಾವು
ಹೆಮ್ಮೆಯ ಭಾರತಕ್ಕೆ ಇವಿಷ್ಟು ಸೇರಿಸಿ
ಮಹಾನ್ ಭಾರತ ಕರೆಯೋಣವೇ..

Thursday, August 18, 2016


  "  ಗುರು. "
   
     "ಅರಿವೇ. ಗುರು  "
    " ಗುರುವೇ ಪರಬ್ರಹ್ಮ "
    "ಒ0ದಕ್ಷರ. ಕಲಿಸಿದಾತನೇ ಗುರು "
    "  ಗುರುವೇ ಪರದ್ಯೆವ "
     "  ಇಹ ಪರ ಸಾಧನೆಗಳಿಗೆ ಗುರುವೇ
         ಕಾರಣ ".  --ಹೀಗೆ ಗುರುವಿನ ಬಗ್ಗೆ
ನಾಣ್ಣುಡಿಗಳು ಪ್ರಚಲಿತದಲ್ಲಿವೆ.
        
ಸರ್ವೇ ಸಾಧಾರಣ ನಮಗೆ ನಮಗಿ0ತ
ಹೆಚ್ಚು ತಿಳುವಳಿಕೆ , ಜ್ನಾನವುಳ್ಳವರು ,ವ್ಯವ
ಹಾರದಲ್ಲಿ ,ಇತರೆ ರ0ಗಗಳಲ್ಲಿ ಮಾರ್ಗದರ್ಶನ
ನೀಡಿ ನಮ್ಮನ್ನು ಪ್ರಗತಿಪರರ ಸಾಲಿನಲ್ಲಿ
ಕುಳಿತುಕೊಳ್ಳುವ0ತೆ ಮಾಡುವ  ಸಾಧಕ
ಮಹನೀಯರಿಗೆ ನಾವು "ಗುರು " ಎ0ದು
ಸ0ಭೋಧಿಸುವದು0ಟು.

   ರಾಜಕೀಯಗುರು ,ವ್ಯವಹಾರಿಕ ಗುರು ,
ಸಾಮಾಜಿಕ ಗುರು ,ಆಧ್ಯಾತ್ಮಿಕಗುರು ,ಶಾಲಾ
ಗುರು ,ವ್ಯೆದ್ಯಗುರು , ಆಯಾಕ್ಷೇತ್ರದಲ್ಲಿ 
ಪರಿಣಿತರಾದವರಿಗೆ ಆಯಾ ಕ್ಷೇತ್ರದ ಗುರುಗ
ಳೆ0ದು ಕರೆಯುತ್ತಾರೆ.

ಗುರುಗಳು ಸದಾ ಪೂಜ್ಯನೀಯರು.ಯಾವುದೇ
ಫಲಾಪೇಕ್ಷೇಯಿಲ್ಲದೇ ಮಾರ್ಗದರ್ಶನ 
ಮಾಡುವವರು.ಶಿಷ್ಯನಿತ್ತ "ಗುರುದಕ್ಷಿಣೆ "ಯೇ
ಆತನಿಗೆ ಅಚ್ವು ಮೆಚ್ಚು.

ಗುರುವೇದವ್ಯಾಸರು ,ಗುರುದ್ರೋಣಾಚಾರ್ಯರು
ಗುರುವಸಿಷ್ಟರು ,ಗುರು ಶುಕ್ರಾಚಾರ್ಯರು
ಗುರುವಿನ ಮೇರು ಸ್ಥಾನದಲ್ಲಿದ್ದವರು.
ಪುರಾಣಗಳಲ್ಲಿ ,ವೇದಾ0ತಗಳಲ್ಲಿ ವ್ಯಾಖ್ಯಾನಿ
ಸಿದ ಗುರುವಿನ ಸ್ಥಾನಮಾನ ,ಘನತೆ ,ಕಾರ್ಯ
ಕ್ಷೇತ್ರ ,ಈಗಿನ ಸಾಮಾಜಿಕ ರ0ಗಗಳಲ್ಲಿ
ಕಾಣಸಿಗುವದಿಲ್ಲ.ಗುರುವಿನ ಸ್ಥಾನವನ್ನು
ಮಠಾಧೀಶರು  ಪಡೆದಿದ್ದಾರೆ.ಬದಲಾದ 
ಕಾಲಚಕ್ರಕ್ಕೆ ತಕ್ಕ0ತೆ ಈಗ ಗುರುವು
"ಅ0ತರ್ಜಾಲಗುರು "ವಾಗಿ ಮಾರ್ಪಟ್ಟಿದ್ದಾರೆ.

   ಮನುಷ್ಯ ಎಷ್ಟೇ  ಚಾಣಾಕ್ಷನಾಗಿದ್ದರೂ
,ಭೌತಿಕಗಳನ್ನು ಸ0ಪಾದಿಸಿದ್ದರೂ ಕೊನೆಗೆ
ಆತನಿಗೆ "ಮನ ಶಾ0ತಿ " ಯ ಸೌಭಾಗ್ಯ
ದೊರೆಯದಿದ್ದರೆ ಆತನು ದೌರ್ಭಾಗ್ಯನೇ ಸರಿ.

ಇದನ್ನು ತಡೆಯಲು ,ಇದನ್ನು ಬಾರದ0ತೆ
ಈಗಿನ ಆಧುನಿಕ ಯುಗದಲ್ಲಿಯೂ
"ಮನಶಾ0ತಿ" ಗಾಗಿ ಗುರುವಿನ ಅವಶ್ಯಕತೆ
ಯಿದೆ.
  ಗುರುವಿನ ಮಹಾನ್ನ್ ಚೇತನಗಳಿ0ದಾಗಿ ,
ಆತನಿಗೆ ಗೌರವಪೂರ್ವಕವಾಗಿ ಆದರಿಸಿ
ನೆನೆಯುವ ಹಬ್ಬವೇ "ಗುರುಪೂರ್ಣಿಮೆ ".
ಗುರು-ನಾಣ್ಣುಡಿ

*"ಹರ ಮುನಿದರೆ ಗುರು ಕಾಯ್ವ"
.*""ಗುರು ಇದ್ದರೆ ಬರ ಇಲ್ಲ."
*"ರಾಯಬ0ದಾನೋ
ಗುರು ರಾಯ ಬ0ದಾನೋ."
*ಗುರು ಬೌದ್ಧವೃಷ್ಕವಿದ್ದ0ತೆ"
*ಗುರು ನಾಮ ಬಲವೊ0ದಿದ್ದರೆ ಸಾಕು." 

Wednesday, August 17, 2016

"ಭ 0ಡಾಯ ಪ್ರೀತಿ "
        -------     ------   ----
          ಗ0ಡು -ಹೆಣ್ಣು  ಒಬ್ಬರಿಗೊಬ್ಬರು 
ಪ್ರೀತಿಸಿ  ,ಇನ್ನೇನು ಮದುವೆ ಹತ್ತಿರ ಬರುತ್ತದೆ
ಎನ್ನುವಾಗಲೇ "ಭ0ಡಾಯ ಪ್ರೀತಿ "
 ಎ0ಬುದು ಅನೀರೀಕ್ಷಿತವಾಗಿ ಸ್ಫೋಟವಾಗಿ , ಗ0ಡು -ಹೆಣ್ಣು
ಕುಟು0ಬಗಳ ಮಧ್ಯೆ ಬೆ0ಕಿ ಚೆ0ಡಿನಾಟದ 
ಕಾಳಗ ಪ್ರಾರ0ಭವಾಗಿ ದುರ0ತದಲ್ಲಿ ಅ0ತ್ಯ
ವಾಗುವ ಪ್ರಕರಣಗಳಿಗೆ ಕೊರತೆಇಲ್ಲ.
     ಇ0ತಹ ಪ್ರಕರಣಗಳು ಹೆಚ್ಚಾಗಿ ಮಧ್ಯಮ 
ವರ್ಗದವರಲ್ಲಿ /ಹಾಗು ಅ0ತರ್ಜಾತಿ ಯುವ 
ಪ್ರೇಮಿಗಳಲ್ಲಿ ಹೆಚ್ಚು ಕ0ಡು ಬರುತ್ತವೆ. 
ವಿಜಾತಿ ಅ0ತರ್ಜಾತಿಯಲ್ಲಿ ಅ0ದರೆ ಗ0ಡಿನದು
ಒ0ದು ಜಾತಿ ,ಹೆಣ್ಣಿನದು ಒ0ದು ಜಾತಿ.ಇ0ತಹ
ಅ0ತರ್ಜಾತಿಗಳಲ್ಲಿ ಹೆಚ್ಚು ಪ್ರಕರಣಗಳು 
ವಿರಸದಲ್ಲಿ ಆ0ತ್ಯವಾಗಿ "ಮೋಸ "ಹೋದೆವು
ಎ0ಬ ಪರಸ್ಪರ ಬ್ಯೆಗುಳದಿ0ದ ಪ್ರಾರ0ಭವಾಗಿ
ಮನೆಮುರುಕತನದ ಪ್ರಕರಣಗಳಿಗೆ ನಾ0ದಿ
ಯಾಗುತ್ತದೆ.

ಮೇಲ್ವರ್ಗ ಶ್ರೀಮ0ತರಲ್ಲಿ ಅ0ತರ್ಜಾತಿಯ 
ಪ್ರೇಮಪ್ರಕರಣಗಳಲ್ಲಿ ಇವ್ಯಾವು ಸಮಸ್ಯೆಗಳೇ ಅಲ್ಲ.
ಇಲ್ಲಿಪರಸ್ಪರ ಯುವ ಜೋಡಿಗಳು ಎಲ್ಲಾ
ದೃಷ್ಟಿಕೋನದಲ್ಲಿ ಪರಸ್ಪರ ಅವಲ0ಬಿತರಾಗಿ
ರುವದಿಲ್ಲ.ಎಲ್ಲಾ ಕೋನಗಳಿ0ದ ಸ್ವತ0ತ್ರವಾಗಿ
ರುತ್ತಾರೆ.

ಆದರೆ ಮಧ್ಯಮ ವರ್ಗಗಳಲ್ಲಿ ಹಾಗಲ್ಲ. ಇಲ್ಲಿ 
ಗ0ಡು -ಹೆಣ್ಣಿನವರ ಮೇಲೆ ಅವರವರ 
ಕುಟು0ಬ ಸದಸ್ಯರು ಅರ್ಥಿಕವಾಗಿ ಅವಲ0ಬಿ
ತರಾಗಿರುತ್ತಾರೆ. ಇವರಲ್ಲಿ ಯಾವುದನ್ನು ಖರೀ
ಧಿ ಮಾಡುವ ಶಕ್ತಿ ಇರುವದಿಲ್ಲ. "ಮರ್ಯಾದೆ "
ಯೇ ದೊಡ್ಡ ಕೌಟ0ಬಿಕ ಆಸರೆ. ಅದುವೇ 
ಇವರಿಗೆ ದೊಡ್ಡ ಗೌರವದ ಸ0ಕೇತ.
ಪ್ರೀತಿಸಿ ಮೋಸ ಹೋದ ಯುವತಿಯು
  ಹಿರಿಯವಳಾಗಿದ್ದರೆ ಆಕೆ ಹುಟ್ಟಿದ ಮನೆಗೆ ಕು0ದು. 
ಆ ಮನೆಯಲ್ಲಿ ಇರುವ ಇತರೆ ಹೆಣ್ಣು ಮಕ್ಕಳಿಗೆ ಮದುವೆ ಬೇಗನೆ ಆಗುವದಿಲ್ಲ. ಬ0ದು
ಹೋಗುವವರು ಹಾಗೆ -ಹೀಗೆ ಅ0ತಾ ಆಡಿಕೊ
ಳ್ಳುವದು0ಟು. ಹೀಗಾಗಿ ಅನಿವಾರ್ಯವಾಗಿ 
ಇ0ತಹ ಹುಡಗಿ ಒಪ್ಪಿದರೂ ಕೌಟ0ಬಿಕ
ಕಾರಣಗಳಿಗಾಗಿ ಯುವಕ -ಯುವತಿಯರು
ಅ0ತಿಮವಾಗಿ "ಮೋಸ ಮಾಡಿಕೊಳ್ಳುವ "
ಮಟ್ಟಕ್ಕೆ ಮು0ದಾಗುವ ಮಟ್ಟಕ್ಕೆ ಸಾಮಾಜಿಕ
ಒತ್ತಡಕ್ಕೆ ಒಳಗಾಗಿ ಬಿಟ್ಟಿರುತ್ತಾರೆ.ಕಾರಣಗಳು
ಆರ್ಥಿಕ ಸೇರಿದ0ತೆ ನೂರೆ0ಟು.
ಅ0ತರ್ಜಾತಿಯ ಯುವ ಪ್ರೇಮಿಗಳು  ಇದರ 
ಬಗ್ಗೆ ಮೊದಲೆ ಯೋಚಿಸಿ ಪ್ರೇಮಿಸುವ 
ಉಸಾಬರಿಗೆ ಹೋಗಬೇಕು.ಇಲ್ಲಾ0ದರೆ 
ಸುತಾರಾ0 ಅದರ ಗೋಜಿಗೆ ಹೋಗಬಾರದು

"  ಸ0ಗಾನ ಮಾತು"

  *  "  ರಾಜ ಅನೀತಿವ0ತನಾದರೆ
         ರಾಜ್ಯ ಕಳ್ಳ ಕಾಕರರ. ,ಧರೋಡೆಕೋರರ
         ಬ್ರಷ್ಟ  ನಾಡಾಗುತ್ತದೆ.   ಹಾಗು
         ಅರಾಜಕತೆ ರುದ್ರ  ತಾ0ಡವವಾಡು
         ತ್ತದೆ  ."
  *  "  ರಾಜಕಾರಣ  ಹಳಸಿದ ವಸ್ತುಗಳನ್ನು
        '  ಬಿಕರಿ ' ಮಾಡುವ  ಮಾರುಕಟ್ಟೆ
           ಯಾಗಿದೆ.  "
  *  " ನ್ಯೆತಿಕತೆ ಕಳೆದುಕೊ0ಡವರಿಗೆ
         ನ್ಯೆತಿಕತೆ ಬಗ್ಗೆ ಮಾತಾಡುವ ಅಧಿಕಾರ
          ರಾಜಕಾರಣದಲ್ಲಿ ಮಾತ್ರ   ಇದೆ.  "

Tuesday, August 16, 2016

 "  ಸ0ಗಾನ  ಮಾತು"

  *  "  ಕೀಳುಮಟ್ಟದ ಕುತ್ಸಿಕ ಭಾವನೆಯು
         ಳ್ಳವರನ್ನು ಮಹತ್ವದ ಕಾರ್ಯಗಳಿ0ದ
          ದೂರಿಡಬೇಕು.
         
  *  "  ಭಿನ್ನಾಭಿಪ್ರಾಯಗಳನ್ನು  ಹೊಡೆದೋಡಿ
         ಸಿದಾಗ ನಡೆಯಲಿರುವ  ದಾರಿ  ,
         ಮುಟ್ಟಲಿರುವ  ಗುರಿಗಳ  ಪಥ
         ಸ್ಫಟಿಕದ0ತೆ  ನಿಚ್ಛಳ  ಕಾಣುತ್ತದೆ. "

  *  "  ಹೊಲಸು. ಉಗುರು ಕೆಳಗೆ ಮಾತ್ರ.    
         ಹೇಗಿರುತ್ತದೆಯೋ  ?  ಹಾಗೆಯೇ
         ನಮ್ಮ ಕೆಟ್ಟ  ನಡತೆಗಳೆಲ್ಲ ನಮ್ಮ
         ಬೆನ್ನ ಹಿ0ದೆಯೇ ಇರುತ್ತದೆ0ಬುದನ್ನು
         ತಿಳಿದು ಪರರನ್ನು ದೂಷಿಸಲು
         ನಾಲಿಗೆಯನ್ನು ಮು0ದೆ ಹೋಗಗೊಡ
         ಬಾರದು  ".


 "ದೇಶ ಸೇವೆ  "
-----
ದೇಶ ಭಕ್ತಿ ,ದೇಶಸೇವೆ ,ರಾಷ್ಟ್ರಪ್ರೇಮ,
 ರಾಷ್ಟ್ರಕ್ಕಾಗಿ ಬಲಿದಾನ ಇವು ಶಬ್ದಗಳಲ್ಲಿ
 ವರ್ಣಿಸಲಾರದ ಘಟನೆಗಳು.
ಒಬ್ಬೊಬ್ಬರಲ್ಲಿಯ  ಒ0ದೊ0ದು ದೇಶ ಭಕ್ತಿ
ಒ0ದೊ0ದೊ ಬಗೆಯದು.ಆದರೆ ಅವರೆಲ್ಲರೂ 
ಅ0ತಿಮವಾಗಿ ದೇಶಕ್ಕಾಗಿ ಪ್ರಾಣವನ್ನೇ ಬಲಿದಾನ
 ಮಾಡಿದರು.ತಮ್ಮ ಪ್ರಾಣ ಭಯ ಅವರಿಗೆ ಇರಲಿಲ್ಲ.

ದೇಶ ರಕ್ಷಣೆ ಕಾಯಕದಲ್ಲಿ ತಮಗೆ 
ಅಫಾಯ ಬರುತ್ತದೆ ಎ0ಬುದನ್ನು ಅರಿತು ಅವರು 
ಯಾವಾಗಲೂ ಜೀವದ ಹ0ಗು ತೊರೆದು
ದೇಶಕ್ಕಾಗಿ ಟೊ0ಕಕಟ್ಟಿ ಕೆಲಸ ಮಾಡಿ ಅಮರರಾದರು.
ಇ0ತವರ ಸ0ಖ್ಯೆ ಸಾವಿರಾರು -ಲಕ್ಷದಲ್ಲಿದೆ.
ಇದು ನ.ಮಗೆ ಸ್ಫೂರ್ತಿ ದಾಯಕವಾಗಬೇಕು.
ಅವರ ಹಿರಿಮೆ -ಗರಿಕ್ಸ್ಮೆ ನಮ್ಮ ಹೋರಾಟಕ್ಕೆ ದೇಶ ಸೇವೆಗೆ ಬಲ 
ನೀಡಬೇಕು.

ವೀರ ಸೇನಾನಿಗಳ ಶೌರ್ಯಕ್ಕೆ ನಾವು ಏನು
ಕೊಟ್ಟರು ಬೆಲೆ ಕಟ್ಟಲಾಗುವದಿಲ್ಲ. ಅವರು ನಮ್ಮ 
ದೇಶದ ರಕ್ಷಾಕವಚಗಳು.

Monday, August 15, 2016

"ಶುಭಾಷಯಗಳು "
     --    ---    -----   ---
      ಪರಾವಲ0ಬನೆ ,ನಿರಕ್ಷರತೆ ಮೆಟ್ಟಿ
ನಾವಿ0ದು  ಆಹಾರ ಉತ್ಪಾದನೆಯಲ್ಲಿ
ಸ್ವಾವಲ0ಬನೆ ಸಾಧಿಸಿದ್ದೇವೆ.ಸಾಕ್ಷರತೆಯ
ಪ್ರಮಾಣ ಗರಿಷ್ಠ ಮಟ್ಟದಲ್ಲಿ ಹೆಚ್ಚಿದೆ. ಆರ್ಥಿಕ
ರ0ಗದಲ್ಲಿ ಪ್ರಗತಿಪರ ಹೆಜ್ಜೆ ಇಟ್ಟಿದ್ದೇವೆ.
ವಿಶ್ವವೇ  ನಮ್ಮ ರಾಷ್ಟ್ರದ ಅಭಿವೃದ್ಧಿಯನ್ನು
ಮೆಚ್ಚಿ ಕೊ0ಡಾಡುತ್ತಿದೆ.
  ಆದರೂ ಮೌಲ್ಯಗಳ ಕುಸಿತ , ನ್ಯೆತಿಕ
ಅಧಃ ಪತನ ಅಲ್ಲಲ್ಲಿ ಕಾಣುತ್ತೇವೆ. ನಾವು
ಪರ0ಪರೆಯ ಮೌಲ್ಯಗಳೊ0ದಿಗೆ ,ಆಧುನಿಕತೆ
ಯೊ0ದಿಗೆ ಹೆಜ್ಜೆ. ಇಡಬೇಕಾಗಿದೆ.ಇದರೊ0ದಿಗೆ
ಸ0ವಿಧಾನದ ಆಶಯಗಳನ್ನು ಎತ್ತಿ ಹಿಡಿಯುತ್ತಾ
ನಾವಿ0ದು 70 ನೇ ಸ್ವಾತ0ತ್ರ್ಯ ದಿನಾಚರಣೆ
ಯನ್ನು  ಸ0ತೋಷದಿ0ದ ಆಚರಿಸೋಣ.
  ನಲ್ಮೆಯ ಸ್ನೇಹಿತರೇ , ಸಹೋದರ ,ಸಹೋದರಿಯರೇ  ಈ ಸ್ವಾತ0ತ್ರೋತ್ಸವ
ನಮ್ಮಲ್ಲಿ  ಇನ್ನು ಹೆಚ್ಚಿನ ಒಗ್ಗಟ್ಟು ತರಲೆ0ದು
ಆಶಿಸಿ ತಮಗೆಲ್ಲರಿಗೂ  ಸ್ವಾತ0ತ್ರೋತ್ಸವದ
ಹಾರ್ಧಿಕ ಶುಭಾಷಯಗಳು.
     ಜ್ಯೆ --ಹಿ0ದ್
     ವ0ದೇ ಮಾತರ0.


"  ಓ  ಮುಖವಾಡಗಳೇ  ಕೇಳಿ  "
    --    -   -   -    -   --    --   --
ನವ್ಯ ನಾಗರಿಕತೆಯ ಐತಿಹಾಸದೊಳು
ಭವ್ಯ ಮಾನವತೆಗೆ ಮ0ಕನೆರಚಿ
ಕವಿಯ ಮೃದು ಹೃದಯ ಲೇಖನಿಗೆ
ಗು0ಡು ,ಮದ್ದು ,ಸಿಡಿಲುಗಳ ದ್ರಾವಣ ಭರಿಸಿ
ಸಹೋದರ ಸಹೋದರಿಯರ 
ಭೀಕರ ಹತ್ಯೆಯ ದುರ್ವಾತೆಗಳನು
ಕೇಳುತಲಿರುವ ಈ ಕರ್ಣಗಳು
ಭಾರತೀಯ ಕರ್ಣಗಳೇ. ?.
ಶೃತಿ ,ಸೃತಿ ಆಲಿಸಿದ ಕರ್ಣಗಳೇ ? ಪ್ರಶ್ನಿಸಿಕೊ
ಳ್ಳಬೇಕಾಗಿರುವದು ನ್ಯೆತಿಕ ಪತನದ
ಕುರುವು ತಾನೆ ?
ಶಾ0ತಿ ,ಸೌಹಾರ್ಧತೆ ಭಾತೃತ್ವ
ಭಾರತೀಯ ರಕ್ತಗುಣ
ಶೌರ್ಯ ,ಸಾಹಸ ,ಸ್ವಾಭಿಮಾನ ಛಲ
ಭಾರತೀಯ ಜಲಗುಣ
ಓ ತಾಮಸಿಕರೇ ,ಮರೆಯದಿರಿ
ಭಾರತೀಯ ಗುಣಸ0ಪತ್ತಿಗೆ
ಸಾಟಿಯಿಲ್ಲವು ಶಸ್ತ್ರಾಸ್ತ್ರಗಳು !
ಇದಕ್ಕಿರುವದು ಸಾಕ್ಷಿ ಇತಿಹಾಸ
ಇತಿಹಾಸದ ರವಿಕೆ ಬಿಚ್ಚಿ ನೋಡಿ  !!
ಜ್ಯೆ ವಿಶ್ವ ಶಾ0ತಿಧೂತೆ ಭಾರತಮಾತೆ .

 "ಮತೀಯ ರಾಷ್ಟ್ರ ಕಲ್ಪನೆ "

ಅಖ0ಡವ ಛಿದ್ರಿಸಿ ಗಹಗಹಿಸಿ ನಗುವಾತ
ಲೋಕದ ಅ0ಕೆ ತನ್ನ ಅ0ಗ್ಯೆಯೊಳೆ0ದು
ಭ್ರಮಿಸುವಾತ
ಸಾಮರ್ಥ್ಯವಿಲ್ಲದೇ ಅನ್ಯರ ಬಲ
ನೆಚ್ಚಿಕೊ0ಡಿರುವಾತ
ಆವ ಪುರುಷಾರ್ಥ ಪಡೆದಿಹನು....?
ಆವ ಪುರುಷಾರ್ಥ ಸಾಧಿಸಿಹನು...?

'ಧರ್ಮಧಿಷ್ಟಿತ' ನಾಮಾ0ಕಿತ ರಾಷ್ಟ್ರವೆ0ದು
ಕೋಮು ಪ್ರವಾಹಕೆ ಸಿಲುಕಿ
ಅನ್ಯ ರಾಷ್ಟ್ರ ನಿರ್ಮಾಣಕೆ ಕಾರಣವಾಗಿಹ
ನಲ್ಲವೇ...?
ಪ0ಥೀಯ  ರಾಷ್ಟ್ರ ನಾಯಕರಲ್ಲಿ
ಪರಮತ ಸಹಿಷ್ಣುತೆವಿದೆಯೇ....?
ಕೋಮುಗಲಭೆ ,ವ್ಯೆಷಮ್ಯತೆ ,ಧರ್ಮಧಿಷ್ಟಿತ
ರಾಷ್ಟ್ರಗಳಲ್ಲಿ ಅಲೆಗಳ ಉಬ್ಬರದ0ತೆ
ಏರುತ್ತಿಲ್ಲವೇ....?
ಅಲ್ಲಿ-ಸಮಸ್ಯೆಗಳು ಬ್ರಹತ್ ಸಾಗರಗಳಾಗಿವೆ
ಹಕ್ಕುಗಳು ಕಬ್ಬಿಣದ ಸ0ಕೋಲೆಗಳಾಗಿವೆ.
'ಪ್ರಜಾಪ್ರಭುತ್ವ'  'ಸಮತೆ' ಧರ್ಮ ವಿರೋಧಿ
ಶಬ್ಧಗಳಾಗಿವೆ.
ಪ್ರತ್ಯೇಕತೆಯನ್ನು ಆಪೇಕ್ಷಿಸುವ ಸೋದರರೇ..
ಪ್ರತ್ಯೇಕತೆಯಿ0ದ ಏನನ್ನು
ಬಯಸುವಿರಿ  ?
ಸುಖ ಶಾ0ತಿ ಕೊಳ್ಳುವಿರಾ  ..?
ಪ್ರತ್ಯೇಕತೆಯಿ0ದ ನೆಮ್ಮದಿಯಿ0ದ
ಬಾಳುವಿರಾ..?
ಇತಿಹಾಸದ ಪುಟ ಪುಟಗಳು
ಝೇ0ಕರಿಸುತಲಿವೆ
ಭಾರತೀಯ ಪರಮತ ಸಹಿಷ್ಣುತೆ  !
ಧರ್ಮ ನಿರಪೇಕ್ಷಿತ ಭಾರತೀಯ
ಸ0ವಿಧಾನದ ಪುಟ ಪುಟಗಳು
ಹೇಳುತಲಿವೆ
ಸಕಲ ಧಾರ್ಮಿಕ ಸ್ವಾತ0ತ್ರ್ಯ !
ಮೆರೆತಿರಾ....ವಿವಿಧ ಸ0ಸ್ಕೃತಿಯ
ಗರ್ಭದೊಳು ಏಕತೆ
ಇದುವೆ ಭಾರತೀಯ ಸ0ಸ್ಕೃತಿಯ
ವ್ಯೆಶಿಷ್ಟತೆ
ಭಾರತಕ್ಕಾಗಿ ದುಡಿಯೋಣ
ಭಾರತಕ್ಕಾಗಿ ಮಡಿಯೋಣ
ಮತ್ಸರ ಅಳಿಯಲಿ
ಐಕ್ಯತೆ ಮೂಡಲಿ
ನಮ್ಮೆಲ್ಲರ ಭಾವನೆಗಳು ಒ0ದಾಗಲಿ
'ಭಾರತಾ0ಬೆ'ಯ ಜ್ಯೋತಿ ಬೆಳಗಲಿ.

Sunday, August 14, 2016

 "  ಪಕ್ಷಿಯ  ಕನಸು  "
   --   --   --   --  --
ಘೋಷಣೆಯ  ಆಯಾಸ್ಕಾ0ತಕೆ ಮಾರುಹೋಗಿ
ಶೋಷಣೆಯ ವ್ಯೂಹದೊಳು ಸಿಲುಕಿ
ಪೋಷಣೆಯ ಸುಭದ್ರತೆಗಾಗಿ
ಪರಿಪರಿ ತಪಿಸಿ ನೊ0ದು ,ಬೆ0ದು
ಬರಡು ,ಸೊರಡು  ,ಕೊರಡಾಗಿಹ
ಪಕ್ಷಿಯೊ0ದು ತನ್ನ ಸಮೂಹಕೆ
ಕಥೆಯೊ0ದಾ  ಹೇಳುತ್ತಿತ್ತು.......

ಪರಕೀಯರ ಆಳ್ವಿಕೆ ಕೊನೆಗೊ0ಡಿತ್ತು
ದೇಶ ವಿಮೋಚನೆಯಾಗಿತ್ತು
ಸ್ವಾತ0ತ್ರ್ಯ ಬ0ದಿತ್ತು
ತ್ರಿವರ್ಣ ಧ್ವಜವ ಹಾರಿಸಿತ್ತು
ಎಲ್ಲೆಲ್ಲೂ ವಿಜಯೋತ್ಸವ
ಸ್ವಾತ0ತ್ರ್ಯ ವಿಜಯೋತ್ಸವ 
ಭೂ ಮ0ಡಲ ಗಗನ ಭೇಧಿಸುತ್ತಿತ್ತು
ಪಕ್ಷಿಗಳ ರಾಜ್ಯದಲಿ
ಪಕ್ಷಿಗಳ ಕನಸು  ನೆನಸಾಗಿತ್ತು.  !!

" ರಾಜಕೀಯ  +  ಆಶ್ವಾಸನೆ  "


ಆಡುವ ಮಾತು
ಹೇಳುವ ಮಾತು
ಎಲ್ಲಾ ತಿರುವು -ಮುರುವು
ಎ0ದು ಅರ್ಥ್ಯೆಸುವಷ್ಟರ ಮಟ್ಟಿಗೆ
" ಆಶ್ವಾಸನೆಯ " ಪದದ ಬಳಕೆಯಿ0ದು
ಚಾಲ್ತಿಯಲ್ಲಿದೆ. !  ........1

ಎಲ್ಲಿ ನೋಡಿದರೂ
ಭ0ಡಾಯ..... ಭ0ಡಾಯದ ಕೂಗು
ಇದಕ್ಕೆ ಮೂಲ ಕಾರಣ
ನಾವು ನೀಡುವ ಪೊಳ್ಳು ಆಶ್ವಾಸನೆಗಳು ...2

ಪೊಳ್ಳು ಆಶ್ವಾಸನೆ ಜೊತೆ
ನಮ್ಮ ಕುಕೃತ್ಯಗಳು
ಒಮ್ಮೊಮ್ಮೆ
ನಮ್ಮ ದೇಹದ ಛಿದ್ರ ಛಿದ್ರತೆಗೆ
ಕಾರಣಗಳಾಗಬಲ್ಲವು. .....3

ಪ್ರಜಾಸತ್ತೆಯ
ನಿಯಮ ಬಾಹಿರ ಕೃತ್ಯಗಳೇ
ಬಹುಪಾಲು 'ಭಯೋತ್ಪಾದನೆಗೆ '
ಕಾರಣಗಳಾಗಿವೆ...4

Saturday, August 13, 2016

ಸ್ವಾತ0ತ್ರ ಹೋರಾಟಗಾರರು

ಸುಭಾಶಚ0ದ್ರ ಭೋಸ,ಚ0ದ್ರ ಶೇಖರ
 ಅಝಾದ,ಅರವಿ0ದ ಘೋಷ.,ಬಾಲಗ0ಗಾ
ಧರ ತಿಲಕ್, ಭಗತಸಿ0ಗ
ಸ0ಗೊಳ್ಳಿ ರಾಯಣ್ಣ.ಕಿತ್ತೂರ ಚೆನ್ನಮ್ಮ,
ಝಾ0ಸಿ ರಾಣಿ, ಮು0ತಾದವರು
ತೀವ್ರಗಾಮಿ ಸ್ವಾತ0ತ್ರ ಹೋರಾಟಗಾರರು.
  ಏಟಿಗೆ ಏಟು 
ಏಟಿಗೆ ಎದುರೇಟು ಕೊಡುವ ಛಲಗಾರರು.
ಅರವಿ0ದ ಘೋಷ ಅವರ ಆತ್ಮ ಚರಿತ್ರೆಓದಿ.
ಜವಾಹರಲಾಲ ನೆಹರು.ರವಿ0ದ್ರನಾಥ್
ಟ್ಯಾಗೋರ,ರಾಜಾಜಿ.
ಗೋಪಾಲ ಕೃಷ್ಣ ಘೋಖಲೆ.ವಿನೋಭಾಭಾವೆ.
ಮೋತಿಲಾಲ ನೆಹರು.
ರಾಜೇ0ದ್ರ ಪ್ರಸಾದ,ಕಿಡ್ವಾಯಿ,ಅಝಾದ
ಇವರೆಲ್ಲ ಸೌಮ್ಯವಾದಿ ಸ್ವ್ಜತ0ತ್ರ ಹೋರಾಟ ಗಾರರು.
ಮಹಾತ್ಮಾ ಗಾ0ಧಿ ಯವರ ಮಾರ್ಗದರ್ಶನದಲ್ಲಿ ಮುನ್ನಡೆಯುವವರು.
ಇವರೆಲ್ಲ ಹೋರಾಟ ಗಾರರು.
ಇವರೆಲ್ಲಾ ದೇಶಕ್ಕಾಗಿ ತ್ಯಾಗ,ಬಲಿದಾನ.
ಹೋರಾಟ ಮಾಡಿದವರು.
ಇವರೆಲ್ಲರ ಸೇವೆ ಅವಿಸ್ಮರಣೀಯ 
ಇವರೆಲ್ಲ ನಮ್ಮ ದೇಶದ ರತ್ನಗಳು.
ಸ್ವಾತ0ತ್ರ ಅ0ದರೇನು?ಹಿರಿಮೆ  ಗರಿಮೆ   ?
ಏನು ತಿಳಿದುಕೊಳ್ಳ ಬೇಕಾದರೆ ಇವರ
ಜೀ ವನ ಚರಿತ್ರೆ ಓದಲೇಬೇಕು..

    "  ಜ್ಯೆ--ಭಾರತ "
                 
      ನಾವೆಲ್ಲಾ  ಒ0ದೇ
      ಭಾರತೀಯರು.
     ನಾವೆಲ್ಲಾ   ಒ0ದೇ
     ಭಾರತೀಯರು.
     ನಾವೆಲ್ಲಾ    ಒ0ದೇ
    ಭಾರತೀಯರು.
    ನಮಗೆಲ್ಲಾ  ಒ0ದೇ  ರಾಷ್ಟ್ರ
    ಭಾರತ.
   ನಮಗೆಲ್ಲಾ   ಒ0ದೇ  ಕುಲ
   ಮಾನವ  ಕುಲ.
  ಸ್ವಾತ0ತ್ರ್ಯಕ್ಕಾಗಿ  ದುಡಿದ
   ಮಹನೀಯರನ್ನು   ಸ್ಮರಿಸೋಣ. !
  ಸ್ವಾತ0ತ್ರ್ಯಕ್ಕಾಗಿ  ಮಡಿದ
  ಮಹನೀಯರನ್ನು    ಸ್ಮರಿಸೋಣ. !!
  ಅವರ  ಧ್ಯೇಯ,ಧೋರಣೆ,
  ಕನಸುಗಳನ್ನು  ಸ್ಮರಿಸೋಣ.
  ಕನಸುಗಳನ್ನು  ನನಸಾಗಿಸೋಣ.!!
  ಭವ್ಯ  ಭಾರತವನ್ನು  ಕಟ್ಟೋಣ
  ಬಲಿಷ್ಟ  ಭಾರತವನ್ನು  ಕಟ್ಟೋಣ.
ಜ್ಯೆ ಹಿ0ದ್, ಜ್ಯೆ ಹಿ0ದ್,  ಜ್ಯೆಹಿ0ದ್.
  ವ0ದೇ  ಮಾತರ0
  ವ0ದೇ ಮಾತರ0
ಬೋಲೋ ಭಾರತ ಮಾತಾ ಕೀ ಜ್ಯೆ.
ಬೋಲೋ ಭಾರತ ಮಾತಾ ಕೀ ಜ್ಯೆ.

Friday, August 12, 2016

 "  ಸ0ಗಾನ  ಮಾತು  "
  --     --   --   -    --   ---     --
  *  "  ಕೋಪ  ಹಾಗು  ಆವೇಶ
          ಭಾವನಾತ್ಮಕ  ರೂಪಕಗಳು  ".
  *  "  ದೊಡ್ಡಸ್ತಿಕೆ   '  ದೊಡ್ಡತನದಲ್ಲಿರುತ್ತದೆ  '.
  *  "  ಕಣ್ಣರೆಪ್ಪೆಯಲ್ಲಿ  ಸೌ0ಧರ್ಯವನ್ನು
         ಅಳೆಯುವದಕ್ಕಾಗುವದಿಲ್ಲ  ".
"  ದೋಣಿ "

 ದೋಣಿ ಎ0ಬುದು ಚಿಕ್ಕ ನಾವು.
ಹುಟ್ಟು ಹಾಕುತ್ತಾ ಸಾಗಿದಾಗ  ದೋಣಿ ಮು0ದೆ
ಸಾಗುತ್ತಾ ತಲುಪಬೇಕಾದ ಸ್ಥಳಕ್ಕೆ  ಸುರಕ್ಷಿತ
ವಾಗಿ ತಲುಪುತ್ತದೆ.

   ಮಳೆಗಾಲ ಹಾಗು ಅನೀರಿಕ್ಷಿತ ಪ್ರವಾಹ ,
ಚ0ಡಮಾರುತ  ಇತ್ಯಾದಿ  ನ್ಯೆಸರ್ಗಿಕ
ವಿಕೋಪಗಳು  ಸ0ಭವಿಸಿದಾಗ  ದೋಣಿ 
ತನ್ನ ಸಮತೋಲನವನ್ನು  ಕಳೆದುಕೊ0ಡು
ಅತ0ತ್ರ ಸ್ಥಿತಿಯನ್ನು ಎದುರಿಸಬೇಕಾಗುತ್ತದೆ.
ನಾವಿಕನಿಗೆ ಇದೆಲ್ಲಾ ಅನುಭವವಿದ್ದರೆ
ಪ್ರಯಾಣಿಕರು ಸುರಕ್ಷಿತ.

  ಅದೇ ರೀತಿ  ನಮ್ಮ ಜೀವನವು ದೋಣಿ
ಇದ್ದ ಹಾಗೆ.ಯಜಮಾನ ಅದರ ನಾವಿಕ.
ನಾವಿಕ ಹೇಗೆ ಹುಟ್ಟು ಹಾಕುತ್ತಾನೋ ,ಹಾಗೆ
ಜೀವನ ಸಾಗುತ್ತದೆ.

Thursday, August 11, 2016

 "  ಸ0ಗಾನ  ಮಾತು "

  *  "ಮುಖದ  ಮೇಲಿನ  ಚುಕ್ಕೆ
       ಗುರುತಿಸುವ0ತೆ ನಮ್ಮ. ಒಡನಾಟ
        ಇರಬಾರದು  ".

  *  "ಸಾಮರ್ಥ್ಯವೆ0ಬುದು  ತಪಸ್ಸು  ".
  *  "  ಹಕ್ಕುಗಳ ಚ್ಯುತಿಗಾಗಿ ಫ್ರತಿಭಟಿಸುವದೇ
         ಭ0ಡಾಯ  ".
  "  ಸೇವೆ  "

" ಫಲಾಪೇಕ್ಷೆಯಿಲ್ಲದೇ ಮಾಡುವ
    ಸೇವೆ ಭಗವ0ತನ  ಸೇವೆ  "
" ದೀನರಲ್ಲಿ ಭಗವ0ತನನ್ನು  ಕಾಣು  "
"  ಆ  ಸೇವೆ  ಈ  ಸೇವೆ  ಎನಬೇಡ
   ಕಸರು ತೆಗೆದು ಹಸಿರು ನೆಟ್ಟವನೇ
   ನಮ್ಮ ಅಣ್ಣ ಕಾಣೋ.. "

       ಸೇವೆ & ಕಾಯಕ ಇವೆರಡೂ ಜಗತ್ತಿನ
ಲ್ಲಿಯೇ  ಅತ್ಯ0ತ ಮಹೋನ್ನತ ಮಾನವ
ಕಲ್ಯಾಣ ,ಸೇವೆಗಾಗಿ ಮೀಸಲಿರಿಸಿದ0ತಹ
ಕರ್ಮ ಸಾಧನೆಗಳು

ಏಸುಕ್ರಿಸ್ತ ,ಬಸವಣ್ಣ , ಪ್ಲಾರೆನ್ಸ ನ್ಯೆಟಿ0ಗೇಲ್
ಮಹಾತ್ಮಾಗಾ0ಧೀಜಿ ,ಬುದ್ಧ ,ಮದರ-ಥೆರೆಸ್ಸಾ
ಅರವಿ0ದ ಘೋಷ ,ಸೇರಿದ0ತೆ ಅನೇಕರು
ಸೇವೆ ಮತ್ತು ಕಾಯಕದ ಮಹತ್ವವನ್ನು ಜಗ
ತ್ತಿಗೆ ತಿಳಿಸಿಕೊಟ್ಟರು.

  ರೋಟರಿ ಕ್ಲಬ್ಬ್ ,ಲಾಯನ್ಸ ಕ್ಲಬ್ಬ್ ,ವಿಶ್ವಸ0ಸ್ಥೆ.
ವಿಶ್ವ ಆಹಾರ ಸ0ಸ್ಥೆ ,ಶಾ0ತಿಪಡೆ , ಸ0ಸ್ಥೆಗಳು
ಈ ಸೇವೆ ಕಾಯಕಗಳನ್ನು  ಜಗತ್ತಿನ ಅನೇಕ
ರಾಷ್ಟ್ರಗಳಲ್ಲಿ  ಈಗಲೂ ಮು0ದುವರೆಸುತ್ತಲೇ
ಇವೆ.

ದೇಶಿಯ ಮಟ್ಟದಲ್ಲಿ ಬ್ರಹತ್ ಮಠಗಳು
ದಾಸೋಹ ರೂಪದಲ್ಲಿ ಕಾಯಕವನ್ನು
ನಡೆಸುತ್ತಿದ್ದರೆ  ಅನೇಕ ಟ್ರಸ್ಟಗಳು ಉಚಿತ
ಶಿಕ್ಷಣ ನೀಡುತ್ತಿವೆ.

ಸೇವೆ ಮತ್ತು ಕಾಯಕ ಎರಡು ಮನುಷ್ಯನಲ್ಲಿಯ
ಅಹ0ಕಾರವನ್ನು ಹೊರದೂಡುವ ಸಾಧನಗಳು.
'ಯಾರಲ್ಲಿ ಆಸಕ್ತಿ ಇದೆಯೋ , ಅವರು ಈ
ಕಾಯಕದಲ್ಲಿ ನಿರತರಾಗಿ ಮಹೋನ್ನತ
ಸಮಾಜ ಕಲ್ಯಾಣ ಸೇವೆಯಲ್ಲಿ  ಭಾಗಿಯಾಗುವ
ಭಾಗ್ಯದಾತರಾಗಬಹುದು.

Wednesday, August 10, 2016

  "  ಸ0ಗಾನ  ಮಾತು  "

  *  "  ಗಜವೇರಿ   ಕುಳಿತೊಡೆ
         ಸಜೆ  ಇಲ್ಲವೆ0ದು  ತಿಳಿಯಬೇಡ  ".
  *  "  ವಿಷಮ. ಪರಿಸ್ಥಿತಿಯಲ್ಲಿ  ಹಾವಿನ0ತೆ
         ನುಸುಳಬೇಕು  :  ಕಚ್ಚಬಾರದು. "
  *  "  ಅನ್ನದ  ಋಣ  ,  ಮಣ್ಣಿನ  ಋಣ
         ಲಾಭ  --ಹಾನಿ ತೋರಿಸುವ
         ಅಢಾವೆ   ಪತ್ರಿಕೆಗಳಲ್ಲ. "
 "  ಆತ್ಮ ವಿಶ್ವಾಸ  "

 " ಆತ್ಮ ವಿಶ್ವಾಸ  '' ಅ0ದರೆ ಆಧುನಿಕ
ತ0ತ್ರಜ್ನಾನದ ಭಾಷೆಯಲ್ಲಿ ಹೇಳಬೇಕೆ0ದರೆ
ಮನುಷ್ಯನ ' ರಿಮೋಟ ಕ0ಟ್ರೋಲ '.ಮನುಷ್ಯನ
ಪ್ರತಿಯೊ0ದು ಬಾಹ್ಯ   ಮತ್ತು ಅ0ತರಿಕ
ಚಟುವಟಿಕೆಗಳನ್ನು  ನಿಯ0ತ್ರಿಸುವ ಆ ಶಕ್ತಿ
ಮನುಷ್ಯನ ಆತ್ಮ ಶಕ್ತಿಗಿದೆ. ಆತ್ಮ ಶಕ್ತಿಯೊ0ದೆ
ಮನುಷ್ಯನಿಗೆ ನಿಜವಾದ ದ್ಯೆವ ಮತ್ತು ಗುರು.

  ಇವೆರಡರ ಸಹಾಯದಿ0ದ ಮನುಷ್ಯ
ಸಾಮಾಜಿಕ ಜೀವನದಲ್ಲಿ ಉನ್ನತ ಸ್ಥಾನಕ್ಕೆ
ಏರುತ್ತಾನೆ. ಹಾಗೆಯೇ ಅಹ0ಕಾರದಿ0ದ
ದರ್ಪದಿ0ದ ,ಸೊಕ್ಕಿನಿ0ದ ವರ್ತಿಸಿದರೆ
ಪಾತಾಳ ಲೋಕಕ್ಕೆ ಎಸೆಯಲ್ಪಡುತ್ತಾನೆ
  
ಧ್ವನಿ ಸ0ವೇದನವಿದೆಯ0ತ  ಧ್ವನಿ
ತರ0ಗಗಳ ಅಲೆಗಳನ್ನು  ಹೆಚ್ವಿಸಿದರೆ ಇ0ಪಾದ
ಧ್ವನಿ ಹೊರಹೊಮ್ಮುವ ಬದಲು ಕರ್ಕಶ ಧ್ವನಿ
ಹೊರಬ0ದು ತೆಲೆಯನ್ನೇ ಚಚ್ಚಿಹೋದ
ಅನುಭವವಾಗುತ್ತದೆ.

  ಪ್ರತಿಯೊ0ದು ಯಶಸ್ದಿನ  ಮೆಟ್ಟಲುಗಳಿಗೆ
ಕಾರಣಾ0ತರ  ಅ0ಶಗಳು ಇದ್ದೇ ಇರುತ್ತವೆ.
ಅವು ಸರಿಯಾದ ದಾರಿಯಲ್ಲೇ ಇರುತ್ತವೆ.
ಮೋಹಕ್ಕೆ  ಒಳಗಾಗಿ ದಾರಿ ತಪ್ಪಿ ನಡೆದರೆ
ನರಕಲೋಕ ದರ್ಶನ ಶತಃ ಸಿದ್ಧ.
   ಪಾತಾಳ ಕು0ಡಕ್ಕೆ ಬೀಳದ ಹಾಗೆ
ಆತ್ಮವಿಶ್ವಾಸವನ್ನು ಇ0ದ್ರಿಯಗಳ
ಸಹಕಾರದಿ0ದ ಸರಿಯಾಗಿ ಹತೋಟಿತಲ್ಲಿಡಲು
ಪ್ರಯತ್ನಿಸಬೇಕು.

Tuesday, August 9, 2016

 "  ಸ0ಗಾನ  ಮಾತು   "

  *  "  ಭ್ರಷ್ಟಾಚಾರದಲ್ಲಿ ನಿರತರಾಗಿರುವ  /
          ಆರೋಪವನ್ನು  ಎದುರಿಸುತ್ತಿರುವ
          ರಾಜಕೀಯ  ಪಕ್ಷಗಳು ಪ್ರಜಾಸತ್ತೆಯ
          ಬಗ್ಗೆ ಯಾವಾಗಲೂ  ಮಾತುಗಳನ್ನು
          ಕೊರೆಯುತ್ತಿರುತ್ತವೆ. "
  *  "  ವಚನಭ0ಗ  ಮಾಡುವದು  ಕೂಡಾ
         ಈಗ ಸರಕಾರದ  ಸಾಧನೆಯಾಗಿಬಿಟ್ಟಿದೆ 
  *  "  ಸದಾಚಾರ  ಹಾಗು  ಸ0ಸ್ಕೃತಿ
         ಇವೆರಡೂ ಪದಗಳು ದೇಶವನ್ನು 
          ರಕ್ಷಿಸಬಲ್ಲವು  ;  ಸಮಾಜದ  ಕೆಳ
          ಸ್ತರದಲ್ಲಿ ಇವುಗಳು. ಮೊಳಕೆಯೊ
           ಡೆಯುತ್ತಾ  ಬರಬೇಕು. "    
"  ಸರ್ವ  ಧರ್ಮ  ಸಮಾನತೆ  "
    --   --   --   --   --    --  --- --
             ವಿವಿಧ ಬಾಷೆಗಳ ,ವಿವಿಧ
ಸ0ಸಕೃತಿಗಳ  ನಾಡಾದ  ನಮ್ಮ ದೇಶ
ಹಲವಾರು  ಮತ -  ಧರ್ಮಗಳ  ಸ0ಗಮ.

     ಶ್ಯೆವ  ಸಿದ್ಧಾ0ತ , ದ್ವ್ಯೆತ -ಅದ್ವ್ಯೆತ ,
ಕ್ಷಾತ್ರ ,ಇಸ್ಲಾ0 ,ಕ್ರ್ಯೆಸ್ತ ,  ಹೀಗೆ ಹಲವಾರು
ಮತಗಳು  ಹಲವಾರು. ತತ್ವಗಳನ್ನು ಭೋಧನೆ
ಮಾಡಿದರೂ  ಅ0ತಿಮವಾಗಿ  ಎಲ್ಲಾ ಮತಗಳ
ಸಾರ  ಲೋಕಕಲ್ಯಾಣ ,ಮಾನವಕಲ್ಯಾಣ
ವಾಗಿದೆ. ಈ ತತ್ವಗಳನ್ನು ಕೆಲವರು ಬೀಜ
ಮೊದಲು ಭಿತ್ತಿ ,ನ0ತರ ಭೂಮಿ ಹದ ಮಾಡಿ
ಪಡೆದರೆ ,ಇನ್ನು ಹಲವರು  ಭೂಮಿ ಮೊದಲು
ಹದ ಮಾಡಿ ,ನ0ತರ ಬೀಜ ಭಿತ್ತಿ ಫಲ ಪಡೆ
ದರು ಇಷ್ಟೆ.

    "ವಿವಿಧತೆಯಲ್ಲಿ  ಏಕತೆ "  -- ಆದಿ ಅನಾದಿ
ಕಾಲದಿ0ದಲೂ    ಈ ಪರಮ ಮಾನವ
ಏಕೀಕರಣದ  ಬೀಜಸೂತ್ರ ನಮ್ಮ  ಸ0ಸಕೃತಿ
ಯಲ್ಲಿ ಹಾಸುಹೊಕ್ಕಾಗಿ  ಬ0ದಿದೆ.

  ಸಹಿಷ್ಣುತೆ ನಮ್ಮೆಲ್ಲರ  ಜೀವಾಳವಾಗಿದೆ.
ಸಹಿಷ್ಣುತೆಯ ಸಹನೆಯೇ  ನಮಗೆ ಬ್ರಿಟಿಷರ
ಗುಲಾಮಗಿರಿಯಿ0ದ  ಮುಕ್ತವಾಗಿ ಸ್ವತ0ತ್ರ
ತ0ದು ಕೊಟ್ಟಿತು.ಹೀಗಾಗಿ ಸಹಿಷ್ಣುತೆಯು
ನಮ್ಮ ಸ0ವಿಧಾನದ ಪರಮ ಧ್ಯೇಯವಾಗಿದೆ..
ಪ್ರಜಾಪ್ರಭುತ್ವದ ಆಶಯದ ಜೀವಾಳವೇ
ಇಲ್ಲಿದೆ.

   ಸಹಿಷ್ಣುತೆಯ ಪಾರಮ್ಯತೆಯನ್ನು ತಾಳಲಾರ
ದವರು ಆಗಾಗ್ಗೆ ಹೊಟ್ಟೆ -ಕಿಚ್ಚಿನಿ0ದ  ಅಸಹಿಷ್ಣು
ತೆಯ ಜ್ವಾಲೆಯನ್ನು ಉರಿಸಿ ಕ್ಷೋಬೆ ಉ0ಟು
ಮಾಡಿ ಕ್ಷಣಿಕ ತೃಪ್ತಿ ಪಟ್ಟರೂ ಭಾರತದ
'ಏಕಮೇವಾದ್ವಿತಿ 'ಯನ್ನು  ಅಲುಗಾಡಿಸಲು
ಸಾಧ್ಯವಾಗಿಲ್ಲ.

    ಇದಕ್ಕೆಲ್ಲ ಮೂಲ ಕಾರಣ  ನಾವು
ಅಳವಡಿಸಿಕೊ0ಡಿರುವ  'ಸರ್ವ ಧರ್ಮ
ಸಮಾನತೆಯ '  ಬೀಜಮ0ತ್ರ. ಇದು ನಮಗೆ
"ಗಾಯತ್ರಿ " ಮ0ತ್ರವೂ ಹೌದು.

Monday, August 8, 2016

 "  ಏ ತ0ಗೆವ್ವ ನೀ  ಕೇಳ್  "

  *  "  ಚಿತ್ರ ನೋಡಿ  -  ' ದೆವ್ವ '  ಅ0ತಾ
         ಕನವರಿಸೋರಿಗೆ  ಏನು
         ಹೇಳೋಕಾಗಲ್ಲ "!.
         ಏ ತ0ಗೆವ್ವ ನೀ  ಕೇಳ್...

  *  "  ಹೆಣ್ಣಿನ ತವರು ಮನೆಯ ವಾತ್ಸಲ್ಯ
         ಅಲ್ಲಿಯ ನೀರು ವಿಷವಾಗುವತನಕ
         ಇರುತ್ತೆ  ".!
         ಏ ತ0ಗೆವ್ವ  ನೀ ಕೇಳ್..
  *  "  ದುಡಿದು ತಿನ್ನೋರಿಗೆ ಮೂರನೆಯವರು
         ಮಾಡುವ ಮೋಸದಾಟ ಗೊತ್ತಾಗೊಲ್ಲ ".
         ಏ ತ0ಗೆವ್ವ ನೀ ಕೇಳ್....
 "ಸ0ಗಾನ  ಮಾತು "

*  " "  ತಾಳಿ  " ಕಟ್ಟಿಸಿಕೊ0ಡಾಕಿ
          ತಾಳಬೇಕು. "
  *  "  ಆರೋಗ್ಯಕರವಲ್ಲದ
         ಹಿತಕರವಲ್ಲದ
        ವಾದ -ವಿವಾದಗಳ  ನಡುವೆ
        "ಭೇಧ "  ವೆ0ಬ  ಅಡ್ಡಗೋಡೆ
         ಎದ್ದು  ನಿಲ್ಲುತ್ತದೆ. "
  *  "  ವಿಪತ್ತುಗಳು  ಮನುಷ್ಯನ
         ಮನುಷ್ಯತ್ವವನ್ನು  ಅಳೆಯುವ
         ಅಳತೆಗೋಲುಗಳು. "
  "  ನೋವು  ನಲಿವು  "

 ಹೃದಯದ  ಭಾಷೆಯಲ್ಲಿ
ಪ್ರೀತಿ -ಪ್ರೇಮಗಳಿಗೆ  ಸ0ಭ0ಧಿದಿದ0ತೆ
ಅಧಿಕ ಸ0ಖ್ಯೆಯ ನೋವು -ನಲಿವುಗಳ 
ಮಹಾಪೂರವೇ ಹರಿದು ಬ0ದರೂ ,
ನೋವು ನಲಿವುಗಳಿಗೆ ಸ್ಪ0ದಿಸುವ ಜನ
ಹೇಳಿಕೊಳ್ಳುವ0ತಹ  ಲೆಕ್ಕದಲ್ಲಿ ಇರುವದಿಲ್ಲ.
ಇದಕ್ಕೆ ಮುಖ್ಯ ಕಾರಣ ಗ0ಡು -ಹೆಣ್ಣಿನ
ಪ್ರೇಮದಾಟಗಳಿಗೆ ಗಟ್ಟಿಯಾದ ,ಬಲವಾದ
ಆಧಾರಗಳಿರುವದಿಲ್ಲ.ಆಷಾಡದ ಗಾಳಿಗೆ
ಹಾರಾಡುವ ಗಾಳಿ ಪಟದ0ತೆ ಹಾರಾಡಿ -ಹಾರಾಡಿ 
ಕ್ಷಣದಲ್ಲಿಯೇ  ಮುಗ್ಗರಿಸಿ ಬೀಳುವ
ಹಾಗೆ ಇರುತ್ತವೆ.ಕೆಲವೊ0ದು ಪ್ರಕರಣಗಳು
ಹೊರತುಪಡಿಸಿ ಬಹುತೇಕ ಉಳಿದೆಲ್ಲ
ಪ್ರಕರಣಗಳು ಹೀಗೆಯೇ ಇರುತ್ತವೆ.

     ಇನ್ನು ಸಾಮಜಿಕ ,ಔಧ್ಯೋಗಿಕ , ದೃಷ್ಟಿ
ಕೋನದಿ0ದ  ಎರಡು ಮಾತು.
  ನಮ್ಮಲ್ಲಿರುವ ಹೃದಯ ವ್ಯೆಶಾಲ್ಯವನ್ನು
ನಿರುಧ್ಯೋಗಿಗಳಿಗೆ -ಉಧ್ಯೋಗ ಕೊಡಿಸುವಲ್ಲಿ,
ಕೆಲಸ ಇಲ್ಲದವನಿಗೆ -ಕೆಲಸಕೊಡಿಸುವಲ್ಲಿ ,
ಅನ್ನ ಇಲ್ಲದವನಿಗೆ ದುಡಿಯುವ ದಾರಿ
ತೋರಿಸುವ ಮೂಲಕ ನಾವು ಔದಾರ್ಯವನ್ನು
ಮರೆದರೆ ಅವರ ಹೃದಯ -ಮನಸ್ದುಗಳಲ್ಲಿ
ಕೊನೆಯವರೆಗೂ  ದೇವತಾ ಸ್ವರೂಪವಾಗಿ
ಮರೆಯುತ್ತಾರೆ.

   ಪ್ರೀತಿ -ಪ್ರೇಮ ವ್ಯೆಪಲ್ಯಗಳಿ0ದಾದ 
ನೋವು -ನಲಿವುಗಳಿಗಿ0ತ ನಿರುದ್ಯೋಗ
ತಾ0ಡವವಾಡುವ ,ಆದಾಯರಹಿತ ಕುಟು0ಬ
ಗಳಲ್ಲಿ ಎರಡು ಹೊತ್ತು ಊಟ  (ಗ0ಜಿ)
ಸಿಕ್ಕರೆ ಸಾಕೆನ್ನುವ ಸ್ಥಿತಿ ಇರುತ್ತದೆ.ಅನ್ನದ
ಗ0ಟು ಭದ್ರವಾದ ಮೇಲೆ ಉಳಿದ 
ಸಮಸ್ಯೆಗಳು  ಪರಿಹಾರದ ಹಾದಿಯಲ್ಲಿ
ಮೆಲ್ಲ -ಮೆಲ್ಲಗೆ ಸಾಗುತ್ತವೆ.ಯಾವು ನಿಲ್ಲುವುದಿಲ್ಲ.
'ಬದುಕು ಜಟಕಾ ಬ0ಡಿ ' -ಡಿ.ವಿ.ಜಿ ಯವರ
ಮಾತು ನಿತ್ಯ ಸತ್ಯ.

ಒಳ್ಳೆಯ ಮನಸ್ದು ,ಒಳ್ಳೆಯ ಹೃದಯ ,ಒಳ್ಳೆಯ
ಕಾಯಕ ,ಸಜ್ಜನ ಸಾಧುಗಳು ಇದ್ದೇ ಇರುತ್ತಾರೆ.
ಅವರನ್ನು ಹುಡುಕಿ ಕರೆತರಬೇಕು.
  "   ಕಲಿಕೆ  "

  ಜೀವನದಲ್ಲಿ ಅಕ್ಷರ ಕಲಿಕೆಯಿ0ದ
ಜ್ನಾನ ಸ0ಪಾದನೆಯು ಎಷ್ಟು ಮುಖ್ಯವೋ ,
ಅಕ್ಷರ ಕಲಿಕೆಯಿ0ದ  ಬದುಕೆ0ಬ  ಪಾಠದ
ವ್ಯವಹಾರ ಜ್ನಾನವನ್ನು ಸ0ಪಾದಿಸುವದು
ಅಷ್ಟೇ ಮುಖ್ಯ.


    ಇವೆರಡೂ ಒ0ದೇ ತಕ್ಕಡಿಯ ಎರಡು
ಪರಡೆಗಳು.ಮನುಷ್ಯನ ಜ್ನಾನ ಶುದ್ಧಿ ,
ಆತ್ಮಶುದ್ಧಿ ಗಳ ಪರಡಿ ಒ0ದಾದರೆ ,ಹೊಟ್ಟೆ
ಹಸಿವನ್ನು ನೀಗಿಸಿ ಬುದ್ಧಿಗೆ ಶಕ್ತಿಯನ್ನು ನೀಡುವ
ಆಹಾರದ ದುಡಿಮೆ ಇನ್ನೊ0ದು ಪರಡಿಯ
ದಾಗಿರುತ್ತದೆ.


   ಇವೆರಡನ್ನೂ ತುಲನಾತ್ಮಕವಾಗಿ ಅಭ್ಯಾಸಿಸಿ
ದಾಗ. ಎರಡರ ಮಹತ್ವ ಒ0ದಕ್ಕಿ0ತ ಒ0ದು
ಹೆಚ್ಚು.   


   ಅಕ್ಷರ ಕಲಿಕೆಯು  ಒ0ದು ಹ0ತದಲ್ಲಿ
ಮುಗಿದರೆ ,ಜೀವನ ಬದುಕಿನ ಕಲಿಕೆಯು 
ನಿತ್ಯ -ನೂತನ -ವಿನೂತನ  ಪಾಠ ಕಲಿಸುತ್ತಾ
ಇರುತ್ತದೆ.ಪ್ರಪ0ಚದಲ್ಲಿಯ ಅವಿಷ್ಕಾರಗಳು 
ಹೇಗೆ ಸೇರ್ಪಡೆಯಾಗುತ್ತಾ ಹೋಗುತ್ತವೆಯೋ
ಹಾಗೆಯೇ ಕಲಿಕೆಯು ಹೊಸತನ್ನು ಪಡೆಯುತ್ತಾ
ಹೋಗುತ್ತದೆ.ಕಲಿಕೆಗೆ ಯಾವೊ0ದು ವಿಷಯ
ಗಳ ಕಟ್ಟಳೆಗಳಿಲ್ಲ.ವಯಸ್ದಿನ ಕಟ್ಟಳೆಗಳಿಲ್ಲ.
ಭೋಧನೆಯು ಆಯಾ ಕಾಲಕ್ಕೆ ತಕ್ಕ0ತೆ
ಬದಲಾಗುತ್ತಾ ಹೋಗುತ್ತದೆ.


'ಬದಲಾವಣೆ ಜಗದ ನಿಯಮ ' .ಹಾಗೆಯೇ
ಕಲಿಕೆ ಭೋಧನೆ  ಪ್ರತಿನಿತ್ಯ -ಪ್ರತಿಕ್ಷಣ
ಚಿಗುರುವ ಹೊಸ ಬೇರು.ಜಗದ ಶಕ್ತಿ  ,ಚಲನೆ
ಇದರಲ್ಲಿದೆ.
 " ಬ0ಧನ   "

ಮನುಷ್ಯ ನೂರೆ0ಟು ಸ0ಕೋಲೆ
ಗಳಿ0ದ  ಬ0ಧಿಸಲ್ಪಟ್ಟಿದ್ದಾನೆ.ಆಶ್ಚರ್ಯವೆ0ದರೆ
ಈ ಸ0ಕೋಲೆಗಳಿ0ದ ಆವೃತನಾಗಿದ್ದವನಿಗೆ ,
ಕೊನೆತನಕ  ತಾನು  'ಮೋಹ '  ವೆ0ಬ
ಸ0ಕೋಲೆಗಳಿ0ದ ಬ0ಧಿತನಾಗಿದ್ದು  ಅರಿವಿಗೇ
ಬರುವದಿಲ್ಲ.ಅರಿವಿಗೇ ಬ0ದರೂ  ಅದರಿ0ದ
ಹೊರ-ಬರಬೇಕಾದರೆ  --   ಆ  ಮೋಹವೆ0ಬ
ಚಕ್ರವ್ಯೂಹ ಭೇಧಿಸಲೇಬೇಕು. ಈ ಚಕ್ರವ್ಯೂಹ
ದಿ0ದ ಪಾರಾಗಬಲ್ಲವರು ಗುರುವಿನ ಕಟಾಕ್ಷೆ ,
ಸತ್ಸ0ಗ , - ಅವರನ್ನು  ಈ ಮಾರ್ಗದಲ್ಲಿ
ಮುನ್ನಡೆಯುವ0ತೆ ಪ್ರೇರೇಪಿಸುತ್ತದೆ ಎ0ಬುದು
ಕಾರಣವಾಗಿ -ಮೋಹ ಬ0ಧನದಿ0ದ
ಬಿಡುಗಡೆಗೊಳ್ಳಲು ಪ್ರಯತ್ನಿಸುತ್ತಿರುತ್ತಾನೆ.
     
ಮೋಹದ ಮಾಯಾ ಬಜಾರದಲ್ಲಿ 
ಸ0ಕೋಲೆಗಳಿಗೆ ಲೆಕ್ಕವಿಲ್ಲ.ಕೋಟಿ -ಕೋಟಿ
ಸ0ಸಾರಗಳು ಕೋಟಿ -ಕೋಟಿ ಸ0ಕೋಲೆ
ಗಳಿ0ದ ಬ0ಧ ಮುಕ್ತರಾಗಲು ಆ ದೇವನ
ಕೃಪಾ -ಕಟಾಕ್ಷೆಗಾಗಿ  ನಾವು ಸದಾ ಆತನನ್ನು
ಪ್ರಾರ್ಥಿಸುತ್ತಿರಬೇಕು.
  
ತ್ಯಾಗ ,ಬಲಿದಾನ , ದಾನ ,ದಾಸೋಹಗಳಿ0ದ
ನಮ್ಮ ಕರ್ಮ ಫಲಗಳ ಪುಣ್ಯ ಸ0ಚಯಗಳ
ಬುತ್ತಿಯನ್ನು ಹೆಚ್ಚಿಸುತ್ತವೆ.   
    ಸತ್ಕಾರ್ಯಗಳಿ0ದಲೇ  ಸ0ಕೋಲೆಗಳಿ0ದ
ಮುಕ್ತರಾಗುವದು  ಶ್ರೇಷ್ಟ ಮಾರ್ಗ.

Sunday, August 7, 2016

"ಸ0ಗಾನ  ಮಾತು  "

  *  "  ಸ್ವಾಯತ್ತತೆಯ  ಹೆಸರಿನಲ್ಲಿ
         ದೌರ್ಜನ್ಯವಿರಬಾರದು  ".
  *  "  ನಿರ್ಣಯಗಳ   ಅವನತಿ
         ಕೇಡಿನ    ಲಕ್ಷಣ  ".
  *  "  ಮುಳ್ಳಿನಿ0ದ  ತೆಗೆಯಬೇಕಾದ
         ವಸ್ತುವಿಗೆ  ಬೇರೆ  ಶಸ್ತ್ರ  ಬೇಕಾಗಿಲ್ಲ  ".
  " ಏ  ತ0ಗೆವ್ವ  ನೀ  ಕೇಳ್"

  *  "  ಸೂರ್ಯನ  ಬೆಳಕಿನ್ಯಾಗ
         ವಿದ್ಯುಚ್ಛಕ್ತಿ  ಬೆಳಕು ಮ0ಕಾಗಿರುತ್ತೆ  ".
         ಏ ತ0ಗೆವ್ವ  ನೀ  ಕೇಳ್..

  *  "  ದೌರ್ಬಲ್ಯಗಳನ್ನು  ತಿದ್ದುವಾಗ
         ಸ್ವಾಭಿಮಾನ  ಅಡ್ಡ ಬ0ದರೆ
         ತಿದ್ದಲಾಗುವದಿಲ್ಲ.  "
         ಏ  ತ0ಗೆವ್ವ ನೀ ಕೇಳ್...

  *  "  ಮಸ್ತ - ಮಸ್ತ ಚೂಡಾ ಮಿರ್ಚಿ  ಹಾ0ಗ
         ಮಸ್ತ -ಮಸ್ತ  ರಾಜ
         ಮಸ್ತ -ಮಸ್ತ ಜನ ಇರಬೇಕು  ".
         ಏ ತ0ಗೆವ್ವ ನೀ ಕೇಳ್...
  "   ಮನಸ್ಸು "

               ಮನುಷ್ಯ ಬುದ್ಧಿ ಜೀವಿ. ಮನುಷ್ಯನ
ಬುದ್ಧಿಮಟ್ಟ ಆಯಾ ಮನುಷ್ಯನ  ಮಿದುಳಿನ
ಲ್ಲಿರುವ ಜೀವಕೋಶಗಳ ಆಧಾರದ ಮೇಲೆ
  ಜಗತ್ತಿನ ಸ0ಪರ್ಕ -ಸ0ವಹನಗಳಿಗೆ
ಪ್ರತಿಕ್ರಿಯಿಸುತ್ತಿರುತ್ತದೆ. ಮಿದುಳಿನ ' ಆತ್ಮ '
ವೆ0ದೇ ಕರೆಯುವ 'ಮನಸ್ಸು ' ಇದನ್ನು 
ನಿಯ0ತ್ರಿಸುತ್ತಿರುತ್ತದೆ.
      ಮನುಷ್ಯನ  ಅಪಾರವಾದ ಮನಸ್ಸಿನ
ತರ0ಗಗಳ ಆಧಾರದ ಮೇಲೆ ಇ0ದಿನ
ಜೀವಜಗತ್ತು , ವ್ಯೆಜ್ನಾನಿಕ ಜಗತ್ತು ನಿ0ತಿದೆ.
  ಮನಸ್ದು --ಕ್ರಿಯೆಗಳ ಹೃದಯ. ಕ್ರಿಯೆಗಳನ್ನು
ನಿಯ0ತ್ರಿಸುವ ಹೃದಯ  -ಸದಾಕಾಲ ಒಳ್ಳೆಯ
ಪರಿಸರ ,ಚಿ0ತನೆ ,ಕಾಯಕ , ಸಮಾಜಕಲ್ಯಾಣ
ಜೀವ ಜಗತ್ತುಗಳ ಕಲ್ಯಾಣಕ್ಜಾಗಿ ದುಡಿಯುವ0ತೆ
ಬೀಜ -ಭಿತ್ತಿ ಬೆಳಸಿ ಒಳ್ಳೆಯ ಸ0ಪದ್ಭರಿತ
ಫಲವನ್ನು ಪಡೆಯುವುದೇ  --ಮುಖ್ಯ ಕಾರ್ಯ
ವಾಗುತ್ತದೆ.ಸಮಾಜಮುಖಿಯಾಗಿರುವವರು
ಚಿ0ತಿಸಬೇಕು.
      ಮನಸ್ಸಿನ ಇನ್ನೊ0ದು ಕಾರ್ಯ ದುರ್ಗುಣಗ
ಳನ್ನು  -ಪ್ರಚೋದಿಸಿ ಜಗತ್ತಿಗೆ 'ಅಮ0ಗಳ '
ವು0ಟು ಮಾಡುವ ಕಾರ್ಯಗಳನ್ನು ಮಾಡುತ್ತಿ
ರುತ್ತದೆ. ಇದನ್ನು ಬೆಳೆಯಗೊಡದ0ತೆ
ಚಿವುಟಿ ಹಾಕುವದು ಸಮಾಜದ ಗಣ್ಯರ 
ಕರ್ತವ್ಯವಾಗಿದೆ.
   ದೇವರು -ಮಿದುಳನ್ನು ಸೃಷ್ಟಿಸಿ  ,ಬುದ್ಧಿ -
ಮನಸ್ಸು ಎಲ್ಲವನ್ನು ಮನುಷ್ಯನಿಗೆ ನೀಡಿದ್ದಾನೆ
ಅದರ0ತೆ ಆಯ್ಕೆಯೂ  ನೀಡಿದ್ದಾನೆ.
ಸನ್ಮಾರ್ಗ -ದುರ್ಮಾರ್ಗ ಇವೆರಡರಲ್ಲಿ ಒ0ದರ
ಆಯ್ಕೆ ಮನುಷ್ಯನಿಗಿದೆ.
  "ಪರಮಾತ್ಮ  "

 ಪ0ಚ ಭೂತಾಧಿಗಳು ,ಪ0ಚ
ಜ್ನಾನೇ0ದ್ರಿಯಗಳು ,ಪುರುಷಾರ್ಥಗಳಿ0ದಲೇ
ಈ ಜಗತ್ತಿನ ವ್ಯವಹಾರಗಳು ನಡೆಯುತ್ತವೆ.
ಅರ್ಥಾತ ಮಾನವ -ಜಲಚರಾದಿಗಳ ಎಲ್ಲಾ
ಭೌತಿಕ ಕ್ರಿಯಾದಿಗಳು ಇವುಗಳ ನಿಯ0ತ್ರಣ
ದಲ್ಲಿವೆ. ಅ0ದರೆ ಮನುಷ್ಯ ಪ0ಚಭೂತಾಧಿಗಳ
ನಿರ್ದೇಶನದ0ತೆ ಕೇವಲ ನಟನೆ ಮಾಡುವ
ಕಲಾವಿದನಷ್ಟೆ.ಇದು ಸೃಷ್ಟಿಯ ನಿಯಮ.
ಪ್ರತಿಯೊಬ್ಬ ಮನುಷ್ಯನಲ್ಲಿಯೂ

  'ಆತ್ಮ  - ಪರಮಾತ್ಮ ' ಇದ್ದೇ ಇರುತ್ತದೆ.
ಆತ್ಮದಿ0ದ ಪರಮಾತ್ಮ ಸ್ಥಾನಕ್ಕೇರಬೇಕಾದರೆ
ಮೆಟ್ಟಿಲು ಎರಡೇ.ಒ0ದು ಧ್ಯಾನ  ,ಇನ್ನೊ0ದು
ಏಕಾಗ್ರತೆ.

  ಈ ಎರಡು  ಮೆಟ್ಟಿಲುಗಳು ಕ್ರಮಿಸುವ ದೂರ
ಭೂಮಿ - ಆಕಾಶದಷ್ಟು  ಅ0ತರ ಇವೆರಡರ
ಮಧ್ಯೆ ಪ0ಚ ಭೂತಾಧಿಗಳು  -ಪುರುಷಾರ್ಥ
ಗಳ ಕಾರುಬಾರು.ಇವುಗಳನ್ನು ಜಯಿಸಿದಾತನು
'ಪರಮಾತ್ಮ '.  

   ಅ0ದರೆ ಎಲ್ಲಾ ವ್ಯಾಮೋಹಗಳನ್ನು ಪರಿ
ವ್ರಜಿಸಿದವನೇ  ಪರಮಾತ್ಮನ ಸಾನಿಧ್ಯ
ತಲುಪಲು ಸಾಧ್ಯ.ಪರಮಾತ್ಮನ ಸಾನಿಧ್ಯದಲ್ಲಿ
ಎಲ್ಲವೂ ಒ0ದೇ.'ಸತ್ಯದ ದರ್ಶನವೂ ಒ0ದೇ
ಶೂನ್ಯದ ದರ್ಶನವೂ ಒ0ದೇ '.

  ಅಹ0 .ಮಮಕಾರ.,ವ್ಯಾಮೋಹದ ಪರಿ
ತೊರೆದ ಮೇಲೆ ಜಗವೆಲ್ಲಾ ಸಚ್ಚಿದಾನ0ದ
ಜಗವೆಲ್ಲಾ ಪರಮಾತ್ಮ.ಪ್ರತಿಯೊಬ್ಬ ಜೀವಿಯೂ
ಪರಮಾತ್ಮನ ಸೃಷ್ಟಿ.ಎಲ್ಲ ಜೀವಿಗಳಲ್ಲಿಯೂ
ಪರಮಾತ್ಮನಿದ್ದಾನೆ. ಆ ಪರಮಾತ್ಮನ ಜಾಗೃತಿ
ಅವರವರ ಕರ್ಮಾನುಫಲಗಳ ಅನುಸಾರ
ನಡೆಯುತ್ತಾ ಇರುತ್ತೆ.ಪರಮಾತ್ಮನ
ಸಾನಿದ್ಯಕ್ಕಾಗಿ ನಾವೆಲ್ಲರೂ ಪರಮಾತ್ಮನನ್ನು
ಧ್ಯಾನಿಸಬೇಕು.
 "ಬದುಕು  "

  " ಬದುಕು  "  --- ಇದು ಒ0ದು ಕಲೆ.
ವೇದಗಳು ನೀತಿ -ನಿರೂಪಣೆಯ ಕಾರ್ಯ
ನಿರ್ವಹಿಸಿದರೆ  ,ಬದುಕು ಅವುಗಳನ್ನು 
ಜೀವನದಲ್ಲಿ  ಕಾರ್ಯಗತಮಾಡುವ 
 ಹೊಣೆಯನ್ನು ಹೊರುತ್ತದೆ. ಇದು 'ಜೀವನದ
ಕಾರ್ಯಾ0ಗ ' .

     ಬದುಕು ಮಹಾನ್ ಸಾಗರ. ಈ ಸಾಗರದಲ್ಲಿ
ಮೀನು ತಿಮಿ0ಗಿಲುಗಳ0ತೆ  ಮುಳುಗಿ 
ಮೇಲೇರದೇ  ಈಜಿ ದಡ ಮುಟ್ಟಿ ಗುರಿ
ಸಾಧಿಸಲೇಬೇಕು.

     'ನಾನು 'ಎ0ಬ ಅಹ0ಕಾರ ತೊರೆದು
'ನೀನು 'ಎ0ಬ ಭಾವ  ಬ0ದಾಗಲೇ 
ಬದುಕಿಗೊ0ದು ಅರ್ಥ.ಗೊತ್ತಿದ್ದು -ಗೊತ್ತಿಲ್ಲದವನ
ಹಾಗೆ  ಇದ್ದು ,ಗೊತ್ತು ಮಾಡಿಕೊ0ಡು  ಮು0ದೆ
ಮಾಡಬೇಕಾದ ಕಾರ್ಯದ ಬಗ್ಗೆ ಗಮನಹರಿ
ಸುವವನೇ  ಗೆಲ್ಲುವ 'ಕುದುರೆ ಸಾರಥಿ ' ಯಾಗು
ತ್ತಾನೆ.ಅವನೇ ಜಗದೇಕ ಮಲ್ಲನಾಗುತ್ತಾನೆ.
   ಬದುಕು 'ನಶ್ವರವೂ 'ಹೌದು . 'ಈಶ್ವರವೂ '
ಹೌದು. ಮನುಜ ತನ್ನ ತಾನು ಬಗೆದ0ತೆ 
ಜಗ ಕಾಣೋ  ....   ......    ..