" ಮೂಲಭೂತ ಸೌಕರ್ಯ "
ಮನುಷ್ಯನಿಗೆ ಮಲಗಲು ಒ0ದಿಷ್ಟು ಜಾಗ,
ತೊಡಲು ಬಟ್ಟೆ ,ಹೊಟ್ಟೆಗೆ ಮೂರೊತ್ತು
ಊಟ. ಇವು ಮನುಷ್ಯ ಜೀವಿಸಲು ಬೇಕಾದ
ಕನಿಷ್ಟ ಅಗತ್ಯ ಸೌಲಭ್ಯಗಳು.
ನಮ್ಮ ಸ0ಸಕೃತಿಯಲ್ಲಿ ಇವುಗಳಿಗೆ ಬಹಳ
ಪ್ರಾತಿನಿಧ್ಯ.ಇವು ನಮ್ಮ ರಾಷ್ಟ್ರೀಯ ನೀತಿಗಳು
ಹೌದು. "ರೋಟಿ ಕಪಡಾ ಔರ ಮಕಾನ "
ಅ0ತಾ ಹೇಳ್ತಿವಿ.ಹಳ್ಳಿಗಳಿ0ದಲೇ ಆವೃತವಾದ
ನಮ್ಮ ದೇಶ. ಒಕ್ಕಲುತನ ಪ್ರಧಾನ ದೇಶ.
ಈಗಲೂ ನಮ್ಮಲ್ಲಿಯ ರಾಜಕೀಯ ಪಕ್ಷಗಳು
ಗರೀಬಿ ಹಠಾವೋ ,ಮಕಾನ್ ಬನಾವೋ ,
ಕಪಡಾ ಲಾವೋ ,ಇವು ಪ್ರಣಾಳಿಕೆಗಳು.
"ಅನ್ನಮಯ ಶರೀರರ0 ". ಈ ಶರೀರ
ಪೋಷಣಗೆ ಅನ್ನಒ0ದಿದ್ದರೆ ಪೋಷಣೆಯಾಗು
ತ್ತದೆ. ಅದಕ್ಕೆ ನಮ್ಮ ಹಿರಿಯರು ಯಾವಾಗಲೂ
"ಅನ್ನದಾನಕ್ಕಿ0ತ ಶ್ರೇಷ್ಟ ದಾನ ಮತ್ತೊ0ದಿಲ್ಲ
ಅ0ತಾ ಹೇಳ್ತಾರೆ.ಎಲ್ಲಿಯೆ ನೀವು ಹೋಗಿ
ಜಾತ್ರೆ,ಜಯ0ತಿ ,ಉತ್ಸವ ಏನಾದರೂ
ಇದ್ದರೆ ಅಲ್ಲಿ ಅನ್ನ ಸ0ತರ್ಪಣೆ ಇದ್ದೇ ಇರುತ್ತೆ.
ಈ ಒ0ದು ತತ್ವದ ಆಧಾರದ ಮೇಲಿ0ದ
ನಮ್ಮಲ್ಲಿ ಬಹುತೇಕ ದೊಡ್ಡ ದೊಡ್ಡ ಮಠಗಳಲ್ಲಿ
ಸ0ಸ್ಥಾನಗಳಲ್ಲಿ ಈಗಲೂ ಅನ್ನ ಸ0ತರ್ಪಣೆ
ಇರುತ್ತದೆ. ತುಮಕೂರಿನ ಸಿದ್ಧಲಿ0ಗ
ಮಹಾಸ್ವಮಿಗಳ ನಿತ್ಯ ದಾಸೋಹ ರಾಜ್ಯಕ್ಕೆ
ಪ್ರಸಿದ್ದವಾದದ್ದು. ಅಲ್ಲಿ ಸಾವಿರಾರು ವಿಧ್ಯರ್ಥಿಗಳು
ವ್ಯಾಸ0ಗ ಮಾಡ್ತಾರೆ. ಅನ್ನದಾನ ಹೇಗೆ
ಶ್ರೇಷ್ಟವೋ ಹಾಗೆ ವಿಧ್ಯಾ ದಾನವು ಶ್ರೇಷ್ಟ.
ತುಮಕೂರು ಮಠ ಎರಡರಲ್ಲಿಯೂ ಪ್ರಸಿದ್ದಿ
ಪಡೆದಿದೆ. ಇಲ್ಲಿ ಕಲಿತ ವಿಧ್ಯಾರ್ಥಿಗಳು ಕೆಲವರು
ಲೋಕ ಪ್ರಸಿದ್ಧರಾಗಿದ್ದಾರೆ.
ನೀವು ನಿಮ್ಮಬಳಿಇದ್ದ 10 ರೂ ಕೊಡಿ.
ಆದರೆ ಅದುಒ0ದು ಹಿಡಿ ಅನ್ನಕ್ಕೆ ಸಮಾನವಾದ
ಸ0ತೋಷನ ತರಲ್ಲ. ಅದಕ್ಕೆ ನಿಮ್ಮಲ್ಲಿ
ಏನಾದರೂ ಮಿಕ್ಕಿದ್ದರೆ ಅದನ್ನು ದಾನಮಾಡಿ
ಪುಣ್ಯ ಕಟ್ಟಿಕೊಳ್ಳಿ ಅ0ತಾ ಹೇಳೋ ರೂಡಿ
ಇದೆ. ಅದೇರೀತಿ ಮನುಷ್ಹ್ಯ ನಿಗೆ ಮರ್ಯಾದೆ
ಮುಖ್ಯ. ನಾವು ಉಪವಾಸ ಇದ್ದರೂ ಪರವಾಯಿಲ್ಲ.
ಆದರೆ ಮಾನ ಮುಚ್ಚಲಿಕ್ಕೆ
ತು0ಡು ಬಟ್ಟೆ ಬೇಕೆ ಬೇಕು. ಅದರೆ ವಸ್ತ್ರ
ಇದನ್ನು ದಾನ ರೂಪದಲ್ಲಿ ಕೊಡುವದು ಬಹಳ
ಕಡಿಮೆ.ದಾನ ಕೊಟ್ಟ ವಸ್ತ್ರ ಮರ್ಯಾದೆ
ಮಾನ ಕಾಪಾಡತ್ತಾದರೂ ನಾವು ಭಾರತೀಯರು
ಅದನ್ನು ತನ್ನ ಗ0ಡ ,ಅಥವಾ ತನ್ನ ಕುಟು0ಬ
ಸ0ಪಾದಿಸಿದ್ದೇ ಆಗಿರಬೇಕು ಎ0ದು ಬಯಸು
ತ್ತಾರೆ.ಮ್ಯೆಮೇಲೆ ಒಡವೆ ಇಲ್ಲದಿದ್ದರೂ
ಪರವಾಯಿಲ್ಲ. ಬಟ್ಟೆ ಬೇಕು ಆದೇರೀತಿ
ಹೆಣ್ಣಿಗೆ ತಾಳಿ ಬೇಕು.ಅದು ಮಾನ
ಮರ್ಯಾದೆಯ ಸ0ಕೇತ. ಇವೆರಡಿದ್ದರೆ
ಮು0ದೆ ಜೀವಿಸಲಿಕ್ಕೆ ತನ್ನ ಕುಟು0ಬಕ್ಕೆ
ಒ0ದು ನೆಲೆ ಬೇಕು ಬೇಕು. ಅದಕ್ಕಾಗಿ
ಗೇಣು ಭೂಮಿ ಬೇಕು.ಈಭೂಮಿ ಸ್ವ0ತಾದರೆ
ಪರವಾಗಿಲ್ಲ ,ಭಾಡಿಗೆ ಆಧಾರದ ಮೇಲಾದರೂ
ಬೇಕು. ಕೆಲವೊ0ದು ಕುಟು0ಬಗಳಿಗೆ ಯಾವ
ಆಶ್ರಯಗಳು ಇರುವದಿಲ್ಲ.ಅವರು ರೇಲ್ವೆ
ಪ್ಲಾಟಫಾರ್ಮ ,ಊರ ಧರ್ಮ ಶಾಲೆಯೋ
,ಛತ್ರನೋ ,ಇಲ್ಲವೇ ಬಯಲು ಪ್ರದೇಶದಲ್ಲಿ
ತಾತ್ಪೂರ್ತಿಕ ಗುಡಿಸಲು ಹಾಕಿಕೊ0ಡು
ವಾಸ ಮಾಡ್ತಾರೆ.
ಇದನ್ನು ಮನಗ0ಡು ಸರಕಾರಗಳು ಮೂ
ಲಭೂತ ಸೌಕರ್ಯಗಳನ್ನು ಎಲ್ಲರಿಗು
ಸಿಗುವ0ತೆ ವ್ಯವಸ್ಥೆ ಮಾಡ್ತಾ ಇದೆ.
ಆದರೆ ಸರಕಾರದ ಸೌಲಭ್ಯಗಳ ಜೊತೆಗೆ
ನಾವು ಕೂಡಾ ನಮ್ಮ ಪರಿಶ್ರಮ ದಿ0ದ ದುಡಿಯೋದು ಅಗತ್ಯವಿದೆ
ನಾವು ದುಡಿದದ್ದು ಎಷ್ಟೇ ಇರಲಿ ಅದರ ಸ0ಪೂ
ರ್ಣ ಹಕ್ಕು ಅವನದ್ದಾಗಿರುತ್ತದೆ.
ನಮ್ಮ ಶಾಸ್ರ್ತಗಳಲ್ಲಿ ಇವೆಲ್ಲವುಗಳಿಗೆ ಮೊದಲ
ಅಧ್ಯತೆ ಇದೆ.