Tuesday, May 10, 2016

 "   ಧ್ಯಾನ  "  

ಧ್ಯಾನ ಮತ್ತು ತಪಸ್ಸು ಮನಸ್ಸನ್ನು
ಏಕಾಗ್ರತೆಯಲ್ಲಿಡುವ ಸಾಧನಗಳು.

   ತಪಸ್ಸು ದೀರ್ಘಾನುಅವಧಿಯವರೆಗೆ ಅ0ದರೆ
ವರ್ಷಾನುಗಟ್ಟಳೆ ಅರಣ್ಯ ,ತಪ್ಪಲು ಪ್ರದೇಶ ,
ಪರ್ವತಪ್ರದೇಶಗಳಲ್ಲಿ ಮಾಡುವ0ತಹದ್ದು.
ಯಾವುದೇ ಒ0ದು ಬೇಡಿಕೆ ಅಥವಾ ಅನುಗ್ರಹ
ಕ್ಕಾಗಿ,ಲೋಕಕಲ್ಯಾಣಕ್ಕಾಗಿ ,ವ್ಯಯಕ್ತಿಕವಾಗಿ
ಆಗ್ರಹವನ್ನು ಪೂರಯಿಸಿಕೊಳ್ಳುವ ಸಾಧನ
ತಪಸ್ಸು.ಪುರಾಣಗಳಿ0ದ ತಿಳಿದು ಬರುತ್ತದೆ.
     
 ಈಗಲೂ ಮನಃ ಶಾ0ತಿಗಾಗಿ ಪರ್ವತ 
ಪ್ರದೇಶ ,ಅರಣ್ಯ ಪ್ರದೇಶಕ್ಕೆ ಹೋಗುವ 
ಜನರಿದ್ದಾರೆ. ಜನರ ಸ0ಖ್ಯೆಯೂ ಕಡಿಮೆ. ತಪ
ಸ್ಸನ್ನಾಚರಿಸುವವರ ಸ0ಖ್ಯೆಯು ಕಡಿಮೆ.
   
 ಧ್ಯಾನ ಇದೊ0ದು ಸರಳ ಮಾರ್ಗ. ನಾವು
ಎಲ್ಲಿ ಬೇಕಾದರು ಧ್ಯಾನ ಮಾಡಬೇಕೆ0ದು ತೋ
ಚಿದಾಗ ಧ್ಯಾನ ಮಾಡಬಹುದು. ಎಷ್ಟೇ ಅವಧಿಗಾ
ದರೂ ಮಾಡಬಹುದು. ಇದಕ್ಕೆ ಶುಚಿತ್ವ ,ಮಡಿ
ಪಡಿ ನಿರ್ಭ0ಧಗಳಿಲ್ಲ. ಧ್ಯಾನದ ಉದ್ಧೇಶ 
ಮನಸ್ಸನ್ನು ಪ್ರಾಪ0ಚಿಕ ಕಾರಣಗಳಿ0ದ ಜರ್ಜ್
ರಿತವಾಗದ0ತೆ ,ಮನಸ್ಸನ್ನು ಕ್ರೋಧಪರವ
ಶವನ್ನಾಗಿ ಮಾಡದ0ತೆ ತಡೆಯುವ ಸಾಧನ.
ಈಗ ಸರ್ವೇ ಸಾಧಾರಣ ಎಲ್ಲಾ ಯೋಗ 
ಶಿಬಿರಗಳಲ್ಲಿ ಧ್ಯಾನದ ಪಾಠಗಳನ್ನು ಕಲಿಸು
ತ್ತಾರೆ.ದ್ಯಾನದಲ್ಲಿಯೂ ಶ್ರದ್ಧೆ ಇರಬೇಕು. ಇಲ್ಲಿ
ಯಾವುದೇ ಆಗ್ರಹಗಳಿರುವದಿಲ್ಲ.ಕೇವಲ 
ಮನಃಶಾ0ತಿಗಾಗಿ ,ಮನಸ್ಸನ್ನು ಸ್ಥಿಮಿತದಲ್ಲಿ
ಡಲು ಮಾಡವ0ತಹ ಸಾಮಾನ್ಯ ಮಿದುಳಿನ
 ಕ್ರಿಯೆ. ಇದರಿ0ದ ಮಾನಸಿಕ ಚಿಕಿತ್ಸೆ ,ಕಾಹಿಲೆಗ
ಳನ್ನು ತಡೆಯಬಹುದು. 10--15 ನಿಮಿಷದಿ0ದ
ಘ0ಟೆಗಟ್ಟಳೆ ಧ್ಯಾನ ಮಾಡುವವರಿದ್ದಾರೆ. 

 ಇದು ಮನಸ್ಸನ್ನು  ಶಾ0ತಗೊಳಿಸುತ್ತದೆ.
ಸ0ತೋಷಗೊಳಿಸುತ್ತದೆ.ಮನುಷ್ಯ ಪ್ರಫುಲ್ಲಿತ.ನಾಗಿ
  ದಿನವಿಡಿ ಎಲ್ಲಾ ಚಟುವಟಿಕೆ 
ಗಳನ್ನು  ಆಸಕ್ತಿಯಿ0ದ  ಸ0ತೋಷದಿ0ದ ಮಾ
ದುತ್ತಾನೆ ಸ0ತೋಷದಿ0ದ ಕಾಲ ಕಳೆಯುತ್ತಾನೆ.
ಧ್ಯಾನದಲ್ಲಿಯೂ ಕ್ರಮ ಬದ್ಧತೆ ಇರುತ್ತದೆ. ಪಾಲಿಸಬೇಕು
"ಮನಸ್ಸಿನಲ್ಲಿ ದೇವರನಾಮ
ಬಾಯಲ್ಲಿ ಸಿನೆಮಾತಾರೆಯರ ನಾಮ ".
ಇದು ಸಲ್ಲದು.ಇದು ಧ್ಯಾನಕ್ಕೆ ಅಪಚಾರ.
ಇದರಿ0ದ ಕೆಡುಕೇ ಜಾಸ್ತಿ.

No comments: