ಅವಕಾಶ
ಅಭಿಪ್ರಾಯಕ್ಕೆ ಭಿನ್ನ ಅಭಿಪ್ರಾಯ ಇರತಾವ.
ವಿಷಯಕ್ಕೆ ಹಲವಾರು ಕಾರಣಗಳಿರುತ್ತವೆ.
ಬೆ0ಕಿ ಇಲ್ಲದ ಹೊಗಿ ಆಡುದಿಲ್ಲ.
ಮನಸ್ತಾಪ.,ಗುದ್ದಾಟ ಜಗಳ ಎಲ್ಲ ಕಡೆಗೂ ಇರತಾವ.
ಇದಕ್ಕ ಪರಿಹಾರನೂ ಇರತಾವ.
ತಾಳ್ಮೆ ಇರಬೇಕು.
ಒಬ್ಬವ ಏನ್ ಹೇಳ್ತನ ಅನ್ನೋದು ಕೇಳಬೇಕು.
ಆಮೇಲೆ ವಾದ ಮಾಡಬೇಕು.
ಇದು ವಿಚಾರ.ಆದರ ಹಳ್ಯಾಗ ನಡೆಯೋದಿಲ್ಲ.
ಯಾವ ಪ್ರಭಾವಿ ಇರತಾನ ಅವನದ ನಡಿತ್ಯೆತೆ.ಇದು ತಪ್ಪು.
ಇಲ್ಲಿ ಅಮಾಯಕರು ಬಲಿಯಾಗತಾರ.
ಪ್ರತಿವಾದಿ ಆರೋಪಿಗೆ ಅವಕಾಶ ಕೊ ಡಬೇಕು.
ನ್ಯಾಯಕ್ಕೆ ಮಾನ್ಯತೆ ನೀಡಬೇಕು.
ಇದು ಪದ್ಧತಿ.
ಆದರ ಇವರು ಕೋರ್ಟ್ ಗೆ ಹೋದರ ಅಲ್ಲೆ
ತಾಸಗಟ್ಟಳೆ ನಿ0ದರತಾರ.ಅಲ್ಲೆ ಇವರಿಗೆ ಕೇಳೋರೆ ಇರೋದಿಲ್ಲ.
ಯಾವದೇ ವಿಷಯ ಇರಲಿ ಅದು ಬಡವ
ಬಲ್ಲಿದನಿಗೆ ಸ0ಭ0ಧ ಪಟ್ಟಿದ್ದೇ ಇರಲಿ.
ನ್ಯಾಯ ನ್ಯಾಯ ಅವಕಾಶಗಳಿರಬೇಕು.
No comments:
Post a Comment