Monday, May 16, 2016

 "  ಹುಚ್ಚ ಮನಸ್ಸು  "

ಹುಚ್ಚ ಮನಸ್ಸ ಪಾತರಗಿತ್ತಿಹಾ0ಗ ಹಾರಾಡತದ.
ದಶೆ ಇಲ್ಲ.ದಿಕ್ಕು ಇಲ್ಲ. ಯಾಕ0ದರ ಇ0ತಹ ಮನಸ್ಸಿನ ಮದರ0ಗಿ
ನಾಟಕ ಹೆಚ್ಚಾಗಿ ಹದಿ ಹರೆಯದ ಗ0ಡು ಹೆಣ್ಣಿ
ನಲ್ಲಿ ಇರತಾವ. ಏನೇನರ ಲೆಖ್ಖ ಹಾಕಿರತಾವ.
.ಕೋಟಿಗಟ್ಟಳೆ ಮಾತಾಡ್ತಾರ ಕಿಶೆದಾಗ 10
ಪ್ಯೆಸಾ ಇರದಿಲ್ಲ. ಎಲ್ಲಾ ಪಕ್ಷದೋರ ತನ್ನ
ಕಿಸೆದಾಗ ಅ0ತಾ ಹೇಳ್ತಾರ ,ಆದರ ಅವರ
ಪರಿಚಯನ ಇವರಿಗೆ ಇರೂದಿಲ್ಲ.ತಮ್ಮ ವಾರ
ಗಿತ್ತಿಯವರ ಸಿಕ್ಕರ ಸಾಕು ,ಬರೀ ಖಾಲಿ 
ಲಲ್ಲಿ ಪ್ರಸ0ಗ ಮಾತ. ಉಗುಳ ಡಬ್ಬಿ ಬಿಡ
ಮಾತ.ಯಾವದು ಖರೇ ಇರಾ0ಗಿಲ್ಲ. ಇವರಲ್ಲಿ
ಕೆಲವರು ರಾಜೇಶಖನ್ನ -ಹೇಮಮಾಲಿನಿ
ಟ್ಯೆಪ ಮಾತಾಡ್ತಾರ.ಕೆಲವರು ಡ್ರೆಸ್ಸಿ0ಗ್ ಮಾಡದರಾಗ ,
ಕೆಲವರು ಶೋಕಿ ಮಾಡದರಾಗ
ಇನ್ನ ಕಲವರು ಬರೀ ಮಾತಾಡದರಾಗ ಹೀ0ಗ
ಇದು  ಹುಚ್ಚ ಮನಸ್ಸಿನ  ಹತ್ತಾರು ಮುಖ.
ಇದನ್ನ ನೆಚ್ಚಿಕೊ0ಡು ಯಾವುದನ್ನ ಲೆಖ್ಖ 
ಹಾಕಬಾರದು.ಯಾವಾಗ ಅವ ತಾಳಿ  ಕಟ್ಟಿದ
ಆವಾಗಲಿ0ದ ಪಕ್ಕಾ ಲೆಖ್ಖ ಶುರು. ಅಲ್ಲಿತನಕ 
 ಹರಿಯೋ ನೀರು ಹರಿತಾ ಇರಬೇಕು. ಕಟ್ಟಿ 
ಹಾಕಬಾರದು.ಕಟ್ಟಿ ಹಾಕಿದರ ಲುಕ್ಸಾನ ಜಾಸ್ತಿ

No comments: