Thursday, May 26, 2016

ಕಾವ್ಯ -ಎರಡು ಮಾತು.


      ಯಾವ ಕಾವ್ಯಗಳಲ್ಲಿ ನವರಸಗಳಿರುತ್ತ
ವೆಯೋ ,ಅದು ಪರಿಪೂರ್ಣ ಕಾವ್ಯವೆನಿಸುತ್ತದೆ..
ಹಿರಿಯರು ಹೇಳಿದ ಮಾತು ಇಲ್ಲಿ 
ಜ್ನಾಪಕೆ ಬರುತ್ತದೆ.ನವರಸಗಳೇ ಜೀವನ.
ಜೀವನಕ್ಕೆ ಹತ್ತಿರವಾಗುವ0ತಹ ಭೂತ,ವರ್ತ
ಮಾನದ ಆಗುಹೋಗುಗಳ ಘಟನೆಗಳೇ
ಸಾಹಿತ್ಯಕ್ಕೆ ಮೂಲ ಆಶಯ.ಕಲ್ಪನಾವಿಹಾರದಲ್ಲಿ
ತೇಲುವ ಭವಿಷ್ಯತ್ , --ಇದು ಕವಿಯ ಕಲ್ಪನಾ
ಸಾಮರ್ಥಕ್ಕೆ ಬಿಟ್ಟ ವಿಚಾರ.
  ಮಹಾನ್ ಕಾವ್ಯ -ಮಹಾನ್ ನವರಸಗಳ 
ಚೇತನ.ನವರಸಗಳ ಬಗ್ಗೆ ಎಷ್ಟು ಧೀರ್ಘವಾಗಿ
ಅಧ್ಯಯನ  ಮಾಡುತ್ತೇವೆಯೋ  ,ಅಷ್ಟೊ0ದು
ಕಾವ್ಯ ಪರಿಪೂರ್ಣವಾಗಿರುತ್ತದೆ.ವ್ಯೆಚಾರಿಕ 
ಲೇಖನಗಳು ಅಷ್ಟೆ.ಪೌರಾಣಿಕ ,ಸಾಮಾಜಿಕ
ಧಾರ್ಮಿಕ.ಐತಿಹಾಸಿಕ.ರಾಜನೀತಿ
 ಯಾವುದೇರ0ಗಗಳಿರಲಿ ,ಅಲ್ಲಿಯ ಘಟನೆಗಳು
ಓದುಗನಿಗೆ ಹೃದಯಸ್ಪರ್ಶಿಯಾಗಿದ್ದರೆ ಅದೇ
ಶ್ರೇಷ್ಟ ಕಾವ್ಯ ಎನಿಸುತ್ತದೆ.
ನಾನು ವೃತ್ತಿಯಿ0ದ ಸಾಹಿತಿ ಅಲ್ಲ.ನನಗೆ ಗೊತ್ತಿದ್ದು ಹೇಳಿದೆ ಅಷ್ಟೆ.

No comments: