"ತಾತ "
ತಾತ ... ತಾತ....
ನೀನು
ನಮಗಾಗಿ
ಸ್ವಾತ0ತ್ರ್ಯವನ್ನು ತ0ದುಕೊಟ್ಟೆ .
ಹಗಲು
ಇರುಳುನ್ನೆದೇ
ಚರಕದಿ0ದ ನೂಲು ತೆಗೆದೆ .
ನೀ
ಪ್ರಾರ0ಭಿಸಿದ
ಸ್ವಯ0 ಉಧ್ಯೋಗ
ನಿನ್ನ
ನಾಡಲ್ಲೇ
ಅನಾಥವಾಗಿದೆ :ಕಾಡು ಸೇರಿದೆ ...
ವಿದೇಶಿಯೆ0ದು
ಯಾವುದನ್ನು
ನೀನು
ತ್ಯಜಿಸಿದ್ದೋ
ಅದು ಈಗ
ಪ್ರಸಿದ್ಧಿ ;ಪರ ಸಿದ್ಧಿ....
ನೀ
ಭೋಧಿಸಿದ
ಮೌಲ್ಯಗಳು ಸೊರಗಿವೆ
ಕತ್ತಲು ಕೋಣೆ ಸೇರಿವೆ...
ಎಲ್ಲಾ
ಭಾಗ್ಯಗಳು ಬ0ತು
ನಿನ್ನ
ಉದ್ಧರಿಸುವ
ಭಾಗ್ಯ ಬರಲಿಲ್ಲ....
ಹೇ ರಾಮ್..
ಜ್ಯೆ ರಾಮ..
ಸಬ್ಕೋ ಸನ್ಮತಿ
ದೇ ಭಗವಾನ...
ನಮಗಾಗಿ
ಮಿಡಿದೆ
ಬೆ0ದೆ
ನೊ0ದೆ
ಆದರೂ
ನಿನ್ನ ನೆನಪು ಪೂರ್ತಿ ಮಾಸಿಲ್ಲ...
ನೀನು
ಲಕ್ಷ್ಮಿಯನ್ನು ಒಲ್ಲೆಯೆ0ದೆ
ಲಕ್ಷ್ಮಿ ಬಿಡಲೊಳ್ಳಲು
ನಿನ್ನ ಮುದ್ರಾ ರೂಪದಲ್ಲಿ
ಇದೇ ನಮ್ಮ ಸೌಭಾಗ್ಯ.
ತಾತ ... ತಾತ...
ಇದೋ ನನ್ನ ನಮನ.
No comments:
Post a Comment